ನವದೆಹಲಿ: ಕ್ಸಿಯೋಮಿ ಕಂಪೆನಿಯ ರೆಡ್ ಮೀ ನೋಟ್ 4 ಫೋನಿನ ಬೆಲೆ ದಿಢೀರ್ 1 ಸಾವಿರ ರೂ. ಇಳಿಕೆಯಾಗಿದೆ.
ಜನವರಿಯಲ್ಲಿ ಬಿಡುಗಡೆಯಾದಾಗ 32 ಜಿಬಿ ಆಂತರಿಕ ಮಮೊರಿ, 3ಜಿಬಿ RAM ಫೋನಿಗೆ 10,999 ರೂ. ಇದ್ದರೆ, 64 ಜಿಬಿ ಆಂತರಿಕ ಮಮೊರಿ, 4ಜಿಬಿ RAM ಫೋನಿಗೆ 12,999 ರೂ. ದರ ನಿಗದಿಯಾಗಿತ್ತು. ಆದರೆ ಈಗ 32 ಜಿಬಿ ಆಂತರಿಕ ಮೆಮೊರಿಯ ಫೋನ್ 9,999 ರೂ.ಗೆ ಲಭ್ಯವಿದ್ದರೆ, 64 ಜಿಬಿ ಫೋನ್ 11,999 ರೂ.ಗೆ ಲಭ್ಯವಿದೆ.
Advertisement
ಬೆಲೆ ಕಡಿಮೆಯಾಗಿರುವ ವಿಚಾರವನ್ನು ಕ್ಸಿಯೋಮಿ ಕಂಪೆನಿಯ ನಿರ್ದೇಶಕ ಮನು ಕುಮಾರ್ ಜೈನ್ ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ. ಈ ಎರಡು ಫೋನ್ ಗಳು ಈಗ ಫ್ಲಿಪ್ ಕಾರ್ಟ್ ಮತ್ತು ಎಂಐ ಸ್ಟೋರ್ ನಿಂದ ಖರೀದಿಸಬಹುದಾಗಿದೆ.
Advertisement
Exciting news Mi Fans:
We are announcing a permanent price drop of ₹ 1,000 on India's #1 selling smartphone: #RedmiNote4. 4GB + 64GB variant now at ₹ 11,999!
Head to https://t.co/lzFXOcGyGQ and @Flipkart now! RT if you are excited. pic.twitter.com/Y4qZ2Z5kri
— Manu Kumar Jain (@manukumarjain) November 13, 2017
Advertisement
ರೆಡ್‍ಮೀ ನೋಟ್ 4 ಗುಣವೈಶಿಷ್ಟ್ಯಗಳು
ಬಾಡಿ ಮತ್ತು ಡಿಸ್ಪ್ಲೇ:
151*76*8.5 ಮಿ.ಮೀ ಗಾತ್ರ, 165 ಗ್ರಾಂ ತೂಕ, ಹೈಬ್ರಿಡ್ ಡ್ಯುಯಲ್ ಸಿಮ್( ಮೈಕ್ರೋ ಸಿಮ್+ ನ್ಯಾನೋ ಸಿಮ್) ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಸ್ಕ್ರೀನ್(1080*1920 ಪಿಕ್ಸೆಲ್, 401 ಪಿಪಿಐ, 16:09 ಬಾಡಿ ಅನುಪಾತ).
Advertisement
ಪ್ಲಾಟ್ ಫಾರಂ ಮತ್ತು ಪ್ರೊಸೆಸರ್:
ಆಂಡ್ರಾಯ್ಡ್ 6.0 ಮಾರ್ಶ್ ಮೆಲೋ, ಆಂಡ್ರಾಯ್ಡ್ ನೂಗಟ್ ಗೆ ಅಪ್‍ಡೇಟ್ ಮಾಡಬಹುದು. ಕ್ವಾಲಕಂ ಸ್ನಾಪ್‍ಡ್ರಾಗನ್ 625 ಅಕ್ಟಾಕೋರ್ 2. GHz ಕಾರ್ಟೆಕ್ಸ್ ಎ 53 ಪ್ರೊಸೆಸರ್ Adreno 5 506 ಗ್ರಾಫಿಕ್ಸ್ ಪ್ರೊಸೆಸರ್.
ಮೆಮೊರಿ:
4 ಜಿಬಿ RAM 64 ಜಿಬಿ ಆಂತರಿಕ ಮೆಮೊರಿ, 3ಜಿಬಿ RAM 32 ಜಿಬಿ ಆಂತರಿಕ ಮೆಮೊರಿ, ಎರಡನೇ ಸ್ಲಾಟ್ ನಲ್ಲಿ ಕಾರ್ಡ್ ಹಾಕಿದ್ರೆ 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ.
ಕ್ಯಾಮೆರಾ ಮತ್ತು ಇತರೇ:
ಡ್ಯುಯಲ್ ಎಲ್‍ಇಡಿ ಫ್ಲಾಶ್ ಹೊಂದಿರುವ 13 ಎಂಪಿ ಕ್ಯಾಮೆರಾ, ಮುಂದುಗಡೆ 5 ಎಂಪಿ ಕ್ಯಾಮೆರಾ, ಫಿಂಗರ್ ಪ್ರಿಂಟ್ ಸ್ಕ್ಯಾನರ್, ತೆಗೆಯಲು ಅಸಾಧ್ಯವಾದ 4100 ಎಂಎಎಚ್ ಬ್ಯಾಟರಿ.