ಯಾದಗಿರಿ: ಅರಣ್ಯ ಸಂಪತ್ತನ್ನು ರಕ್ಷಿಸುವ ಅರಣ್ಯಾಧಿಕಾರಿ ಬಯಸಿದ್ದು ಸರ್ಕಾರಿ ಸಂಬಳ ಅಲ್ಲ. ಲಕ್ಷ ಲಕ್ಷ ಗಿಂಬಳವನ್ನು ಮಾತ್ರ. ಕೆಲಸವಾಗಬೇಕಂದರೆ ರೈತರು ಮತ್ತು ವ್ಯಾಪಾರಿಗಳು ಈತನಿಗೆ ಗಿಂಬಳ ಕೊಡಲೇಬೇಕಾಗಿದೆ. ಅಧಿಕಾರಿಯ ಈ ಲಂಚವತಾರ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.
ಯಾದಗಿರಿ ಜಿಲ್ಲೆಯ ನಾರಾಯಣಪುರದ ವಲಯ ಅರಣ್ಯಾಧಿಕಾರಿ ವೆಂಕಟೇಶ್‍ಗೆ ಸರ್ಕಾರಿ ಸಂಬಳಕ್ಕಿಂತ ಬರೀ ಗಿಂಬಳನೇ ಲಕ್ಷ-ಲಕ್ಷ ಬರುತ್ತದೆ. ತಮ್ಮ ಕೆಲಸವಾಗಬೇಕು ಅಂದರೆ ರೈತರು ಮತ್ತು ವ್ಯಾಪಾರಿಗಳು ಈತನಿಗೆ ಲಕ್ಷ-ಲಕ್ಷ ಲಂಚ ನೀಡಬೇಕು.
Advertisement
Advertisement
ವ್ಯಾಪಾರಿ, ಭ್ರಷ್ಟ ಅಧಿಕಾರಿಯ ಸಂಬಾಷಣೆ:
ವ್ಯಾಪಾರಿ: ಸರ್ ರಸ್ತೆಯಲ್ಲಿ ಯಾರಾದರೂ ಅಧಿಕಾರಿಗಳು ಕೇಳಿದ್ರೆ ಅವರಿಗೆ ಏನು ಹೇಳಬೇಕು..?
ಭಷ್ಟ್ರ ಅಧಿಕಾರಿ: ಏಯ್, ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಅವರು ಏನೂ ಮಾಡಲ್ಲ. ನೀವು ಯಾರಿಗೆ ಯಾವ ರೇಟ್ ಹೇಳಬೇಡಿ ನಾನು ಹೇಳ್ತೀನಿ. ಸಾಹೇಬ್ರಿಗೆ ಗೊತ್ತು ನನಗೆ ಗೊತ್ತು. ಅವರು ಏನಾದ್ರೂ ಕೇಳಿದ್ರೆ ನನ್ನ ಹೆಸರು ಹೇಳಿ ಅಷ್ಟೇ. ಸರ್ ಏನ್ ರೇಟ್ ಹೇಳಿದ್ದಾರೆ ಅದಕ್ಕೆ ನಾನು ವ್ಯಾಪಾರ ಮಾಡಿಕೊಳ್ಳುತ್ತೇನೆ.
Advertisement
Advertisement
ವ್ಯಾಪಾರಿ: ಸರ್, ಏನ್ ರೇಟ್ ಇದೆ ಅದಕ್ಕೆ ನಾನು ವ್ಯಾಪಾರ ಮಾಡಿಕೊಳ್ಳುತ್ತೇನೆ. ಇಲ್ಲಾಂದ್ರೆ ನಾವ್ ಯಾಕೆ ಇಲ್ಲಿಗೆ ಬರಬೇಕಿತ್ತು. ನಾವು ಓನರ್ ಅಂತ ಯಾಕೆ ಹೇಳಿಕೊಳ್ಳಬೇಕು.
ಭ್ರಷ್ಟ ಅಧಿಕಾರಿ: ನಾನು ಮಾತನಾಡಿದ್ರೆ ಎಲ್ಲಾ ಬೇಗ ಆಗುತ್ತೆ. ಯಾಕೆಂದ್ರೆ ನನಗೆ ಈ ಹಿಂದೆ ತುಂಬಾ ಅನುಭವ ಆಗಿದೆ. ಈ ಹಿಂದೆ ನಾನು ಹಲವಾರು ಡೀಲ್ ಮಾಡಿದ್ದೀನಿ, ಬಿಜೆಪಿಯ ದೊಡ್ಡ ಲೀಡರ್ ಜೊತೆಯೂ ವ್ಯಾಪಾರ ಮಾಡಿದ್ದೀನಿ. 30 ಸಾವಿರ ರೂಪಾಯಿ ನಾಮ ಹಾಕಿದ್ದಾನೆ. ಇಲ್ಲೇ ಮರದ ಕಟ್ಟಿಗೆ ಹಾಗೇ ಬಿದ್ದಿದೆ. ಇಷ್ಟು ಮಾಲ್ ಇದೆ. ಅದಕ್ಕೆ ತಕ್ಕಂತೆ ದುಡ್ಡು ಕೊಟ್ಟು ತೆಗೆದುಕೊಂಡು ಹೋಗು ಅಂತ ಹೇಳಿದ್ದೇನೆ. ನಾನು ವ್ಯಾಪಾರ ಮಾಡುವುದೇ ಹಾಗೆ. ಇವತ್ತು ನಾನು ಹೇಳಿದಷ್ಟು ದುಡ್ಡು ಕೊಡು ಮಾಲ್ ತೆಗೊಂಡು ಹೋಗು. ನಾಳೆ ಅದನ್ನು ನೀನು ಕೋಟಿಗೆ ಮಾರಿಕೋ..
ಹೀಗೆ ರೈತರು ಬೆಳೆ ವಾಣಿಜ್ಯ ಮರಗಳನ್ನು ಕತ್ತರಿಸಲು ಅನುಮತಿ ನೀಡಲು ಹಣ ಪೀಕ್ತಿದ್ದಾನೆ. ಈತನ ಲಂಚಾವತರ ಇಷ್ಟೇ ಅಲ್ಲ, ಮರಗಳನ್ನ ಕತ್ತರಿಸಲು ಅನುಮತಿ ನೀಡಿದ್ಮೇಲೆ ಈ ಹೇಳಿದ ದರಕ್ಕೆ ಮಾರಾಟ ಮಾಡಬೇಕು.
ಒಟ್ಟಿನಲ್ಲಿ ಭ್ರಷ್ಟ ಅರಣ್ಯಾಧಿಕಾರಿ ವೆಂಕಟೇಶ್ ದುರಾಸೆ ಇಲ್ಲಿಗೆ ನಿಂತಿಲ್ಲ. ಸರ್ಕಾರಿ ಮರಗಳನ್ನು ಸಹ ಬಿಡದ ಈ ಲಂಚಕೋರ ಅಧಿಕಾರಿ ತನಗೆ ಹಣದ ಅವಶ್ಯಕತೆ ಇದ್ದಾಗ ಸರ್ಕಾರಿ ಮರಗಳನ್ನು ಕಡಿದು ವ್ಯಾಪಾರ ಮಾಡುವುದಾಗಿ ರೈತರು ದೂರಿದ್ದಾರೆ.