ಯಾದಗಿರಿ: ದೇವಸ್ಥಾನ ನಿರ್ಮಾಣಕ್ಕಾಗಿ ಸರ್ಕಾರಿ ಶಾಲಾ ಕಟ್ಟಡ ಧ್ವಂಸ ಮಾಡಿದ ಘಟನೆ ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ರಾಮನಾಯಕನ ತಾಂಡದಲ್ಲಿ ನಡೆದಿದೆ.
ರಾಮನಾಯಕ ತಾಂಡದಲ್ಲಿ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಳೆ ಕಟ್ಟಡವನ್ನು ದೇವಸ್ಥಾನ ಕಟ್ಟುವ ಸಲುವಾಗಿ ಕೆಡವಿ ಹಾಕಲಾಗಿದೆ. ಆದರೆ ಸರ್ಕಾರದ ಕಟ್ಟಡ ಕೆಡವಲು ಸರ್ಕಾರದಿಂದ ಯಾವುದೇ ಅನುಮತಿ ಪಡೆಯದೆ ಈ ಕೃತ್ಯ ನಡೆಸಲಾಗಿದೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.
Advertisement
Advertisement
ಹೊಸ ಕಟ್ಟಡಕ್ಕೆ ಶಾಲೆಯನ್ನು ವರ್ಗಾಯಿಸದ ಮೇಲೆ ಹಳೆ ಕಟ್ಟಡ ಮೇಲೆ ಕಣ್ಣಿಟ್ಟಿರುವ ಶಾಲೆ ಎಸ್‍ಡಿಎಂಸಿ ಅಧ್ಯಕ್ಷ ಮತ್ತು ಗ್ರಾಮ ಕೆಲ ಮುಖಂಡರಗಳು ಮುಂದೆ ನಿಂತು ಸ್ವತಃ ಕಟ್ಟಡ ಧ್ವಂಸಗೊಳಿಸುತ್ತಿರುವ ಹಿನ್ನೆಲೆ ಹಲವಾರು ಅನುಮಾನಕ್ಕೆ ಕಾರಣವಾಗಿದೆ. ಇದಕ್ಕೆ ಕೆಲ ಗ್ರಾಮಸ್ಥರ ವಿರೋಧ ಇದ್ದರು ಅವರ ಮಾತಿಗೆ ಕೇರ್ ಮಾಡದೆ ಕಟ್ಟಡ ಕೆಡವಲಾಗುತ್ತಿದೆ.
Advertisement
ಶಾಲೆಗೂ ನನಗೂ ಸಂಬಂಧವಿಲ್ಲ ಎಂದ ಶಾಲಾ ಮುಖ್ಯ ಶಿಕ್ಷಕ ಗುಂಡಪ್ಪ ಮತ್ತು ಬಿಇಓ ಸಮಜಾಯಿಷಿ ನೀಡುತ್ತಿದ್ದು, ಶಾಲೆ ಮುಖ್ಯ ಶಿಕ್ಷಕ ಮತ್ತು ಬಿಇಓ ಸಹ ಇದರಲ್ಲಿ ಶಾಮೀಲಾಗಿರುವ ಆರೋಪ ಸಹ ಕೇಳಿ ಬರುತ್ತಿದೆ.