– ಆದೇಶ ಓದ್ತಿದ್ದಂತೆ ಕುಸಿದು ಬಿದ್ದ ಡಿವೈಆರ್ ಎಫ್
– ಆಸ್ಪತ್ರೆಗೆ ದಾಖಲಾದ ಮಲ್ಲಿಕಾರ್ಜುನ ಕಳಮನಿ
ಯಾದಗಿರಿ: ಅರಣ್ಯ ಇಲಾಖೆ ಕಮಿಷನರ್ ನಿಂದ ತುಘಲಕ್ ದರ್ಬಾರ್ ನಡೆಯುತ್ತಿದೆ ಎಂಬ ಆರೋಪವೊಂದು ಕೇಳಿ ಬಂದಿದೆ.
ಲಕ್ಷ-ಲಕ್ಷ ದಂಡ ವಸೂಲಿ ಮಾಡಿ ಇಲ್ಲ ನಿಮ್ಮ ವೇತನ ಕಟ್ ಆಗುತ್ತೆ ಎಂದು ಡಿಸಿಎಫ್ ಆದೇಶ ಹೊರಡಿಸಿದ್ದಾರೆ. ಈ ಆದೇಶ ನೋಡಿ ಯಾದಗಿರಿ ಅರಕೇರಿ ಡಿವೈಆರ್ ಎಫ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
Advertisement
ಅಪರಾಧಿಗಳಿಂದ ಜಾಸ್ತಿ ದಂಡ ವಸೂಲಿ ಮಾಡದಿದ್ದರೆ ನಿಮ್ಮ ಸಂಬಳ ಕಟ್ ಮಾಡುತ್ತೇನೆ ಅಂತ ಡಿಸಿಎಫ್ ಮತ್ತು ಖಅಈ ಕೆಳಹಂತದ ಅಧಿಕಾರಿಗಳಿಗೆ ಬೇದರಿಕೆ ಹಾಕುತ್ತಿದ್ದಾರೆ. ಸಂಬಳ ಕಟ್ ಮಾಡೋದಾಗಿ ಯಾದಗಿರಿ ಆಅಈ ರವಿಶಂಕರ್ ಮತ್ತು ಆರ್ ಸಿಎಫ್, ಬಿಎಸ್ ಗೆ ಲಿಖಿತ ಆದೇಶ ಹೊರಡಿಸಿದ್ದಾರೆ. ಡಿಸಿಎಫ್ ಆದೇಶ ಕಂಡು ಸಿಬ್ಬಂದಿ ತಬ್ಬಿಬಾಗಿದ್ದು, ಆದೇಶಕ್ಕೆ ಹೆದರಿ ಜಿಲ್ಲೆಯ ಅರಕೇರಿ ಡಿಸಿಎಫ್ ಮಲ್ಲಿಕಾರ್ಜುನ ಕಳಮನಿ ಎದೆನೋವಿನಿಂದ ಆಸ್ಪತ್ರೆ ಸೇರಿದ್ದಾರೆ.
Advertisement
Advertisement
ಮಲ್ಲಿಕಾರ್ಜುನ ಕಳಮನಿಗೆ ಬಿಪಿ ಶುಗರ್ ಇದ್ದು ಅಧಿಕಾರಿಗಳ ಆದೇಶ ಓದುತ್ತಿದ್ದಂತೆ ಕಚೇರಿಯಲ್ಲೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಲ್ಲಿಕಾರ್ಜುನ ಕಾರ್ಯಾ ಸ್ಥಳದಲ್ಲಿ ಸುಮಾರು 1.20 ಲಕ್ಷ ದಂಡ ಬಾಕಿದೆ. ಇದನ್ನು ಹೇಗೆ ವಸೂಲಿ ಮಾಡಬೇಕು, ಇಲ್ಲದಿದ್ದರೆ ಸಂಬಳ ಕಟ್ ಆಗುತ್ತೆ ಅನ್ನೋ ಆತಂಕದಲ್ಲಿ ಈಗ ಆಸ್ಪತ್ರೆಗೆ ಸೇರಿದ್ದಾರೆ.
Advertisement
ವಿಚಿತ್ರ ಅಂದ್ರೆ ಕಾನೂನು ಪ್ರಕಾರ ಡಿವೈಆರ್ ಎಫ್ ಗೆ ದಂಡ ವಸೂಲಿಗೆ ಅಧಿಕಾರವಿಲ್ಲ. ಹೀಗಿದ್ದರೂ ದಂಡ ವಸೂಲಿ ಮಾಡುವಂತೆ ಹಿರಿಯ ಅಧಿಕಾರಿಗಳು ಬೇದರಿಕೆ ಹಾಕುತ್ತಿದ್ದಾರೆ. ಜಿಲ್ಲೆಯ ಒಟ್ಟು 7 ರೆಂಜ್ ಅಧಿಕಾರಿಗಳಿಗೆ ಆದೇಶ ಪತ್ರ ನೀಡಲಾಗಿದೆ.