ಪಕ್ಷೇತರರಾಗಿ ನಿಲ್ಲಲು ಸಲಹೆ ನೀಡಿದ ಅಭಿಮಾನಿಗಳಲ್ಲಿ ಕಾಲಾವಕಾಶ ಕೇಳಿದ ದತ್ತಣ್ಣ

Public TV
1 Min Read
Y S V DATTA 2

ಚಿಕ್ಕಮಗಳೂರು: ಪಕ್ಷೇತರರಾಗಿ ನಿಲ್ಲಲು ಸಲಹೆ ನೀಡಿದ ಅಭಿಮಾನಿಗಳಲ್ಲಿ ವೈ.ಎಸ್.ವಿ.ದತ್ತ (Y S V Datta) ಅವರು ಕಾಲಾವಕಾಶ ಕೇಳಿದ್ದಾರೆ.

ಕಾಂಗ್ರೆಸ್ ಟಿಕೆಟ್ (Congress Ticket) ಕೈತಪ್ಪಿದ್ದಕ್ಕೆ ಬೇಸರಗೊಂಡ ದತ್ತ, ಇಂದು ನನ್ನ-ನಿಮ್ಮ ಆತ್ಮಗೌರವ, ಸ್ವಾಭಿಮಾನಕ್ಕೆ ಅಪಮಾನವಾಗಿದೆ ಎಂದ ಅವರು, ಆತ್ಮಗೌರವ ಹಾಗೂ ಸ್ವಾಭಿಮಾನಕ್ಕಾಗಿ ಕಡೂರಿನಲ್ಲಿ ಭಾನುವಾರ ಬೆಳಗ್ಗೆ 11 ಗಂಟೆಗೆ ಅಭಿಮಾನಿಗಳ ಸಭೆ ಕರೆದಿದ್ದಾರೆ.

Y S V DATTA

ನನ್ನ ಬಳಿ ಹಣ-ಜಾತಿ ಇಲ್ಲದಿದ್ದರೂ ದತ್ತಣ್ಣ ಎಂದು ಕರೆದಿದ್ದೀರಿ. ಆತ್ಮೀಯತೆಯಿಂದ ತಬ್ಬಿಕೊಂಡು ಬೆಳೆಸಿದ್ದೀರಿ. ಪ್ರಸ್ತುತ ರಾಜಕೀಯ ಸ್ಥಿತಿಯಲ್ಲಿ ಒಬ್ಬರ ಜೊತೆ ಒಬ್ಬರಿರಬೇಕು. ನನ್ನ ಜೊತೆ ನೀವು, ನಿಮ್ಮ ಜೊತೆ ನಾನಿರಬೇಕು ಎಂದು ಮತದಾರರ ಆಶೀರ್ವಾದಕ್ಕಾಗಿ ಸಭೆ ಕರೆದಿರುವ ಬಗ್ಗೆ ತಿಳಿಸಿದರು. ಇದನ್ನೂ ಓದಿ: Congress List: ಕಾಂಗ್ರೆಸ್‌ನಿಂದ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್ – ಯಾರಿಗೆ ಎಲ್ಲಿ ಟಿಕೆಟ್?

congress flag

ದತ್ತ ಕಡೂರಿನ ಕಾಂಗ್ರೆಸ್ ಟಿಕೆಟ್ (Kadoor Congress Ticket) ಆಕಾಂಕ್ಷಿಯಾಗಿದ್ದರು. ಕಡೂರಿನ ಕಾಂಗ್ರೆಸ್ ಟಿಕೆಟ್ ದತ್ತ ಅವರಿಗೆ ಎಂದು ಹೇಳಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೆ.ಎಸ್. ಆನಂದ್ ಹೆಸರು ಘೋಷಿಸಿದೆ. ಹೀಗಾಗಿ ದತ್ತ ಅವರಿಗೆ ಟಿಕೆಟ್ ಕೈ ತಪ್ಪುತ್ತಿದ್ದಂತೆ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

Y S V DATTA 1

ಗುರುವಾರ ತಡರಾತ್ರಿವರೆಗೆ ದತ್ತ ಮನೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಪಕ್ಷೇತರವಾಗಿ ನಿಲ್ಲುವಂತೆ ದತ್ತಗೆ ಅಭಿಮಾನಿಗಳು ಸಲಹೆ ನೀಡಿದರು. ಈ ವೇಳೆ ಅಭಿಮಾನಿಗಳಿಗೆ ಎರಡು ದಿನ ಅವಕಾಶ ಕೇಳಿದರು. ಈ ಹಿನ್ನೆಲೆಯಲ್ಲಿ ಭಾನುವಾರದ ಸಭೆ ಬಳಿಕ ದತ್ತ ಅವರ ಮುಂದಿನ ತೀರ್ಮಾನ ಪ್ರಕಟಗೊಳಿಸುವ ಸಾಧ್ಯತೆ ಇದೆ.

Share This Article