ಯಾದಗಿರಿ: ಕೊರೊನಾ ವೈರಸ್ ಭೀತಿಯಿಂದ ಇಡೀ ಭಾರತವೇ ಲಾಕ್ ಡೌನ್ ಆಗಿದೆ. ಈ ಮಧ್ಯೆ ಬಡ ದಂಪತಿ ತಮ್ಮ 24 ದಿನದ ಮಗುವನ್ನು ಕಳೆದುಕೊಂಡು ಶವಸಂಸ್ಕಾರ ಮಾಡಲು ಸಾಧ್ಯವಾಗದೆ ಪರದಾಡಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಜಿಲ್ಲೆಯ ಶಹಾಪೂರ ಪಟ್ಟಣದಲ್ಲಿ 25 ದಿನದ ಕಂದನನ್ನು ಕಳೆದುಕೊಂಡ ಪೋಷಕರು ಶವ ಸಂಸ್ಕಾರ ಪರದಾಡುತ್ತಿರುವಾಗ ಪೌರ ಕಾರ್ಮಿಕರು ನೆರವಿಗೆ ನಿಂತಿದ್ದಾರೆ. ಮಗುವಿನ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.
Advertisement
Advertisement
ಉತ್ತರ ಪ್ರದೇಶ ಮೂಲದ ಕಲ್ಯಾಣಸಿಂಗ್ ಎಂಬ ವ್ಯಕ್ತಿಯ ಕೆಲವು ದಿನಗಳಿಂದ ಶಹಾಪೂರಿನಲ್ಲಿ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಇಂದು ಕಲ್ಯಾಣ ಸಿಂಗ್ ದಂಪತಿಯ 25 ದಿನದ ಮಗು ತೀರಿಹೊಗಿದ್ದು ಬಡವನಾಗಿದ್ದ ಕಲ್ಯಾಣ ಸಿಂಗ್ ಬಳಿ ಒಂದು ಕಡೆ ಶವ ಸಂಸ್ಕಾರಕ್ಕೆ ಹಣವಿಲ್ಲದೆ, ಮತ್ತೊಂದು ಕಡೆ ತಮ್ಮ ಊರಿಗೆ ಹೋಗಲೂ ಆಗದ ಕಠಿಣ ಪರಿಸ್ಥಿತಿ ಎದುರಾಗಿತ್ತು. ಇದನ್ನು ಕಂಡ ನಗರಸಭೆ ಪೌರ ಕಾರ್ಮಿಕರು ಕಲ್ಯಾಣಸಿಂಗ್ ನೆರವಿಗೆ ನಿಂತು ಮಗುವಿನ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಪೌರ ಕಾರ್ಮಿಕರು ಮಾನವೀಯತೆಗೆ ಜಿಲ್ಲೆಯ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.