ಯಾದಗಿರಿ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಭಾರ ಪ್ರಾಂಶುಪಾಲ ಹಯ್ಯಾಳಪ್ಪ ಜಾಗೀರ್ ದಾರ್ ಅವರನ್ನು ಅಮಾನತು ಮಾಡಲಾಗಿದೆ.
ಹಯ್ಯಾಳಪ್ಪ ಅವರನ್ನು ಅಮಾನತು ಮಾಡಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ದೇಸಾಯಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯವೆಸಗಲು ಶಿಕ್ಷಕ ಯತ್ನ
ಯಾದಗಿರಿ ತಾಲೂಕಿನ ಮುಂಡರಗಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಭಾರ ಪ್ರಾಂಶುಪಾಲ ಹಯ್ಯಾಳಪ್ಪ, ವಿದ್ಯಾರ್ಥಿನಿಯರಿಗೆ ಹೆಚ್ಚು ಅಂಕ ನೀಡುತ್ತೆನೆಂದು ಆಮಿಷಯೊಡ್ಡಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ದೂರು ನೀಡಲಾಗಿತ್ತು. ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಸಕ್ಕರೆಬೈಲು ಆನೆ ಬಿಡಾರದ ಮರಿ ಆನೆಗೆ ಅಪ್ಪು ಹೆಸರು ನಾಮಕರಣ
ಕರ್ತವ್ಯ ದುರ್ಬಳಕೆ ಹಾಗೂ ಲೈಂಗಿಕ ಕಿರುಕುಳ ಹಿನ್ನೆಲೆ ಪ್ರಭಾರ ಪ್ರಾಂಶುಪಾಲ ಹಯ್ಯಾಳಪ್ಪ ಅವರನ್ನು ಅಮಾನತುಗೊಳಿಸಲಾಗಿದೆ. ಜೊತೆಗೆ ಕರ್ತವ್ಯ ಲೋಪ ಹಿನ್ನೆಲೆ ವಾರ್ಡನ್ ಬಸವಣಪ್ಪ ಎಂಬವರನ್ನು ಸಹ ಅಮಾನತು ಮಾಡಲಾಗಿದೆ.