ಯಾದಗಿರಿ: ರೈತರಿಂದ ಖರೀದಿಸಿ ಸಂಗ್ರಹಿಸಿಟ್ಟಿದ್ದ ಸುಮಾರು 2 ಕೋಟಿ ರೂ. ಮೌಲ್ಯದ 2 ಟನ್ ಹತ್ತಿ (Cotton) ಬೆಂಕಿಗೆ ಆಹುತಿಯಾದ (Fire Accident) ಘಟನೆ ನಗರದ (Yadgir) ಹೊರವಲಯದ ಆಶನಾಳ ಕ್ರಾಸ್ ಬಳಿಯ ಕಾಟನ್ ಮಿಲ್ ಒಂದರಲ್ಲಿ ನಡೆದಿದೆ.
ಎಂ.ಡಿ.ಉಸ್ಮಾನ್ ಎಂಬವರಿಗೆ ಸೇರಿದ್ದ ಕಾಟನ್ ಮಿಲ್‍ನಲ್ಲಿ ಈ ಘಟನೆ ನಡೆದಿದ್ದು, ಜಿಲ್ಲೆಯ ವಿವಿಧ ಭಾಗಗಳ ರೈತರಿಂದ ಖರೀದಿಸಿದ ಹತ್ತಿಯನ್ನು ಸಂಗ್ರಹಿಸಿ ಇಡಲಾಗಿತ್ತು. ಸಂಜೆ ಸುಮಾರು 4:30ರ ವೇಳೆಗೆ ಹತ್ತಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಇದರಿಂದ ಸಂಗ್ರಹಿಸಿಟ್ಟ ಹತ್ತಿ ಸಂಪೂರ್ಣ ಭಸ್ಮವಾಗಿದೆ. ಇದನ್ನೂ ಓದಿ: ಸಿಲಿಂಡರ್ ಸ್ಫೋಟ – ಮನೆಯಲ್ಲಿದ್ದ 2 ಲಕ್ಷ ನಗದು, ಚಿನ್ನಾಭರಣ ಭಸ್ಮ
Advertisement
Advertisement
ಹತ್ತಿಗೆ ಬೆಂಕಿ ಹೇಗೆ ತಗುಲಿದೆ ಎಂಬ ಬಗ್ಗೆ ನಿಖರವಾಗಿ ತಿಳಿದಿಲ್ಲ. ಅಗ್ನಿ ಅವಘಡದಿಂದಾಗಿ ಕಾಟನ್ ಮಿಲ್‍ನ ಮಾಲೀಕ ಭಾರೀ ನಷ್ಟ ಅನುಭವಿಸಿದ್ದು, ಆತಂಕಕ್ಕೊಳಗಾಗಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ.
Advertisement
Advertisement
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಯಾದಗಿರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಓಡಿಹೋಗಿ ಮದುವೆಯಾದ ಪ್ರೇಮಿಗಳು – ಯುವಕನ ಪೋಷಕರ ಮೇಲೆ ಯುವತಿ ಕಡೆಯವರಿಂದ ಹಲ್ಲೆ