ಬೀಜಿಂಗ್: ಚೀನಾದಲ್ಲಿ (China) ಕೋವಿಡ್ (Corona Virus) ಆರ್ಭಟ ಮುಂದುವರಿದಿದೆ. ಭಾರೀ ವಿರೋಧದ ನಡುವೆ ಇದೇ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ (Xi Jinping) ಸಾರ್ವಜನಿಕವಾಗಿ ಮಾತನಾಡಿದ್ದಾರೆ.
ನಾವು ಆರೋಗ್ಯ ಅಭಿಯಾನವನ್ನು ಹೆಚ್ಚು ಉದ್ದೇಶಿತ ರೀತಿಯಲ್ಲಿ ಪ್ರಾರಂಭಿಸಬೇಕು. ಸಾಂಕ್ರಾಮಿಕ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಸಮುದಾಯದ ರಕ್ಷಣಾ ಮಾರ್ಗವನ್ನು ಬಲಪಡಿಸಬೇಕು. ಜನರ ಜೀವವನ್ನು ಉಳಿಸಲು ಬೇಕಾದ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಕ್ಷಿ ಜಿನ್‌ಪಿಂಗ್ ಸಲಹೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ಕೊರೊನಾ ಆರ್ಭಟ – ಉದ್ಯೋಗ ಕಳ್ಕೊಂಡು ಬೀದಿಗೆ ಬಿದ್ದ 2 ಕೋಟಿ ಯುವಜನರು
ಕೋವಿಡ್ ನಿಯಂತ್ರಣಕ್ಕೆ ಚೀನಾ ಹೊಸ ಸವಾಲನ್ನು ಎದುರಿಸುತ್ತಿದೆ. ದೇಶೀಯವಾಗಿ ಆರೋಗ್ಯ ಅಭಿಯಾನ ಆರಂಭಿಸಬೇಕು. ಸುರಕ್ಷತೆ ಮತ್ತು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ಚೀನಾದಲ್ಲಿ ವರದಿಯಾಗುತ್ತಿವೆ. ದೇಶದಲ್ಲಿ ಜಾರಿಗೊಳಿಸಿರುವ ಕಠಿಣ ನಿಯಮಗಳನ್ನು ತೆರವುಗೊಳಿಸಿದರೆ ಪ್ರಕರಣಗಳ ಸಂಖ್ಯೆ ವ್ಯಾಪಕಗೊಳ್ಳಬಹುದು. ಮುಂದಿನ ಕೆಲವೇ ತಿಂಗಳಲ್ಲಿ ಒಂದು ಮಿಲಿಯನ್ ಜನರು ಸಾವಿಗೀಡಾಬಹುದು ಎಂದು ಅಧ್ಯಯನಗಳು ಅಂದಾಜಿಸಿವೆ. ಇದನ್ನೂ ಓದಿ: ಕೊರೊನಾಗೆ ತತ್ತರಿಸಿದ ಚೀನಾ – ದೈನಂದಿನ ಪ್ರಕರಣಗಳ ಸಂಖ್ಯೆ ಪ್ರಕಟಿಸದಿರಲು ನಿರ್ಧಾರ