DistrictsKarnatakaLatestMysuru

ಅಪ್ಪನ ತೊಡೆ ಮೇಲೆ ಯುವರಾಜ – ವರ್ಧಂತಿಗೆ ಯದುವೀರ್ ವಿಶ್

ಮೈಸೂರು: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತನ್ನ ಮಗ ಯುವರಾಜ ಆಧ್ಯವೀರ್ ಗೆ ವರ್ಧಂತಿಯ(ಹುಟ್ಟುಹಬ್ಬ) ಶುಭಾಶಯವನ್ನು ಕೋರಿದ್ದಾರೆ.

ಯದುವೀರ್ ಅವರು ಫೇಸ್‍ಬುಕ್ ನಲ್ಲಿ ಮಗ ತೊಡೆಯ ಮೇಲೆ ಕುಳಿತಿರುವ ಫೋಟೋ ಹಾಕಿ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. ಫೋಟೋದಲ್ಲಿ  ಆಧ್ಯವೀರ್ ತುಂಟತನದಿಂದ ಕ್ಯಾಮೆರಾಗೆ ಪೋಸ್ ಕೊಟ್ಟಿರುವ ರೀತಿಯಲ್ಲಿ ಕಂಡು ಬಂದಿದೆ.

ಅರಮನೆಯ ಸಂಪ್ರದಾಯದ ಪ್ರಕಾರ ಹುಟ್ಟುಹಬ್ಬವನ್ನು ಆಧ್ಯವೀರ್ ಹುಟ್ಟಿದ ಸ್ವಲ್ಪ ದಿನಗಳ ನಂತರ ಆಚರಿಸಲಾಗುತ್ತದೆ. ಅದರಂತೆಯೇ ವರ್ಧಂತಿಯು ಡಿಸೆಂಬರ್ 26 ರಂದು ಇದ್ದರೂ ಇಂದು ಆಚರಿಸಿದ್ದಾರೆ. ಈ ಬಗ್ಗೆ ಯದುವೀರ್ ಅವರು ಫೇಸ್‍ಬುಕ್ ನಲ್ಲಿ ತಿಳಿಸಿದ್ದಾರೆ.

ಪೋಸ್ಟ್:
“ಯುವರಾಜ ಶ್ರೀ ಆಧ್ಯವೀರ್ ನರಸಿಂಹರಾಜ ಒಡೆಯರ್ ಅವರ ವರ್ಧಂತಿಯಂದು ಅವರಿಗೆ ಶುಭ ಕೋರುತ್ತೇವೆ. ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯು ಅವರಿಗೆ ಉತ್ತಮ ಆರೋಗ್ಯ ಹಾಗು ಐಶ್ವರ್ಯವನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇವೆ. ಯುವರಾಜರ ವರ್ಧಂತಿಯು 26 ಡಿಸೆಂಬರ್ 2018 ರಂದು ಇದ್ದರೂ, ಮೈಸೂರು ಅರಮನೆಯ ಸಂಪ್ರದಾಯದ ಪ್ರಕಾರ ಮೊದಲನೆಯ ವರ್ಧಂತಿಯನ್ನು ಹೆಚ್ಚಿಸುವ ಪದ್ಧತಿ ಇರುವುದರಿಂದ, ಅವರ ವರ್ಧಂತಿಯನ್ನು ಇಂದು ಆಚರಿಸಲಾಗುತ್ತಿದೆ” ಎಂದು ಬರೆದು ಮಗನ ಜೊತೆಯಿರುವ ಫೋಟೋ ಹಾಕಿ ಪೋಸ್ಟ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published.

Back to top button