ಮೈಸೂರು: ಪತ್ನಿ ತ್ರಿಷಿಕಾದೇವಿ ಒಡೆಯರ್ ಅವರ ಹೆಸರಿನಲ್ಲಿ ನಕಲಿ ಇನ್ ಸ್ಟಾಗ್ರಾಮ್ ಅಕೌಂಟ್ ತೆಗೆದಿರುವ ವಿಚಾರವನ್ನು ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗಂಭೀರವಾಗಿ ಸ್ವೀಕರಿಸಿದ್ದಾರೆ.
ಈ ವಿಚಾರ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ಹಿಂದೆಯೂ ಹಲವು ಬಾರಿ ನಕಲಿ ಅಕೌಂಟ್ ಕ್ರಿಯೇಟ್ ಮಾಡಿದ್ದರು. ಆದ್ದರಿಂದಲೇ ಈ ವಿಷಯವನ್ನು ಸೀರಿಯಸ್ ಆಗಿ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.
Advertisement
ಪತ್ನಿ ಹೆಸರು ಬಳಸಿಕೊಂಡು ಇನ್ ಸ್ಟಾಗ್ರಾಮ್ ನಲ್ಲಿ ಯಾರು ನಕಲಿ ಅಕೌಂಟ್ ತೆರೆದಿದ್ದಾರೆ ಎನ್ನುವುದು ಗೊತ್ತಿಲ್ಲ. ನಕಲಿ ಅಕೌಂಟ್ ತೆಗೆದಿರುವವರ ವಿರುದ್ಧ ಸೈಬರ್ ಕ್ರೈಂಗೆ ದೂರು ನೀಡೋದಾಗಿ ತ್ರಿಷಿಕಾದೇವಿ ನಿರ್ಧಾರ ಮಾಡಿದ್ದಾರೆ. ಈ ಕುರಿತು ಶೀಘ್ರದಲ್ಲೇ ಮುಂದಿನ ನಿರ್ಧಾರ ತಿಳಿಸುತ್ತೇವೆ ಎಂದರು.
Advertisement
ಆಗಿದ್ದು ಏನು?
ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ತ್ರಿಷಿಕಾದೇವಿ ಒಡೆಯರ್ ಹೆಸರಲ್ಲಿ ಫೇಕ್ ಇನ್ ಸ್ಟಾಗ್ರಾಮ್ ಖಾತೆಯನ್ನು ಕಿಡಿಗೇಡಿಗಳು ಓಪನ್ ಮಾಡಿದ್ದರು. ಈ ನಕಲಿ ಖಾತೆಯಿಂದ ಯದುವೀರ್ ಅವರಿಗೆ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಆಗ ತಕ್ಷಣ ಇದು ಫೇಕ್ ಅಕೌಂಟ್ ಎಂದು ಯದುವೀರ್ ಹೇಳಿದ್ದರು. ಇದೊಂದು ಫೇಕ್ ಅಕೌಂಟ್ ಯಾರು ಫಾಲೋ ಮಾಡಬೇಡಿ ಎಂದು ಮನವಿ ಮಾಡಿದ್ದರು. ತ್ರಿಷಿಕಾದೇವಿ ಒಡೆಯರ್ ಹೆಸರಲ್ಲಿ ಫೇಕ್ ಅಕೌಂಟ್ ಸೃಷ್ಟಿಯಾಗಿರೋದು ಇದೇ ಮೊದಲಲ್ಲ. ಈ ಹಿಂದೆಯೂ ಸಾಮಾಜಿಕ ಜಾಲತಾಣದಲ್ಲಿ ಇಂತಹ ಫೇಕ್ ಅಕೌಂಟ್ ಕ್ರಿಯೇಟ್ ಆಗಿದ್ದವು.
Advertisement
Advertisement