ಜನಪ್ರಿಯ ‘ಯಜಮಾನ’ ಸೀರಿಯಲ್ (Yajamana Serial) ನಟ ಗಜೇಂದ್ರ ಮರಸಣಿಗೆ (Gajendra Marasanige) ಅವರು ವೈವಾಹಿಕ ಜೀವನಕ್ಕೆ (Wedding) ಕಾಲಿಟ್ಟಿದ್ದಾರೆ. ಶ್ವೇತಾ ಜೊತೆ ನಟ ಹಸೆಮಣೆ ಏರಿದ್ದಾರೆ. ಮದುವೆಯ ಸುಂದರ ಫೋಟೋಗಳನ್ನು ನಟ ಸೋಷಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ಗಿಂತ ತೆಲುಗಿನಲ್ಲೇ ಹೆಚ್ಚಾಯ್ತು ಜಾನ್ವಿ ಕಪೂರ್‌ಗೆ ಡಿಮ್ಯಾಂಡ್- ಫ್ಯಾನ್ಸ್‌ಗೆ ಗುಡ್ ನ್ಯೂಸ್
ಶೃಂಗೇರಿಯ ಮುಂಡಗಾರು ಎಂಬ ಊರಿನಲ್ಲಿ ಸರಳವಾಗಿ ಶ್ವೇತಾ ಜೊತೆ ನಟ ಗಜೇಂದ್ರ ಅವರ ಮದುವೆ ನಡೆದಿದೆ. ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ಸಮಾರಂಭ ಮತ್ತು ಆರತಕ್ಷತೆ ಕಾರ್ಯಕ್ರಮ ನಡೆದಿದೆ. ಈ ಹೊಸ ಜೋಡಿಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ. ಇದನ್ನೂ ಓದಿ:ಬ್ರೇಕಪ್ ಬಳಿಕ ಮಹತ್ವದ ನಿರ್ಧಾರ ಕೈಗೊಂಡ ತಮನ್ನಾ ಭಾಟಿಯಾ
ಕಾಮಿಡಿ ಕಿಲಾಡಿಗಳು ಶೋ, ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಕಂಠಿ ಸ್ನೇಹಿತನ ಪಾತ್ರದಲ್ಲಿ ನಟಿಸಿದ್ದರು. ಅಣ್ಣ ತಂಗಿ, ಪಾರ್ವತಿ ಪರಮೇಶ್ವರ, ಪರಿಣಿತ, ಅನುಬಂಧ ಸೀರಿಯಲ್‌ಗಳಲ್ಲಿ ಗಜೇಂದ್ರ ನಟಿಸಿದ್ದಾರೆ. ರವಿಚಂದ್ರನ್ ನಟನೆಯ ಕ್ರೇಜಿಲೋಕ ಚಿತ್ರದಲ್ಲಿ ಪುಟ್ಟ ಪಾತ್ರವೊಂದರಲ್ಲಿ ನಟಿಸಿದ್ದರು.