ಯಾದಗಿರಿ: ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಯ ಆಗರ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿರುವ ಆಸ್ಪತ್ರೆ ಇದು ಹೆಸರಿಗೆ ಮಾತ್ರ ಸರ್ಕಾರಿ ಆಸ್ಪತ್ರೆಇಲ್ಲಿ ಚಿಕಿತ್ಸೆ ಕೊಡಲು ವೈದ್ಯರೇ ಇಲ್ಲವಾಗಿದೆ.
Advertisement
ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ರೋಗಿಗಳು ಹೈರಾಣಾಗುತ್ತಿದ್ದಾರೆ. ಇಲ್ಲಿಗೆ ವೈದ್ಯರು ಬರೋದು ಅಮಾವಾಸ್ಯೆ, ಹುಣ್ಣಿಮೆಗೊಮ್ಮೆಗಾಗಿದೆ. ಇಲ್ಲಿ ಕುಡಿಯಲು ನೀರು ಸಹ ಇಲ್ಲದ ಪರಿಸ್ಥಿತಿಯಿದೆ. ಸಿಬ್ಬಂದಿ ಬಳಕೆಗೆ ತಂದಿದ್ದ ಪೀಠೋಪಕರಣಗಳು ಆಸ್ಪತ್ರೆಯ ಮೂಲೆಗೆ ಬಿದ್ದಿವೆ. ನಗನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಅವ್ಯವಸ್ಥೆಯ ಆಗರವಾಗಿದ್ದರು ಆರೋಗ್ಯ ಇಲಾಖೆ ಮಾತ್ರ ಡೋಂಟ್ ಕೇರ್ ಎನ್ನುತ್ತಿದೆ. ಇದನ್ನೂ ಓದಿ: ದಲಿತರೊಂದಿಗೆ ಚಹಾ ಸೇವಿಸಿ, ಬಿಜೆಪಿಗೆ ಮತ ಹಾಕುವಂತೆ ಮನವೊಲಿಸಿ: ಸ್ವತಂತ್ರ ದೇವ್
Advertisement
Advertisement
ಸರಿಯಾದ ಸಮಯಕ್ಕೆ ವೈದ್ಯರ ಬಾರದ ಹಿನ್ನೆಲೆ PHC( primary health care) ಕೇಂದ್ರ ಖಾಲಿ ಖಾಲಿಯಾಗಿ, ಆಸ್ಪತ್ರೆಯಲ್ಲಿ ನೋಡಲು ಸೀಗುವುದು ವೈದ್ಯರ ಚೇರ್ ಮಾತ್ರ. ಈ ಗ್ರಾಮದ ಜನ ವೈದ್ಯರನ್ನು ಕಂಡ್ರೆ ಅದೇ ಪುಣ್ಯ. ಈ PHC ಕೇಂದ್ರಕ್ಕೆ ಹತ್ತಾರು ಹಳ್ಳಿಗಳು ಒಳಪಡುತ್ತದೆ. ಬೇರೆ ಬೇರೆ ಊರುಗಳಿಂದ ಬಂದು ವೈದ್ಯರಿಗಾಗಿ ಕಾದು ಕಾದು ಸುಸ್ತಾಗಬೇಕು. ತುರ್ತು ಆರೋಗ್ಯ ಸೇವೆ ಎಂದು ನಂಬಿಕೊಂಡು ಬಂದರೆ ನರಕಯಾತನೆ ಕಟ್ಟಿಟ್ಟ ಬುತ್ತಿ. ರೋಗಿಗಳನ್ನು ಕರೆದೊಯ್ಯಲು ಅಂಬುಲೆನ್ಸ್ ಇಲ್ಲ. ಹೆರಿಗೆಯಾದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಆಕೆಯ ಹಾರೈಕೆಗೆ ಯಾರೂ ಇಲ್ಲ. ಇದರಿಂದಾಗಿ ಸ್ಥಳೀಯರು ಬೇಸತ್ತು ಹೋಗಿದ್ದಾರೆ. ಇದನ್ನೂ ಓದಿ: ಆದಿವಾಸಿಗಳ ದುಸ್ಥಿತಿಗೆ ಕಾಂಗ್ರೆಸ್ ಕಾರಣ: ಮೋದಿ
Advertisement