ಅಮರಾವತಿ: ಕ್ಸಿಯೋಮಿ ರೆಡ್‍ಮೀ ನೋಟ್ 4 ಸ್ಫೋಟಗೊಂಡ ಘಟನೆ ಆಂಧ್ರದ ಪೂರ್ವ ಗೋದಾವರಿಯಲ್ಲಿ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪೂರ್ವ ಗೋದಾವರಿಯ ನಿವಾಸಿ ಭಾವನಾ ಸೂರ್ಯಕಿರಣ್ ಬೈಕ್ ಚಲಾಯಿಸುತ್ತಿದ್ದಾಗ ರೆಡ್ ಮಿ ನೋಟ್4 ಜೇಬಿನಲ್ಲೇ ಸ್ಫೋಟಗೊಂಡಿದೆ ಎಂದು ಸಾಕ್ಷಿ ವೆಬ್‍ಸೈಟ್ ವರದಿ ಮಾಡಿವೆ.
Advertisement
ಸೂರ್ಯಕಿರಣ್ 20 ದಿನಗಳ ಫ್ಲಿಫ್‍ಕಾರ್ಟ್ ಮೂಲಕ ಮೊಬೈಲ್ ಕೊಂಡುಕೊಂಡಿದ್ದರು. ತನಗಾದ ನಷ್ಟವನ್ನು ತುಂಬಿಕೊಡುವಂತೆ ಸೂರ್ಯಕಿರಣ್ ಕೋರ್ಟ್ ಮೊರೆ ಹೋಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
Advertisement
ಗ್ರಾಹಕನನ್ನು ಸಂಪರ್ಕಿಸಿ ಘಟನೆಯ ಬಗ್ಗೆ ಮಾಹಿತಿಯನ್ನು ಪಡೆಯಲಾಗುವುದು ಕಂಪನಿಯ ಹೇಳಿದೆ. ತನ್ನ ಗ್ರಾಹಕರ ಸುರಕ್ಷತೆ ತುಂಬಾ ಮುಖ್ಯ, ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಕ್ಸಿಯೋಮಿ ಕಂಪನಿಯ ವಕ್ತಾರರು ತಿಳಿಸಿದ್ದಾರೆ.
Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರ್ಯಕಿರಣ್ ಅವರನ್ನು ಸಂಪರ್ಕಿಸಿದ್ದು, ಎಲ್ಲಾ ರೀತಿಯ ಪರೀಕ್ಷೆಗಳನ್ನು ಕಂಪನಿ ಮಾಡಿರುತ್ತದೆ. ಆದರೆ ಕಳಪೆ ಗುಣಮಟ್ಟದ ಮೊಬೈಲ್ ಬಂದಿರುವ ಪ್ರಕ್ರಿಯೆಯನ್ನು ತನಿಖೆ ಮಾಡುತ್ತೇವೆ ಎಂದು ವಕ್ತಾರರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
Advertisement
ಇದನ್ನೂ ಓದಿ: ಬೆಂಗಳೂರಿನಲ್ಲಿ ರೆಡ್‍ಮೀ ನೋಟ್ 4 ಸ್ಫೋಟ: ವಿಡಿಯೋದಲ್ಲಿರುವ ಫೋನ್ ನಿಜವಾಗಿಯೂ ಕ್ಸಿಯೋಮಿಯದ್ದಾ? ಕಂಪೆನಿ ಹೇಳಿದ್ದು ಏನು?