ಬೆಂಗಳೂರು: ದೇಶೀಯ ಮಾರುಕಟ್ಟೆಗೆ ಕ್ಸಿಯೋಮಿ ಕಂಪೆನಿಯ ರೆಡ್‍ಮೀ 5 ಡ್ಯುಯಲ್ ಸಿಮ್ ಫೋನ್ ಮೂರು ಮಾದರಿಯಲ್ಲಿ ಬಿಡುಗಡೆಯಾಗಿದೆ.
ಭಾರತದಲ್ಲಿ ಮಾರಾಟವಾಗುವ ಈ ಎಲ್ಲ ಫೋನ್ ಗಳು ಸ್ವದೇಶದಲ್ಲೇ ತಯಾರಾಗಿದೆ ಎಂದು ಕಂಪೆನಿ ತಿಳಿಸಿದೆ. ಅಮೇಜಾನ್, ಎಂಐ ಸ್ಟೋರ್ ಮತ್ತು ಆಫ್ ಲೈನ್ ಸ್ಟೋರ್ ನಲ್ಲಿ ಈ ಫೋನ್ ಗಳು ಲಭ್ಯವಿದೆ. ಈ ಮೂರು ಫೋನ್ ಗಳ ಮೊದಲ ಫ್ಲಾಶ್ ಸೇಲ್ ಮಾರ್ಚ್ 20ರ ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದೆ.
Advertisement
ರೆಡ್‍ಮೀ 5 ಕ್ವಾಲಕಂ ಎಸ್‍ಡಿಎಂ 450 ಅಕ್ಟಾ ಕೋರ್ 1.8 GHz ಕಾರ್ಟೆಕ್ಸ್ ಎ-53 ಪ್ರೊಸೆಸರ್ ಹೊಂದಿದ್ದು, AnTuTu ಬೆಂಚ್ ಮಾರ್ಕ್ ನಲ್ಲಿ 69,628 ಸ್ಕೋರ್ ಗಳಿಸಿದೆ. ಡಿಸೆಂಬರ್ ನಲ್ಲಿ ಈ ಫೋನ್ ಚೀನಾದಲ್ಲಿ ಬಿಡುಗಡೆಯಾಗಿತ್ತು.
Advertisement
Advertisement
ಬೆಲೆ ಎಷ್ಟು?
2ಜಿಬಿ ರ‍್ಯಾಮ್/16 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 7,999 ರೂ., 3 ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 8,999 ರೂ., 4ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 10,999 ರೂ. ನಿಗದಿ ಮಾಡಿದೆ
Advertisement
ಗುಣವೈಶಿಷ್ಟ್ಯಗಳು
ಬಾಡಿ ಮತ್ತು ಡಿಸ್ಪ್ಲೇ:
151.8* 72.8 * 7.7 ಮಿ.ಮೀ., 157 ಗ್ರಾಂ ತೂಕ, ಹೈಬ್ರಿಡ್ ಡ್ಯುಯಲ್ ಸಿಮ್( ನ್ಯಾನೋ ಸಿಮ್), 5.7 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(720*1440 ಪಿಕ್ಸೆಲ್, 18:9 ಅನುಪಾತ, 282 ಪಿಪಿಐ).
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 7.1.2 ನೂಗಟ್ ಓಎಸ್ ಎಂಐ ಯೂಸರ್ ಇಂಟರ್ ಫೇಸ್ 9.1, ಕ್ವಾಲಕಂ ಎಸ್‍ಡಿಎಂ 450 ಅಕ್ಟಾ ಕೋರ್ 1.8 GHz ಕಾರ್ಟೆಕ್ಸ್ ಎ-53 ಪ್ರೊಸೆಸರ್, ಅಡ್ರಿನೋ 506 ಗ್ರಾಫಿಕ್ಸ್ ಪ್ರೊಸೆಸರ್, ಎರಡನೇ ಸಿಮ್ ನಲ್ಲಿ ಕಾರ್ಡ್ ಹಾಕಿದ್ರೆ 128 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 2ಜಿಬಿ ರ‍್ಯಾಮ್/16 ಜಿಬಿ, 3ಜಿಬಿ ರ‍್ಯಾಮ್/32 ಜಿಬಿ, 4ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ.
ಕ್ಯಾಮೆರಾ ಮತ್ತು ಇತರೇ:
12 ಎಂಪಿ ಹಿಂದುಗಡೆ, 5 ಎಂಪಿ ಮುಂದುಗಡೆ ಕ್ಯಾಮೆರಾ, ಎಲ್‍ಇಡಿ ಫ್ಲಾಶ್, ಫಿಂಗರ್ ಪ್ರಿಂಟ್ ಸೆನ್ಸರ್, ಮೈಕ್ರೋ ಯುಎಸ್‍ಬಿ 2.0, ಫಾಸ್ಟ್ ಬ್ಯಾಟರಿ ಚಾರ್ಜಿಂಗ್5V/2A, ತೆಗೆಯಲು ಅಸಾಧ್ಯವಾದ ಲಿಪೋ-3300 ಎಂಎಎಚ್ ಬ್ಯಾಟರಿ.