ಯಾದಗಿರಿ: ಇಂದು ಯಾದಗಿರಿಗೆ ಮಾಜಿ ಸಚಿವ ಡಿಕೆ ಶಿವಕುಮಾರ್ ಆಗಮನ ಹಿನ್ನೆಲೆ ನಗರ ಸೇರಿದಂತೆ ರಸ್ತೆ ಮಾರ್ಗದಲ್ಲಿ ಬ್ಯಾನರ್, ಕಟೌಟ್ ಗಳು ರಾರಾಜಿಸುತ್ತಿರುವೆ.
ಇಂದು ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಲ ಗ್ರಾಮದ ಗಡೆ ದುರ್ಗಾ ದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ದೇವಿಗೆ ಕನಕಪುರ ಬಂಡೆ ಡಿಕೆ ಡಿಕೆಶಿವಕುಮಾರ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಸಾಯಂಕಾಲ ನಾಲ್ಕು ಗಂಟೆಗೆ ಗೋನಾಲ ಗ್ರಾಮಕ್ಕೆ ಡಿಕೆಶಿ ಆಗಮನ ಹಿನ್ನೆಲೆ ಸ್ವಾಗತ ಮಾಡುತ್ತಿರುವ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಬ್ಯಾನರ್ ಕಟೌಟ್ ಗಳು ಹಾಕಲಾಗಿದೆ.
ಯಾದಗಿರಿಯಿಂದ ವಡಗೇರಾ ತಾಲೂಕಿನ ಗೋನಾಲ ಗ್ರಾಮಕ್ಕೆ ತೆರಳುವ ರಸ್ತೆ ಅಕ್ಕಪಕ್ಕದಲ್ಲಿ ಕೈ, ನಾಯಕ ಟ್ರಬಲ್ ಶೂಟರ್ ಸ್ವಾಗತಕ್ಕಾಗಿ ಬ್ಯಾನರ್ ಕಟೌಟ್ ಗಳು ಹಾಕಲಾಗಿದ್ದು, ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿದಂತಾಗಿದೆ.