ಯಾದಗಿರಿ: ಎಲ್ಲಾ ಹೆಣ್ಣುಮಕ್ಕಳ ಬ್ಯಾಗ್‍ನಲ್ಲಿ ಸರ್ಕಾರ ಎಕೆ-47 ಗನ್ ಇಡಬೇಕು ಎಂದು ದಾಸವಾಳ ಮಠದ (Dasavala Mutt) ವೀರೇಶ್ವರ ಸ್ವಾಮಿಜಿ (Veereshwara Swamiji) ಹೇಳಿದ್ದಾರೆ.
ಯಾದಗಿರಿಯಲ್ಲಿ (Yadgir) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ (Hubballi) ನಡೆದ ನೇಹಾ (Neha) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ, ಯಾವ ಪೋಷಕರು ಹೆಣ್ಣುಮಕ್ಕಳ ಹಿಂದೆ ರಕ್ಷಣೆಗೆ ಹೋಗಲು ಆಗುವುದಿಲ್ಲ. ಅಲ್ಲದೇ ಶಿಕ್ಷಣ ಸಂಸ್ಥೆಯವರು ಸಹ ಹೆಣ್ಣುಮಕ್ಕಳಿಗೆ ಭದ್ರತೆ ಕೊಡಲು ಆಗುತ್ತಾ? ಹೀಗಾಗಿ ಹೆಣ್ಣುಮಕ್ಕಳಿಗೆ ಸರ್ಕಾರ ದೈಹಿಕ ಸಾಮರ್ಥ್ಯದ ತರಬೇತಿ ಕೊಡಬೇಕು. ಇದಕ್ಕಾಗಿ ಒಂದು ತರಗತಿ ಮೀಸಲಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮದುವೆಗೆ ಒಪ್ಪದಿದ್ದಕ್ಕೆ ಹತಾಶೆಯಿಂದ ಕೊಂದಿದ್ದಾನೆ; ನೇಹಾ ತಂದೆ ಹೇಳಿದ್ದೇನು? – ಎಫ್‌ಐಆರ್‌ನಲ್ಲಿ ಏನಿದೆ?
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಏನೇ ಮಾಡಿದರೂ ವರ್ಷ ಆರು ತಿಂಗಳು ಜೈಲಿನಲ್ಲಿದ್ದು, ಮತ್ತೆ ಜಾಮೀನಿನ ಮೇಲೆ ಬರ್ತಿವಿ ಎಂದು ದುಷ್ಕೃತ್ಯ ಎಸಗುವ ಆರೋಪಿಗಳಿಗೆ ಮನದಟ್ಟಾಗಿದೆ. ಆರೋಪಿಯನ್ನು ಪೊಲೀಸರು ಹೇಗೆ ಠಾಣೆಗೆ ಕರೆತಂದ್ರೂ ಹಾಗೆ ಸ್ಮಶಾನಕ್ಕೆ ಕರೆದುಕೊಂಡ ಹೋಗಬೇಕು ಎಂದರು.
ಸಿಎಂ ಹಾಗೂ ಗೃಹ ಸಚಿವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಗಳು ಜವಾಬ್ದಾರಿ ಮರೆತು ಹೇಳಿಕೆ ಕೊಟ್ಟಿದ್ದಾರೆ. ಆಕಸ್ಮಿಕವಾದದ್ದು ಎಂಬ ಪದ ಬಹಳ ಹೇಯವಾದದ್ದು. ಇಂತಹ ಮಾತುಗಳು ಆ ವ್ಯಕ್ತಿಗೆ ಶೋಭೆ ತರುವಂತದ್ದಲ್ಲ. ಉದ್ದೇಶಪೂರ್ವಕವಾಗಿ ನೇಹಾ ಹೀರೆಮಠರನ್ನು ಒಬ್ಬರೇ ಬರುವಾಗ ಕತ್ತು ಕೊಯ್ದು ಒಂಬತ್ತು ಬಾರಿ ಚುಚ್ಚಿ ಕೊಲೆಗೈದಿದ್ದಾನೆ. ರಾಜ್ಯದಲ್ಲಿ ಮತ್ತೊಮ್ಮ ಈ ರೀತಿ ಘಟನೆ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದ ಅವರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮಗಳಿಗೆ ರಕ್ಷಣೆ ಕೊಟ್ಟಿದ್ದಕ್ಕೆ ಯುವತಿ ತಾಯಿಯ ಸೀರೆ ಎಳೆದಾಡಿ ದುರ್ವರ್ತನೆ ತೋರಿದ ಪುಂಡ!