ಯಾದಗಿರಿ: ಲೈಂಗಿಕ ಪ್ರಕರಣದಲ್ಲಿ ಸಿಲುಕಿರುವ ಜಿಲ್ಲೆಯ ಕಣ್ವಮಠದ ವಿದ್ಯಾವಾರೀಧಿತೀರ್ಥ ಸ್ವಾಮೀಜಿ ಪೀಠ ತ್ಯಾಗ ಮಾಡಲು ಮೀನಾಮೇಷ ಎಣಿಸುತ್ತಿರುವುದು ಶ್ರೀ ಮಠದ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ವಿದ್ಯಾವಾರೀಧಿತೀರ್ಥ ಸ್ವಾಮೀಜಿ ಈ ಕೂಡಲೇ ಪೀಠತ್ಯಾಗ ಮಾಡಬೇಕು ಎಂದು ಭಕ್ತರು ಆಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಯ ಕಣ್ವಮಠದ ನೂರಾರು ಭಕ್ತರು ಸುರಪುರ ಪಟ್ಟಣದಲ್ಲಿ ಶುಕ್ರವಾರ ಸಂಜೆ ಸಭೆ ಸೇರಿದ್ದರು. ಬಳಿಕ ಸುರಪುರ ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕರಿಗೆ ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಈಗ ಬರ್ತಿಯಾ, ನಾನು ಬೇಡ್ವಾ- ಕಾಮಿಸ್ವಾಮಿಯ ಆಡಿಯೋ ಔಟ್
Advertisement
Advertisement
ಸಂಸ್ಥಾನದ ದರ್ಬಾರ್ ಹಾಲ್‍ನಲ್ಲಿ ಸಭೆ ನಡೆಸಿ, ಸಮಾಜದ ಯೋಗ್ಯ ವ್ಯಕ್ತಿಯೋರ್ವನನ್ನು ಪೀಠದ ಉತ್ತರಾಧಿಕಾರಿಯನ್ನಾಗಿ ನೇಮಿಸಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ. ಸಭೆಯಲ್ಲಿ ರಾಯಚೂರು, ಕೊಪ್ಪಳ, ವಿಜಯಪುರ, ಬಳ್ಳಾರಿ, ಬಾಗಲಕೋಟೆ ಭಕ್ತರು ಪಾಲ್ಗೊಂಡಿದ್ದರು.
Advertisement
ಸಭೆಯ ಬಳಿಕ ಮಾತನಾಡಿದ ಸುರಪುರ ಸಂಸ್ಥಾನದ ಅರಸ ರಾಜಾ ಕೃಷ್ಣಪ್ಪ ನಾಯಕ, ಶ್ರೀ ಕಣ್ವಮಠ ನಮ್ಮ ಸಂಸ್ಥಾನದ ಅಧೀನಕ್ಕೆ ಬರುತ್ತದೆ. ಕಾಲದಿಂದ ಕಾಲಕ್ಕೆ ಶ್ರೀ ಮಠದ ಆಗು-ಹೋಗುಗಳನ್ನು ನಾವೇ ನೋಡಿಕೊಂಡು ಬರುತ್ತಿದ್ದೇವೆ. ಶ್ರೀಗಳ ಪ್ರಕರಣಲ್ಲಿ ಸಂಸ್ಥಾನದ ಕಾನೂನುಗಳನ್ನು ಅಧ್ಯಯನ ಮಾಡಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದರು.