ಮೈಸೂರು: ನಾಡಿನೆಲ್ಲೆಡೆ ಇಂದು ಆಯುಧ ಪೂಜೆಯ ಸಂಭ್ರಮ. ಮೈಸೂರು ಅರಮನೆಯಲ್ಲಿ ರಾಜ ಪರಂಪರೆಯ ಆಯುಧಗಳಿಗೆ ಯದುವಂಶದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸಲಿದ್ದಾರೆ.
Advertisement
ಈಗಾಗಲೇ ಬೆಳಗ್ಗೆ 5.30ರಿಂದ ಅರಮನೆಯಲ್ಲಿ ಪೂಜಾ ವಿಧಿ ವಿಧಾನಗಳು ಆರಂಭಗೊಂಡಿದ್ದು, ಬೆಳಗ್ಗೆ 7.45ಕ್ಕೆ ರಾಜರ ಆಯುಧಗಳನ್ನು ಅರಮನೆ ಕೋಡಿ ಸೋಮೇಶ್ವರ ದೇಗುಲಕ್ಕೆ ರವಾನಿಸಲಾಗಿತ್ತು. ಆನೆ, ಕುದುರೆ, ಹಸು, ಪಟ್ಟದ ಕತ್ತಿ, ಪಲ್ಲಕ್ಕಿ ಸೇರಿ ಎಲ್ಲಾ ರೀತಿಯ ಆಯುಧಗಳಿಗೆ ಪೂಜೆ ಮಾಡಲಾಯಿತು. ಇದೇ ವೇಳೆ ಮಹಿಳೆಯರ ಜೊತೆಗೆ ರಾಜಪರಿವಾರದವರು ಸೇರಿ ಪೂರ್ಣಕುಂಭವನ್ನು ಹೊತ್ತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ದಸರಾ ಉತ್ಸವದಲ್ಲಿ ಪೌರ ಕಾರ್ಮಿಕ ಮಹಿಳೆಯರಿಗೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದ ಚಂದ್ರಶೇಖರ್ ಶ್ರೀ
Advertisement
Advertisement
ಕೋಡಿ ಸೋಮೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಅರಮನೆ ಕಲ್ಯಾಣಮಂಟಪಕ್ಕೆ ಆಗಮನಿಸಿ, ಬೆಳಗ್ಗೆ 11.02 ರಿಂದ 11.22ರ ಶುಭ ಮುಹೂರ್ತದಲ್ಲಿ ಪೂರ್ವಿಕರು ಬಳಸುತ್ತಿದ್ದ ಕತ್ತಿ, ಗುರಾಣಿ ಈಟಿ ಸೇರಿ ರಾಜಮನೆತನದ ಆಯುಧಗಳಿಗೆ ಯದುವೀರ ಕೃಷದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸಲಿದ್ದಾರೆ. ಜೊತೆಗೆ ರಾಜಪರಿವಾರದ ಆನೆ, ಕುದುರೆ, ಹಸು, ಪಲ್ಲಕ್ಕಿ, ಕಾರುಗಳಿಗೂ ಪೂಜೆ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?
Advertisement
ಮುಂಜಾನೆಯಿಂದ ಚಾಮುಂಡಿ ತೊಟ್ಟಿಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ನೆರವೇರಿಸುತ್ತಿದ್ದು, ಖಾಸ್ ಆಯುಧಗಳ ಪೂಜೆಗೆ ಸಿದ್ದತೆ ನಡೆಸಲಾಗುತ್ತಿದೆ. ಅರಮನೆ ಆನೆ, ಬಾಗಿಲ ಮುಂದೆ ಪಲ್ಲಕ್ಕಿ, ಪಟ್ಟದ ಹಸು, ಪಟ್ಟದ ಒಂಟೆಗಳಿಗೂ ಪೂಜೆ ಸಲ್ಲಿಸಲಾಗುತ್ತದೆ. ಅದರಲ್ಲಿಯೂ ಪಲ್ಲಕ್ಕಿಯಲ್ಲಿ ಯುದ್ದ ಸಲಕರಣೆಗಳನ್ನು ಹೊತ್ತು ತರಲಾಗಿದೆ. ಅರಮನೆ ಮುಂಭಾಗ ಕೋಡಿ ಸೋಮೇಶ್ವರ ದೇವಸ್ಥಾನದಲ್ಲಿ ಆಯುಧಗಳಿಗೆ ಪೂಜೆ ಸಲ್ಲಿಸಿದ ನಂತರ ಅರಮನೆಯಲ್ಲಿ ಯದುವೀರ್ ರಿಂದ ಆಯುಧಗಳಿಗೆ ಪೂಜೆ ನೆರವೇರಿಸಲಿದ್ದಾರೆ. ಕೊರೊನಾ ಕಾರಣದಿಂದಾಗಿಅರಮನೆ ಆಚರಣೆಗಳ ವೀಕ್ಷಣೆಗೆ ಸಾರ್ವಜನಿಕರಿಗೆ ಮಾತ್ರವಲ್ಲದೇ ಬಂಧುಗಳು ಹಾಗೂ ನೆಂಟರಿಗೂ ಪ್ರವೇಷ ನಿರ್ಬಂಧ ಹೇರಲಾಗಿದೆ.