ಬೆಂಗಳೂರು: ಇಲ್ಲಿನ ಮಾರತ್ತಹಳ್ಳಿಯಲ್ಲಿರುವ ರೈನ್‌ಬೋ ಆಸ್ಪತ್ರೆಯಲ್ಲಿ (Rainbow Hospital) ಬರ್ತ್ ರೈಟ್ (Birth Right) ವಿಭಾಗವನ್ನು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಅವರು ಶುಕ್ರವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಅತ್ಯುತ್ತಮ ಆರೋಗ್ಯ ಸೌಲಭ್ಯ ನೀಡುವಲ್ಲಿ ರೈನ್ ಬೋ ಆಸ್ಪತ್ರೆಯು (Rainbow Hospital) ಸದಾ ಮುಂದಿದೆ. ಸಮುದಾಯಕ್ಕೆ ನೆರವಾಗುವ ರೈನ್ ಬೋ ಆಸ್ಪತ್ರೆಯ ಪ್ರಯತ್ನ ಶ್ಲಾಘನೀಯ. ಮೈಸೂರಿನ ಪ್ರತಿ ಅರಸರು ಸಹ ಮಹಿಳೆಯರು ಮತ್ತು ಮಕ್ಕಳಿಗೆ ಉತ್ತಮ ಆರೋಗ್ಯ ನೀಡಲು ಹೆಚ್ಚಿನ ಶ್ರಮವಹಿಸಿದ್ದರು. ಮೈಸೂರು ಸಾಮ್ರಾಜ್ಯದ ಸಂರಕ್ಷಕರಾಗಿ ಮಹತ್ತರ ಪಾತ್ರವಹಿಸಿದ ರಾಣಿ ಲಕ್ಷ್ಮಮ್ಮಣ್ಣಿ ಅವರನ್ನೂ ನೆನಪಿಸಿಕೊಳ್ಳಬೇಕಿದೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗ್ಳೂರು ಬಳಿ ಟಾಟಾ ಐಫೋನ್ ಉತ್ಪಾದನಾ ಘಟಕ – 60 ಸಾವಿರ ಮಂದಿಗೆ ಉದ್ಯೋಗ
Advertisement
Advertisement
ರೈನ್‌ಬೋ ಆಸ್ಪತ್ರೆಯು ಸ್ತೀಯರಿಗೆ (Women’s) ಹೆಚ್ಚಿನ ಸೌಲಭ್ಯಗಳನ್ನು ನೀಡುವ ಕಾಳಜಿ ಹೊಂದಿದೆ. ಸುಸಜ್ಜಿತ ವೈದ್ಯರ ತಂಡ, ಮಕ್ಕಳ ಆರೋಗ್ಯ ತಜ್ಞರನ್ನು ಒಳಗೊಂಡಿದೆ. ಆದಾಗ್ಯೂ ಚಿಕಿತ್ಸೆಗಿಂತ ಮುಂಜಾಗ್ರತವಾಗಿ ಉತ್ತಮ. ಅದಕ್ಕಾಗಿ ನಾವು ಮಕ್ಕಳಿಗೆ ಉತ್ತಮ ಆರೋಗ್ಯಕರ ವಾತಾವರಣ ನಿರ್ಮಿಸಬೇಕು ಎಂದು ಸಲಹೆ ನೀಡಿದರು.
Advertisement
ಈಗ ಉದ್ಘಾಟನೆಗೊಂಡಿರುವ ಬರ್ತ್ ರೈಟ್ ಮಹಡಿಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಕಾರ್ಯ ವಿಧಾನ ನಡೆಯಲಿವೆ. ಈ ಮಹಡಿ ವಾರ್ಡ್‌ಗಳೊಂದಿಗೆ ಆಧುನಿಕ ಓಟಿ ಮತ್ತು ಎಲ್ ಡಿಆರ್ ಸಂಕೀರ್ಣಗಳನ್ನು ಹೊಂದಿದೆ. ಸ್ಯೂಟ್ ಕೊಠಡಿ, ಡಿಲಕ್ಸ್ ಕೊಠಡಿ, ಖಾಸಗಿ ಕೊಠಡಿಗಳನ್ನು ಒಳಗೊಂಡಿವೆ. ಇದರ ಜೊತೆಗೆ ಈ ಮಹಡಿಯಲ್ಲಿ ನವಜಾತ ಶಿಶುವಿನ ಸ್ನಾನ ಗೃಹ ಹಾಗೂ ರೋಗಿಗಳ ವೇಟಿಂಗ್ ಲಾಂಗ್ ಸೌಲಭ್ಯತೆಗಳಿವೆ. ಇದನ್ನೂ ಓದಿ: 236 ಕೋಟಿ ರೂ.ಗಳಿಗೂ ಅಧಿಕ ವಿದ್ಯುತ್ ಶುಲ್ಕ ಬಾಕಿ – BWSSB, ಬಿಬಿಎಂಪಿಗೆ ಬೆಸ್ಕಾಂ ನೋಟಿಸ್
Advertisement
ಶಿಶುವೈದ್ಯಕೀಯ ತೀವ್ರ ನಿಗಾ ಸೇವೆಗಳ ಮುಖ್ಯಸ್ಥರಾದ ಡಾ.ರಕ್ಷಯ್ ಶೆಟ್ಟಿ ಮಾತನಾಡಿ, ನಾವು ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಹೆರಿಗೆ ಕೊಠಡಿ, ಆಧುನಿಕ ತಂತ್ರಜ್ಞಾನ, ಹೆಸರಾಂತ ಪ್ರಸೂತಿ ತಜ್ಞರು ಮತ್ತು 24*7 ತುರ್ತುಪರಿಸ್ಥಿತಿ ಸಹಾಯಕ, ಜೊತೆಗೆ ಮೂರನೇ ಹಂತ ಮತ್ತು ನಾಲ್ಕು ಎನ್ ಐಸಿಯು ಗಳಿರುವುದರಿಂದ ಯಾವುದೇ ಅಪಾಯದ ಹೆರಿಗೆ ಸಂದರ್ಭದಲ್ಲಿ ಮಗುವಿನ ಆರೈಕೆಯಲ್ಲಿ ತಡವಾಗುವುದಿಲ್ಲ ಎಂಬುದನ್ನು ಖಚಿತಪಡಿಸುತ್ತೇವೆ ಎಂದರು.
ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರ ವಿಭಾಗದ ಕ್ಲಿನಿಕಲ್ ಡೈರೆಕ್ಟರ್ ಡಾ.ಪ್ರವೀಣ್ ಶೆಣೈ ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ ಸ್ತ್ರೀರೋಗಗಳಿಗೆ ಚಿಕಿತ್ಸೆ ನೀಡುವುದರ ಜೊತೆಗೆ ಮಹಿಳೆಯರು ಯೋಗ ಕ್ಷೇಮ ಹಾಗೂ ಆರೋಗ್ಯವಂತರಾಗಿರಲು ಉತ್ತೇಜಿಸುತ್ತೇವೆ ಎಂದರು.
ಮಕ್ಕಳ ತಜ್ಞರ ವಿಭಾಗದ ಕ್ಲಿನಿಕಲ್ ಡೈರೆಕ್ಟರ್ ಡಾ.ಅರವಿಂದ್ ಶೆಣೈ ಮಾತನಾಡಿ, ಬರ್ತ್ ರೈಟ್ ವಿಭಾಗದಲ್ಲಿ ಸ್ತ್ರೀ ರೋಗ ತಜ್ಞರು ಹಾಗೂ ಸಹಾಯ ಸಿಬ್ಬಂದಿ 24*7 ಲಭ್ಯವಿರುತ್ತಾರೆ. ನಮ್ಮ ಆಸ್ಪತ್ರೆಯು ಶಸ್ತ್ರಚಿಕಿತ್ಸೆ ಮತ್ತು ಸ್ತನ ಚಿಕಿತ್ಸೆಯಲ್ಲಿ ಪರಿಣತಿ ಪಡೆದ ವೈದ್ಯರನ್ನು ಒಳಗೊಂಡಿದೆ. ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವಿದೆ ಎಂದು ಹೇಳಿದರು.
ಹೆರಿಗೆ ಮತ್ತು ಸ್ತ್ರೀರೋಗ ವೈದ್ಯರಾದ ಡಾ.ಮೇಘನಾ ರೆಡ್ಡಿ ಮಾತನಾಡಿ, ನಾವು ನಿಖರವಾದ ರೋಗನಿರ್ಣಯ ಮತ್ತು ಚಿಕಿತ್ಸೆಗಳಿಗಾಗಿ ಚರ್ಚಿಸಲು ಮಹಿಳೆಯರಿಗೆ ಆರಾಮದಾಯಕ ಮತ್ತು ಸಹಾನುಭೂತಿಯ ವಾತಾವರಣವನ್ನು ಒದಗಿಸಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.
ರೈನ್ ಬೋ ಆಸ್ಪತ್ರೆ ಉಪಾಧ್ಯಕ್ಷರಾದ ಪಿ.ನಿತ್ಯಾನಂದ ಮಾತನಾಡಿ, ಹೊಸ ತಾಯಂದಿರಿಗೆ ಬೇಕಾದ ಬೆಂಬಲ ನೀಡುವುದು ನಮ್ಮ ಉದ್ದೇಶ. ಅಲ್ಲದೇ ಬನ್ನೇರುಘಟ್ಟ ರಸ್ತೆ ಮತ್ತು ಹೆಬ್ಬಾಳದಲ್ಲಿರುವ ರೈನ್ ಬೋ ಆಸ್ಪತ್ರೆಯ ಮತ್ತೆರಡು ಶಾಖೆಗಳಲ್ಲೂ ಸಹ ಉನ್ನತ ದರ್ಜೆಯ ಆರೈಕೆ ಮತ್ತು ಸೌಲಭ್ಯ ಒದಗಿಸುಸಲಾಗುತ್ತಿದೆ ಎಂದು ಭರವಸೆ ನೀಡಿದರು.