ನವದೆಹಲಿ: ಎರಡನೇ ತ್ರೈಮಾಸಿಕದಲ್ಲಿ ಭಾರತದಲ್ಲಿ ಎಲ್‍ಟಿಇಗೆ ಸಪೋರ್ಟ್ ಮಾಡುವ ಸ್ಮಾರ್ಟ್ ಫೋನ್ ವಿಭಾಗದಲ್ಲಿ ಚೀನಾದ ಕ್ಸಿಯೋಮಿ ಕಂಪೆನಿಯ ರೆಡ್‍ಮೀ ನೋಟ್ 4 ಫೋನ್ ಅತಿ ಹೆಚ್ಚು ಮಾರಾಟವಾಗಿದೆ ಎಂದು ವರದಿ ತಿಳಿಸಿದೆ.
ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯ ಬಗ್ಗೆ ಕೌಂಟರ್ ಪಾಯಿಂಟ್ ಸಂಸ್ಥೆ ಅಧ್ಯಯನ ನಡೆಸಿ ವರದಿ ನೀಡಿದ್ದು, ಅತಿಹೆಚ್ಚು ಮಾರಾಟವಾದ ಫೋನ್ ಗಳ ಪೈಕಿ ರೆಡ್‍ಮೀ ನೋಟ್ 4 ಮೊದಲ ಸ್ಥಾನವನ್ನು ಪಡೆದುಕೊಂಡಿದ್ದರೆ, ರೆಡ್‍ಮೀ 4 ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಸ್ಯಾಮ್ ಸಂಗ್ ಗೆಲಾಕ್ಸಿ ಜೆ2, ಒಪ್ಪೋ ಎ37, ಸ್ಯಾಮ್‍ಸಂಗ್ ಗೆಲಾಕ್ಸಿ ಜೆ7 ಅನುಕ್ರಮವಾಗಿ ನಂತರದ ಸ್ಥಾನವನ್ನು ಗಳಿಸಿದೆ.
Advertisement
ಭಾರತದಲ್ಲಿ ಎಲ್‍ಟಿಇ ಟೆಕ್ನಾಲಜಿ ಸಪೋರ್ಟ್ ಮಾಡುವ ಫೋನ್ ಗಳ ಸಂಖ್ಯೆ 15 ಕೋಟಿ ದಾಟಿದೆ. ಚೀನಾ, ಅಮೆರಿಕದ ಬಳಿಕ ಭಾರತದಲ್ಲಿ ಹೆಚ್ಚು ಎಲ್‍ಟಿಇ ಸಪೋರ್ಟ್ ಮಾಡುವ ಫೋನ್ ಗಳು ಮಾರಾಟವಾಗುತ್ತಿದ್ದು, ಮುಂದಿನ ವರ್ಷ ಭಾರತ ಅಮೆರಿಕವನ್ನು ಹಿಂದಿಕ್ಕಲಿದೆ ಎಂದು ಹೇಳಿದೆ.
Advertisement
15 ರಿಂದ 20 ಸಾವಿರ ರೂ. ಒಳಗಿನ ಫೋನ್‍ಗಳು ಹೆಚ್ಚು ಭಾರತದಲ್ಲಿ ಮಾರಾಟವಾಗುತ್ತಿದೆ. ಸ್ಮಾರ್ಟ್ ಫೋನ್ ಗಳ ಮಾರುಕಟ್ಟೆ ಪಾಲಿನಲ್ಲಿ ಎಂದಿನಂತೆ ಸ್ಯಾಮ್ ಸಂಗ್ ಮೊದಲ ಸ್ಥಾನದಲ್ಲೇ ಮುಂದುವರಿದಿದೆ. ಕ್ಸಿಯೋಮಿ, ಒಪ್ಪೋ, ವಿವೊ ಮತ್ತು ಜಿಯೊನಿ ದೇಶದದಲ್ಲಿ ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್ ಫೋನ್ ಬ್ರಾಂಡ್ ಕಂಪೆನಿಗಳು ಎಂದು ಕೌಂಟರ್‍ಪಾಯಿಂಟ್ ತನ್ನ ವರದಿಯಲ್ಲಿ ಹೇಳಿದೆ.
Advertisement
ಟಾಪ್ 5 ಸ್ಮಾರ್ಟ್ ಫೋನ್ ಕಂಪೆನಿಗಳು: ಸ್ಯಾಮ್‍ಸಂಗ್(ಶೇ.24.1) ಮೊದಲ ಸ್ಥಾನದಲ್ಲಿದ್ದರೆ, ಕ್ಸಿಯೋಮಿ(ಶೇ.15.5) ಎರಡನೇ ಸ್ಥಾನಗಳಿಸಿದೆ. ನಂತರದ ಸ್ಥಾನಗಳನ್ನು ಅನುಕ್ರಮವಾಗಿ ವಿವೊ(ಶೇ.12.7) ಒಪ್ಪೋ(ಶೇ.9.6), ಲೆನೆವೊ(ಶೇ.6.8) ಪಡೆದುಕೊಂಡಿದೆ. ಇತರೇ(ಶೇ.31.3) ಪಾಲನ್ನು ಪಡೆದುಕೊಂಡಿದೆ.
Advertisement
ಅತಿ ಹೆಚ್ಚು ಮಾರಾಟವಾದ ಟಾಪ್ 5 ಫೋನ್‍ಗಳು
ರೆಡ್‍ಮೀ ನೋಟ್ 4:
ಡ್ಯುಯಲ್ ಸಿಮ್(ಹೈ ಬ್ರಿಡ್ ಸಿಮ್ ಸ್ಲಾಟ್), 165 ಗ್ರಾಂ, 5.5 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಸ್ಕ್ರೀನ್(1080*1920 ಪಿಕ್ಸೆಲ್, 401 ಪಿಪಿಐ), ಆಂಡ್ರಾಯ್ಡ್ ಮಾರ್ಶ್ ಮೆಲೋ ಓಎಸ್, ಕ್ವಾಲಕಂ ಸ್ನಾಪ್ ಡ್ರಾಗನ್ ಅಕ್ಟಾಕೋರ್ 2.0 GHz ಪ್ರೊಸೆಸರ್, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 13 ಎಂಪಿ ಹಿಂದುಗಡೆ ಕ್ಯಾಮೆರಾ, 5 ಎಂಪಿ ಮುಂದುಗಡೆ ಕ್ಯಾಮೆರಾ, ಫಿಂಗರ್ ಪ್ರಿಂಟ್ ಸೆನ್ಸರ್, ತೆಗೆಯಲು ಅಸಾಧ್ಯವಾದ ಲಿಪೋ 4100 ಎಂಎಎಚ್ ಬ್ಯಾಟರಿ.
ಬೆಲೆ: 64 ಜಿಬಿ ಆಂತರಿಕ ಮೆಮೊರಿ + 4ಜಿಬಿ ರಾಮ್ – 13,500 ರೂ., 32 ಜಿಬಿ ಆಂತರಿಕ ಮೆಮೊರಿ+ 3ಜಿಬಿ ರಾಮ್ – 9,999 ರೂ.
ರೆಡ್‍ಮೀ 4:
ಡ್ಯುಯಲ್ ಸಿಮ್(ಹೈಬ್ರಿಡ್ ಸ್ಲಾಟ್), 5 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(720*1280 ಪಿಕ್ಸೆಲ್, 296 ಪಿಪಿಐ), ಆಂಡ್ರಾಯ್ಡ್ ಮಾರ್ಶ್ ಮೆಲೋ ಓಎಸ್, ಆಕ್ಟಾಕೋರ್ ಪ್ರೊಸೆಸರ್, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 13 ಎಂಪಿ ಹಿಂದುಗಡೆ ಕ್ಯಾಮೆರಾ, 5 ಎಂಪಿ ಮುಂದುಗಡೆ ಕ್ಯಾಮೆರಾ, ಫಿಂಗರ್ ಪ್ರಿಂಟ್ ಸೆನ್ಸರ್, ತೆಗೆಯಲು ಅಸಾಧ್ಯವಾದ 4100 ಎಂಎಎಚ್ ಬ್ಯಾಟರಿ.
ಬೆಲೆ: 16 ಜಿಬಿ ಆಂತರಿಕ ಮೆಮೊರಿ + 2 ಜಿಬಿ ರಾಮ್ – 6,999 ರೂ., 32 ಜಿಬಿ ಆಂತರಿಕ ಮೆಮೊರಿ + 3 ಜಿಬಿ ರಾಮ್ – 8,999 ರೂ., 64 ಜಿಬಿ ಆಂತರಿಕ ಮೆಮೊರಿ + 4 ಜಿಬಿ ರಾಮ್ – 10,999 ರೂ.
3. ಸ್ಯಾಮ್‍ಸಂಗ್ ಗೆಲಾಕ್ಸಿ ಜೆ2:
ಡ್ಯುಯಲ್ ಸಿಮ್, 4.7 ಇಂಚಿನ ಸೂಪರ್ ಅಮೊಲೆಡ್ ಸ್ಕ್ರೀನ್(540*960 ಪಿಕ್ಸೆಲ್, 234 ಪಿಪಿಐ), ಆಂಡ್ರಾಯ್ಡ್ ಲಾಲಿಪಾಪ್ ಓಎಸ್, 1.3 GHz ಕ್ವಾಡ್ ಕೋರ್ ಪ್ರೊಸೆಸರ್, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣ ಸಾಮರ್ಥ್ಯ, 8ಜಿಬಿ ಆಂತರಿಕ ಮೆಮೊರಿ, 1 ಜಿಬಿ ರಾಮ್, 5 ಎಂಪಿ ಹಿಂದುಗಡೆ ಕ್ಯಾಮೆರಾ, 2 ಎಂಪಿ ಮುಂದುಗಡೆ ಕ್ಯಾಮೆರಾ, ಲಿಯಾನ್ 2000 ಎಂಎಎಚ್ ಬ್ಯಾಟರಿ.
ಬೆಲೆ: 7,350 ರೂ.
4. ಒಪ್ಪೋ ಎ37:
ಡ್ಯುಯಲ್ ಸಿಮ್, 5 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಟಿಟಿವ್ ಸ್ಕ್ರೀನ್(720*1280 ಪಿಕ್ಸೆಲ್, 294 ಪಿಪಿಐ), ಆಂಡ್ರಾಯ್ಡ್ 5.1 ಲಾಲಿಪಾಪ್ ಓಎಸ್, 1.2 GHz ಕ್ವಾಡ್ ಕೋರ್ ಕ್ವಾಲಕಂ ಸ್ನಾಪ್‍ಡ್ರಾಗನ್ ಪ್ರೊಸೆಸರ್, 256 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 8 ಎಂಪಿ ಹಿಂದುಗಡೆ ಕ್ಯಾಮೆರಾ, 5 ಎಂಪಿ ಮುಂದುಗಡೆ ಕ್ಯಾಮೆರಾ, ತೆಗೆಯಲು ಅಸಾಧ್ಯವಾದ ಲಿಯಾನ್ 2630 ಎಂಎಎಚ್ ಬ್ಯಾಟರಿ
ಬೆಲೆ: 9,990 ರೂ.
5. ಗೆಲಾಕ್ಸಿ ಜೆ7:
ಡ್ಯುಯಲ್ ಸಿಮ್, 5.5 ಇಂಚಿನ ಸೂಪರ್ ಅಮೊಲೆಡ್ ಸ್ಕ್ರೀನ್(720*1280 ಪಿಕ್ಸೆಲ್, 267 ಪಿಪಿಐ), ಆಂಡ್ರಾಯ್ಡ್ ಮಾರ್ಶ್ ಮೆಲೋ ಓಎಸ್, 1.5GHz ಅಕ್ಟಾ ಕೋರ್ ಪ್ರೊಸೆಸರ್, 256 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ , 16 ಜಿಬಿ ಆಂತರಿಕ ಮೆಮೊರಿ, 1.5 ಜಿಬಿ ರಾಮ್, 13 ಎಂಪಿ ಹಿಂದುಗಡೆ ಕ್ಯಾಮೆರಾ, 5 ಎಂಪಿ ಮುಂದುಗಡೆ ಕ್ಯಾಮೆರಾ, ತೆಗೆಯಲು ಸಾಧ್ಯವಿರುವ ಲಿಯಾನ್ 3300 ಎಂಎಎಚ್ ಬ್ಯಾಟರಿ.
ಬೆಲೆ: 10,990 ರೂ.