Connect with us

Latest

ಭಾರತದಲ್ಲಿ ಕ್ಸಿಯೋಮಿಯೇ ನಂಬರ್ 1 ಬ್ರಾಂಡ್: ಯಾವ ಕಂಪನಿಯ ಮಾರುಕಟ್ಟೆ ಎಷ್ಟಿದೆ?

Published

on

ನವದೆಹಲಿ: ಬಜೆಟ್ ಗಾತ್ರದ ಸ್ಮಾರ್ಟ್ ಫೋನುಗಳ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಹೆಸರು ಮಾಡುತ್ತಿರುವ ಕ್ಸಿಯೋಮಿ ಭಾರತದ ಟಾಪ್ 5 ಸ್ಮಾರ್ಟ್ ಫೋನುಗಳಲ್ಲಿ ಮೊದಲನೇ ಸ್ಥಾನದಲ್ಲೇ ಮುಂದುವರಿದಿದೆ.

ಇಂಟರ್‌ನ್ಯಾಷನಲ್‌ ಡಾಟಾ ಕಾರ್ಪೋರೇಷನ್(ಐಡಿಸಿ) ತನ್ನ ಮೂರನೇ ತ್ರೈಮಾಸಿಕ ವರದಿಯಲ್ಲಿ ಈ ಕುರಿತು ಮಾಹಿತಿ ಬಹಿರಂಗ ಪಡಿಸಿದೆ. ಕ್ಸಿಯೋಮಿ ತನ್ನ 2018ರ ತ್ರೈಮಾಸಿಕ ವರದಿಯಲ್ಲಿ ಶೇ.27ರಷ್ಟು ಶೇರನ್ನು ಹೊಂದುವ ಮೂಲಕ ಭಾರತದ ಟಾಪ್ 5 ಮೊಬೈಲ್ ಕಂಪನಿಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

ಯಾವ ಕಂಪನಿಯ ಪಾಲು ಎಷ್ಟು?
ಕ್ಸಿಯೋಮಿ: 2018ರ ತ್ರೈಮಾಸಿಕ ವರದಿಗಳ ಪ್ರಕಾರ ಕ್ಸಿಯೋಮಿ ಶೇ.27ರಷ್ಟು ಶೇರನ್ನು ಹೊಂದುವುದರ ಮೂಲಕ ಭಾರತದಲ್ಲಿ ಅಧಿಪತ್ಯ ಸಾಧಿಸಿದೆ. ತನ್ನ ಆವೃತ್ತಿಗಳಾದ ರೆಡ್‍ಮಿ 5ಎ ಹಾಗೂ ರೆಡ್‍ಮಿ ನೋಟ್ 5 ಪ್ರೋ ಮುಖಾಂತರ ಈ ಸಾಧನೆಗೇರುವಲ್ಲಿ ಕ್ಸಿಯೋಮಿ ಯಶಸ್ವಿಯಾಗಿದೆ. ಈ ಅವಧಿಯಲ್ಲಿ 50 ಲಕ್ಷ ಫೋನುಗಳನ್ನು ಕ್ಸಿಯೋಮಿ ಮಾರಾಟ ಮಾಡಿದೆ. ಇದರಲ್ಲಿ ಶೇ.48.9ರಷ್ಟನ್ನು ಆನ್‍ಲೈನ್ ಮೂಲಕವೇ ವಹಿವಾಟು ನಡೆಸಿದೆ. ಅಲ್ಲದೇ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿಯೂ ಮಾರಾಟವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗುತ್ತಿದೆ. ಇದನ್ನೂ ಓದಿ: ಕ್ಸಿಯೋಮಿಯ ಮೂರು ಫೋನ್‍ಗಳ ಬೆಲೆ ದಿಢೀರ್ ಭಾರೀ ಇಳಿಕೆ

ಸ್ಯಾಮಸಂಗ್: 2018ರ ತ್ರೈಮಾಸಿಕ ವರದಿಯಲ್ಲಿ 2ನೇ ಸ್ಥಾನವನ್ನು ಗಳಿಸುವಲ್ಲಿ ಸ್ಯಾಮಸಂಗ್ ಯಶಸ್ವಿಯಾಗಿದೆ. ಕಳೆದ ಮೂರು ತ್ರೈಮಾಸಿಕ ವರದಿಗಳ ಪ್ರಕಾರ ಚೀನಾದ ಕ್ಸಿಯೋಮಿ, ವಿವೊ ಹಾಗೂ ಒಪ್ಪೊದ ಹೊಡೆತದಿಂದಾಗಿ, ಭಾರತದ ಮಾರುಕಟ್ಟೆಯ ಹಿಡಿತವನ್ನು ಸಾಧಿಸಲು ವಿಫಲವಾಗಿತ್ತು. ತನ್ನ ನೂತನ ಗೆಲಾಕ್ಸಿ ಜೆ2, ಜೆ8, ಜೆ4 ಹಾಗೂ ಇತ್ತೀಚೆಗೆ ಬಿಡುಗಡೆಯಾದ ಆಂಡ್ರಾಯ್ಡ್ ಗೋ ಮಾದರಿಯ ಗೆಲಾಕ್ಸಿ ಜೆ 2 ಕೋರ್ ಸ್ಮಾರ್ಟ್ ಫೋನ್‍ಗಳ ಮುಖಾಂತರ 4.8ರಷ್ಟು ವಹಿವಾಟನ್ನು ವೃದ್ಧಿಸಿಕೊಂಡು ಶೇ.22.6ರಷ್ಟು ಮಾರುಕಟ್ಟೆಯನ್ನು ಗಳಿಸಿಕೊಂಡಿದೆ.

ವಿವೋ: ಮೂರನೇ ಸ್ಥಾನದಲ್ಲಿರುವ ವಿವೋ ಒಟ್ಟಾರೆಯಾಗಿ 2018ರ ತ್ರೈಮಾಸಿಕ ವರದಿಗಳ ಪ್ರಕಾರ ಶೇ.10.6ರಷ್ಟು ಪಾಲನ್ನು ಭಾರತದಲ್ಲಿ ಸಾಧಿಸಿದೆ. 2017ಕ್ಕೆ ಹೋಲಿಸಿದರೆ ವಿವೋ ಶೇ.35.4ರಷ್ಟು ಪ್ರಾಬಲ್ಯ ಹೊಂದಿದೆ. ವಿವೋ ಹೊಸದಾಗಿ ಬಿಡುಗಡೆಮಾಡಿದ ವೈ 81 ಮತ್ತು ವೈ83 ಪ್ರೋ ಮಾದರಿಗಳಿಂದ ಹೆಚ್ಚಿನ ಮಾರುಕಟ್ಟೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೇ ತನ್ನ ವೈ71 ಹಾಗೂ ವಿ11 ಮತ್ತು ವಿ11 ಪ್ರೋ ಮಾದರಿಗಳು ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು. ವಿವೋ ಉತ್ತಮ ಪ್ರಚಾರ ಹಾಗೂ ಐಪಿಲ್ ನಂತಹ ಪಂದ್ಯಾವಳಿಗಳಿಗೆ ಪ್ರಾಯೋಜಕತ್ವವನ್ನು ಪಡೆಯುವ ಮೂಲಕ ಹೆಚ್ಚು ಗ್ರಾಹಕರನ್ನು ಸೆಳೆಯಲು ಸಫಲವಾಗಿತ್ತು.

ಮೈಕ್ರೋಮ್ಯಾಕ್ಸ್: ಟಾಪ್ 5 ಸ್ಥಾನಗಳಲ್ಲೇ ಇರುತ್ತಿದ್ದ ಮೈಕ್ರೋಮ್ಯಾಕ್ಸ್ ಇತ್ತೀಚಿನ ದಿನಗಳಲ್ಲಿ 7ನೇ ಸ್ಥಾನಕ್ಕೆ ಕುಸಿದಿತ್ತು. ನಂತರ ಜಿಯೋ ಸಹಭಾಗಿತ್ವದೊಂದಿಗೆ ಛತ್ತೀಸಗಡ್ ರಾಜ್ಯದಲ್ಲಿ ದುರ್ಬಲ ಮಹಿಳಾ ಮತ್ತು ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಸರಬರಾಜು ಮಾಡುವ ಟೆಂಡರ್ ಪಡೆದುಕೊಂಡು, ಮತ್ತೆ ಟಾಪ್ ನಾಲ್ಕನೇ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. 2018ರ ತ್ರೈಮಾಸಿಕ ವರದಿಗಳ ಪ್ರಕಾರ ಮೈಕ್ರೋಮ್ಯಾಕ್ಸ್ ಶೇ.6.9ರಷ್ಟು ಮಾರುಕಟ್ಟೆಯನ್ನು ಹೊಂದಿದೆ. ಆದರೆ 2017ರ ತ್ರೈಮಾಸಿಕಕ್ಕೆ ಹೋಲಿಸಿದರೆ 2018ರಲ್ಲಿ ಶೇ. 77.3 ಬೆಳವಣಿಗೆ ಸಾಧಿಸಿದೆ.

ಒಪ್ಪೋ: ಐದನೇ ಸ್ಥಾನ ಪಡೆದುಕೊಂಡಿರುವ ಒಪ್ಪೋ, ತನ್ನ 2018ರ ತ್ರೈಮಾಸಿಕ ವರದಿಯಲ್ಲಿ 6.7ರಷ್ಟು ಗಳಿಸುವ ಮೂಲಕ ಭಾರತದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಸರಿಯಾದ ಪ್ರಚಾರ ಕೈಗೊಳ್ಳದೇ ಇರುವುದು ಹಾಗೂ ಗ್ರಾಹಕರನ್ನು ಸೆಳೆಯುವಲ್ಲಿ ಒಪ್ಪೋ ವಿಫಲವಾಗಿದೆ. ಹೊಸದಾಗಿ ಬಿಡುಗಡೆಯಾದ ಎಫ್9 ಹಾಗೂ ಎಫ್9 ಪ್ರೋ ಸ್ಮಾರ್ಟ್ ಫೋನುಗಳು ಗ್ರಾಹಕರನ್ನು ವಿಫಲವಾಗಿದೆ. ತನ್ನ ಹೈ-ಎಂಡ್ ಮೊಬೈಲ್ ಆದ ಒಪ್ಪೋ-ಎಕ್ಸ್ ಅವತರಣೆಯ ಸಿದ್ಧತೆಯಲ್ಲಿ ತೊಡಗಿದ್ದರಿಂದ ಮಾರುಕಟ್ಟೆಯನ್ನು ಕಳೆದುಕೊಂಡಿದೆ ಎಂದು ಐಡಿಸಿ ತಿಳಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Click to comment

Leave a Reply

Your email address will not be published. Required fields are marked *

www.publictv.in