ನವದೆಹಲಿ: ಕ್ಸಿಯೋಮಿ ಎಂಐ ಮ್ಯಾಕ್ಸ್ 2 ಫೋನಿನ ಬೆಲೆ ದಿಢೀರ್ ಎಂಬಂತೆ 1 ಸಾವಿರ ರೂ. ಇಳಿಕೆಯಾಗಿದೆ.
ಜುಲೈ ನಲ್ಲಿ 14,999 ರೂ.ಗೆ ಬಿಡುಗಡೆಯಾಗಿದ್ದ 32 ಜಿಬಿ ಆಂತರಿಕ ಮೆಮೊರಿಯ ಫೋನ್ ಈಗ 13,999 ರೂ.ಗೆ ಲಭ್ಯವಿದ್ದರೆ, 16,999 ರೂ. ಗೆ ಬಿಡುಗಡೆಯಾಗಿದ್ದ 64 ಜಿಬಿ ಆಂತರಿಕ ಫೋನ್ 15,999 ರೂ.ಗೆ ಲಭ್ಯವಿದೆ.
Advertisement
ಭಾರತದ ಕ್ಸಿಯೋಮಿ ಕಂಪೆನಿಯ ಉಪಾಧ್ಯಕ್ಷ ಮನು ಕುಮಾರ್ ಜೈನ್, ಎರಡು ಫೋನಿನ ಬೆಲೆ 1 ಸಾವಿರ ರೂ. ಕಡಿತ ಮಾಡಲಾಗಿದೆ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.
Advertisement
Advertisement
ಗುಣವೈಶಿಷ್ಟ್ಯಗಳು:
ಬಾಡಿ ಮತ್ತು ಡಿಸ್ಪ್ಲೇ:
174.1*88.7*7.6 ಮಿಲಿ ಮೀಟರ್, 211 ಗ್ರಾಂ ತೂಕ, ಹೈ ಬ್ರಿಡ್ ಡ್ಯುಯಲ್ ಸಿಮ್(ನ್ಯಾನೋ ಸಿಮ್, ಮೈಕ್ರೋ ಸಿಮ್), 6.4 ಇಂಚಿನ ಐಪಿಎಸ್ ಎಲ್‍ಸಿಡಿ ಸ್ಕ್ರೀನ್(1080*1920 ಪಿಕ್ಸೆಲ್, 342 ಪಿಪಿಐ, 74.0% ಬಾಡಿ ಅನುಪಾತ) ಕಾರ್ನಿಂಗ್ ಗೊರಿಲ್ಲ ಗ್ಲಾಸ್ 3
Advertisement
ಓಎಸ್, ಪ್ರೊಸೆಸರ್:
ಆಂಡ್ರಾಯ್ಡ್ 7.1.1 ನೂಗಟ್ ಓಎಸ್, ಕ್ವಾಲಕಂ ಸ್ನಾಪ್ ಡ್ರಾಗನ್ 2.0 GHz ಅಕ್ಟಾ ಕೋರ್ ಕಾರ್ಟೆಕ್ಸ್ ಎ53 ಪ್ರೊಸೆಸರ್, Adreno 506 ಗ್ರಾಫಿಕ್ಸ್ ಪ್ರೊಸೆಸರ್.
ಮೆಮೊರಿ:
ಎರಡನೇ ಸ್ಲಾಟ್ ನಲ್ಲಿ ಸಿಮ್ ಹಾಕಿದ್ರೆ 256 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 32/64 ಜಿಬಿ ಆಂತರಿಕ ಮೆಮೊರಿ, 4ಜಿಬಿ ರಾಮ್
ಕ್ಯಾಮೆರಾ, ಇತರೇ:
ಹಿಂದುಗಡೆ 12 ಎಂಪಿ ಕ್ಯಾಮೆರಾ, ಮುಂದುಗಡೆ 5 ಎಂಪಿ ಕ್ಯಾಮೆರಾ, ಫಿಂಗರ್ ಪ್ರಿಂಟ್ ಸ್ಕ್ಯಾನರ್, ತೆಗೆಯಲು ಅಸಾಧ್ಯವಾದ 5300 ಎಂಎಎಚ್ ಬ್ಯಾಟರಿ, ಫಾಸ್ಟ್ ಬ್ಯಾಟರಿ ಚಾರ್ಜಿಂಗ್ (ಕ್ವಿಕ್ ಚಾರ್ಜ್ 3.0)
BIG now costs less!
Announcing a permanent price drop of ₹1000 on both variants on #MiMax2 ????????
The best selling >6" phone! Get one today. pic.twitter.com/4i9n6i8a5O
— Manu Kumar Jain (@manukumarjain) October 30, 2017