ಬೆಂಗಳೂರು: ಯದುವಂಶದ ಕುಡಿ, ಯುವರಾಜನಿಗೆ ರಾಜಮಾತೆ ಪ್ರಮೋದಾದೇವಿ ಚೆಂದದ ಹೆಸರನ್ನು ಇಟ್ಟಿದ್ದಾರೆ. ಬೆಂಗಳೂರಿನ ಪ್ಯಾಲೇಸ್ ನಲ್ಲಿ ರಾಜಮಾತೆ ಪ್ರಮೋದ ದೇವಿ ಮುದ್ದು ಮೊಮ್ಮಗನಿಗೆ ಆದ್ಯವೀರ್ ನರಸಿಂಹ ರಾಜ ಓಡೆಯರ್ ಅಂತಾ ಹೆಸರಿಟ್ಟರು.
ಮೈಸೂರು ರಾಜಮನೆತನಕ್ಕೆ ರಾಜಕುಮಾರನ ಆಗಮನವಾದಾಗ ಇಡೀ ರಾಜ್ಯವೇ ಸಂಭ್ರಮ ಪಟ್ಟಿತ್ತು. ಇಂದು ಯದುವೀರ್ ತ್ರಿಷಿಕಾ ದಂಪತಿಯ ಮುದ್ದು ಕಂದನ ನಾಮಕರಣ ಸಮಾರಂಭದಲ್ಲಿ ರಾಜ ಕುಟುಂಬಸ್ಥರು ಭಾಗಿಯಾಗಿ ಯುವರಾಜನಿಗೆ ಶುಭ ಹಾರೈಸಿದರು. ಇನ್ನು ಮೈಸೂರು ಅರಮನೆ ಬಿಟ್ಟು ಬೆಂಗಳೂರು ಪ್ಯಾಲೇಸ್ ನಲ್ಲಿ ನಡೆದ ಸರಳ ನಾಮಕರಣ ಸಮಾರಂಭ ಎಲ್ಲರ ಹುಬ್ಬೇರಿಸಿತ್ತು. ಮಾಧ್ಯಮದವರಿಗೂ ಪ್ರವೇಶ ನಿರ್ಬಂಧಿಸಲಾಗಿತ್ತು. ಹತ್ತಿರದ ಸಂಬಂಧಿಗಳಷ್ಟೇ ಭಾಗಿಯಾಗಿದ್ರು.
ನಾಮಕರಣ ಪ್ರಯುಕ್ತ ಬೆಂಗಳೂರು ಪ್ಯಾಲೇಸ್ ಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ವಿದೇಶಿ ಪ್ರವಾಸಿಗರು ಸೇರಿದಂತೆ ನೂರಾರು ಜನ ಪ್ರವಾಸಿಗರು ನಿರಾಸೆ ಯಲ್ಲಿ ವಾಪಸು ತೆರಳಿದ್ರು. ಅತ್ಯಂತ ಸರಳವಾಗಿ ಯುವರಾಜನ ನಾಮಕರಣ ಸಮಾರಂಭ ನಡೆಯಿತು. ಆದ್ಯವೀರ್ ಯುವರಾಜ ಮೈಸೂರು ಸಂಸ್ಥಾನದ ಹೆಸರು ಉಳಿಸಿ ಬೆಳಸಲಿ ಎಂದು ಜನ ಹಾರೈಸಿದರು.