ಬೆಂಗಳೂರು: ಕಳೆದ ಎರಡು ವರ್ಷದಿಂದ ಮಹಾಮಾರಿ ಕೊರೊನಾ ಅಬ್ಬರಕ್ಕೆ ಸಿಲುಕದವರೇ ಇಲ್ಲ. ಕೊರೋನಾ ಹೆಮ್ಮಾರಿಗೆ ಹೆದರಿ ಇಡೀ ದೇಶಕ್ಕೆ ಬೀಗ ಹಾಕುವ ಪರಿಸ್ಥಿತಿ ಬಂದಿತ್ತು. ಶಾಲಾ-ಕಾಲೇಜ್ ಗಳು ಆಫ್ ಲೈನ್ ನಿಂದ ಆನ್‍ಲೈನ್ ತರಗತಿಗೆ ಬದಲಾಗಿದ್ದವು. ಆದರೆ ಸರ್ಕಾರಿ ಶಾಲಾ ಮಕ್ಕಳಿಗೆ ಆನ್ ಲೈನ್ ತರಗತಿಗಳನ್ನ ಅಟೆಂಡ್ ಮಾಡೋದಕ್ಕೆ ಅವರ ತಂದೆ-ತಾಯಿಯ ಆರ್ಥಿಕ ಪರಿಸ್ಥಿತಿ ಸಾಧ್ಯವಾಗುತ್ತಿರಲಿಲ್ಲ. ರಾಜ್ಯದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ನಿಮ್ಮ ಪಬ್ಲಿಕ್ ಟಿವಿ ಜ್ಞಾನದೀವಿಗೆ ಕಾರ್ಯಕ್ರಮದ ಮೂಲಕ ಟ್ಯಾಬ್ ವಿತರಣೆ ಮಾಡಿತ್ತು. ಈಗ ಅದೇ ಟ್ಯಾಬ್ ನ ಬಳಕೆಯಿಂದ ವಿದ್ಯಾರ್ಥಿಗಳು ಟಾಪರ್ ಆಗಿದ್ದಾರೆ.
Advertisement
ರೋಟರಿ ಕ್ಲಬ್ ಸಹಯೋಗದಲ್ಲಿ ಪಬ್ಲಿಕ್ ಟಿವಿ ನಡೆಸಿದ್ದ ಜ್ಞಾನದೀವಿಗೆ ಅಭಿಯಾನದಡಿ ಬೆಂಗಳೂರಿನ ಚಿಕ್ಕಬಿದರಕಲ್ಲು ಸರ್ಕಾರಿ ಪ್ರೌಡಶಾಲೆಗೆ 225 ಟ್ಯಾಬ್ ನೀಡಲಾಗಿತ್ತು. ಈಗ ಅದೇ ಟ್ಯಾಬ್ ಬಳಸಿ ಎಸ್‍ಎಸ್‍ಎಲ್‍ಸಿ ಮಕ್ಕಳು ಉತ್ತಮ ಫಲಿತಾಂಶ ಪಡೆದಿದ್ದಾರೆ. ಇದನ್ನೂ ಓದಿ: ಮಕ್ಕಳು ಓಡಿ ಹೋಗದಂತೆ ತಡೆಯಲು ಕಾಲಿಗೆ ಕಬ್ಬಿಣ ಸರಪಳಿ ಕಟ್ಟಿದ ಮೌಲಾನಾ
Advertisement
Advertisement
ನಿಂಗಮ್ಮ ಎಂಬ ವಿದ್ಯಾರ್ಥಿನಿ ಪಬ್ಲಿಕ್ ಟ್ಯಾಬ್ ನೆರವು ಪಡೆದು ಪರೀಕ್ಷೆಯಲ್ಲಿ 625 ಕ್ಕೆ 621 ಅಂಕ ಪಡೆದಿದ್ದಾರೆ. 5 ವರ್ಷದ ಹಿಂದೆ ಯಾದಗಿರಿಯ ಪ್ರವಾಹದಲ್ಲಿ ಮನೆ ಮಠ ಕಳೆದುಕೊಂಡ ನಿಂಗಮ್ಮ ಪೋಷಕರು, ಬದುಕು ಅರಸಿ ಬೆಂಗಳೂರಿಗೆ ಬಂದಿದ್ರು. ನಿಂಗಮ್ಮನನ್ನು ಇಲ್ಲಿನ ಸರ್ಕಾರಿ ಆಂಗ್ಲ ಶಾಲೆಗೆ ಸೇರಿಸಿದ್ರು. ಈಗ ನಿಂಗಮ್ಮ ಕಷ್ಟಪಟ್ಟು ಓದಿ ಉತ್ತಮ ಅಂಕ ಗಳಿಸಿದ್ದಾರೆ. ಪಬ್ಲಿಕ್ ಟಿವಿಗೆ ಧನ್ಯವಾದ ಹೇಳಿದ್ದಾರೆ.
Advertisement
ಶಾಲೆಯ 380 ಮಕ್ಕಳ ಪೈಕಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. 8 ಮಕ್ಕಳು ಶೇಕಡಾ 90ಕ್ಕಿಂತ ಅಂಕ ಪಡೆದಿದ್ದಾರೆ. ಪಬ್ಲಿಕ್ ಟಿವಿಯ ಟ್ಯಾಬ್ ಈ ಮಕ್ಕಳಿಗೆ ನೆರವಾಗಿದೆ. ಮತ್ತೆ ಮುಂದಿನ ವರ್ಷದ ಮಕ್ಕಳ ಅನುಕೂಲಕ್ಕಾಗಿ ಈ ಟ್ಯಾಬ್ ಬಳಸುತ್ತೇವೆ ಎಂದು ಮುಖ್ಯ ಶಿಕ್ಷಕಿ ರಾಮಾದೇವಿ ತಿಳಿಸಿದ್ದಾರೆ. ಈ ಮೂಲಕ ಪಬ್ಲಿಕ್ ಟಿವಿ ಹಮ್ಮಿಕೊಂಡಿದ್ದ ಜ್ಞಾನದೀವಿಗೆ ಅಭಿಯಾನ ಸಾರ್ಥಕತೆ ಕಂಡಿದೆ.