– ಸಂತ್ರಸ್ತರಾದ ರೈತರಿಗಿಲ್ಲ ಪರಿಹಾರ
– ಬೇರೆ ರೈತರ ಖಾತೆಗೆ ಸರ್ಕಾರದ ದುಡ್ಡು
ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಮುಷ್ಟಳ್ಳಿ ಗ್ರಾಮದ ನೂರಾರು ಎಕರೆ ಜಮೀನು ಕೃಷ್ಣಾ ನದಿಯ ನಿರಿನಿಂದ ಸಂಪೂರ್ಣ ಮುಳುಗಡೆಯಾಗಿತ್ತು. ಈ ಬಗ್ಗೆ ಜಿಲ್ಲಾಡಳಿತ ಅಧಿಕಾರಿಗಳ ತಂಡ ವರದಿ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ನೀಡಿತ್ತು. ಈಗಾಗಲೇ ಒಂದಿಷ್ಟು ರೈತರ ಖಾತೆಗೆ ಪರಿಹಾರ ಹಣ ಬಂದಿದ್ದು, ಇನ್ನುಳಿದ ರೈತರಿಗೆ ಬಂದಿಲ್ಲ. ಇದಕ್ಕೆ ಕಾರಣ ರೈತರ ಹೆಸರಲ್ಲಿ ಬೇರೆಯವರ ಖಾತೆಗೆ ಪರಿಹಾರದ ಹಣ ಜಮಾ ಆಗಿದೆ. ಈ ಕುರಿತು ಪಬ್ಲಿಕ್ ಟಿವಿಗೆ ಎಕ್ಸ್ ಕ್ಲೂಸೀವ್ ದಾಖಲೆಗಳು ದೊರೆತಿವೆ.
Advertisement
ಜಿಲ್ಲಾಡಳಿತ ಅಧಿಕಾರಿಗಳ ತಂಡ ಹಾನಿಯಾದ ಸ್ಥಳಗಳಲ್ಲಿ ವಾರಗಟ್ಟಲೆ ಬೀಡುಬಿಟ್ಟು ಸಮೀಕ್ಷೆ ನಡೆಸಿ ಹಾನಿಯಾದ ಪ್ರದೇಶಗಳ ಸಂಪೂರ್ಣ ಮಾಹಿತಿ ಸರ್ಕಾರಕ್ಕೆ ನೀಡಿತ್ತು. ರೈತರ ಮಾಹಿತಿಯನ್ನು ವೆಬ್‍ಸೈಟ್‍ನಲ್ಲಿ ಭರ್ತಿ ಮಾಡಲು ಗ್ರಾಮ ಲೆಕ್ಕಾಧಿಕಾರಿ ಶ್ರೀನಿವಾಸ್ ದೇಶಪಾಂಡೆಗೆ ಜವಾಬ್ದಾರಿ ನೀಡಲಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಗ್ರಾಮ ಲೆಕ್ಕಾಧಿಕಾರಿ, ಇಲ್ಲಿ ರೈತರ ಹೆಸರಿನಲ್ಲಿರುವ ಜಮೀನುಗಳ ಪರಿಹಾರದ ಹಣ ಬೆರೆಯವರ ಖಾತೆಗೆ ಜಮಾ ಮಾಡಿದ್ದಾನೆ. ಅಲ್ಲದೆ ಜಮೀನಿನ ಮಾಲೀಕನಿಗೆ ಗೊತ್ತಿಲ್ಲದ ಹಾಗೆ ಹಣ ಲಪಟಾಯಿಸಿದ್ದಾನಂತೆ. ಇನ್ನೂ ಕೆಲ ರೈತರಿಂದ ಲಂಚಪಡೆದು ಹಾನಿಗೊಳಗಾದ ರೈತರ ಜಮೀನಿಗೂ ಸಹ ಪರಿಹಾರ ನೀಡಿದ್ದಾನೆ. ಇದರಿಂದ ಅರ್ಹ ರೈತರನ್ನು ಬಿಟ್ಟು ಸಂಬಂಧವೇ ಇಲ್ಲದ ರೈತರ ಖಾತೆಗೆ ಸಾವಿರಾರು ರೂಪಾಯಿ ಜಮಾ ಆಗಿದೆ. ನದಿ ದಡದ ಜಮೀನು ಹೊಂದಿರುವ ರೈತರಿಗೆ ಪರಿಹಾರದ ಹಣವೇ ಬಂದಿಲ್ಲ. ಆದರೆ ನದಿಯಿಂದ ಸುಮಾರು 2 ರಿಂದ 3 ಕಿ. ಮೀ ದೂರದಲ್ಲಿ ಜಮೀನು ಹೊಂದಿರುವ ರೈತರಿಗೆ ಪರಿಹಾರ ಹಣ ಜಮಾ ಆಗಿದೆ.
Advertisement
Advertisement
ಅಕ್ರಮವಾಗಿ ಹಣ ಪಡೆದ ರೈತರ ಸರ್ವೆ ನಂಬರ್ ಹಾಗೂ ಸಿಕ್ಕಿದ ಪರಿಹಾರ ಇಂತಿದೆ:
* 18-46,9995
* 52-46998
* 42-20,159
* 43/5-19738
* 53/1-18797
* 22-18798
Advertisement
ಅರ್ಹ ರೈತನ ಜಮೀನು ಇನ್ಯಾರದ್ದೋ ಖಾತೆ:
ಸರ್ವೆ 18/2- 46998 ಇವರಿಗೆ ಸೇರಬೇಕಿದ್ದ ಹಣ ಇವರಿಗೆ ಸಂಬಂಧವೇ ಇಲ್ಲ ಶಾಮಲಾಬಾಯಿ ಎಂಬುವವರ ಖಾತೆಗೆ 46,998 ರೂ ಜಮಾ ಆಗಿದೆ.
ಹಾನಿಗೊಳಗಾದ್ರೂ ಪರಿಹಾರ ಸಿಕ್ಕಿಲ್ಲ:
ಸರ್ವೆ ನಂಬರ್ 97 ರ ಯಂಕಪ್ಪ ಭೀಮಣ್ಣ, ಸರ್ವೆ ನಂಬರ್ 87ರ ವಿರೂಪಾಕ್ಷ ಬಸವರಾಜ್, ಸರ್ವೆ ನಂಬರ್ 101/1ರ ಮಲ್ಲನಗೌಡ, ಸರ್ವೆ ನಂಬರ್ 62 ರ ಗೌಸ್ ಹಾಗೂ ಸರ್ವೆ ನಂಬರ್. 72ರ ಮಲ್ಲಿಕಾರ್ಜುನರಿಗೆ ಪರಿಹಾರ ಇನ್ನೂ ಸಿಕ್ಕಿಲ್ಲ.
ಹೀಗೆ ಈ ಗ್ರಾಮದಲ್ಲಿ ಒಟ್ಟು 65 ಜನ ರೈತರಿಗೆ ಪ್ರವಾಹದ ಬೆಳೆ ಪರಿಹಾರ ಬಂದಿದೆ. ಆದರೆ ಇದರಲ್ಲಿ ಶೇ.50 ರಷ್ಟು ಅರ್ಹರಲ್ಲದ ರೈತರಿಗೆ ಹಣ ಜಮಾವಣೆ ಆಗಿದ್ದು, ಇದರಲ್ಲಿ ಗ್ರಾಮ ಲೆಕ್ಕಿಗ ಶ್ರೀನಿವಾಸ್ ದೇಶಪಾಂಡೆ ಭ್ರಷ್ಟಾಚಾರ ಸ್ಪಷ್ಟವಾಗಿ ಕಾಣುತ್ತದೆ. ಇಷ್ಟು ದೊಡ್ಡ ಮಟ್ಟದ ಅವ್ಯವಹಾರ ನಡೆಯುತ್ತಿದ್ದರೂ ತಹಶೀಲ್ದಾರರು ಏನು ಮಾಡುತ್ತಿದ್ದರು ಎಂಬ ಅನುಮಾನ ಎದ್ದಿದೆ.