Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಜೆಎನ್‌1 ಬೆನ್ನಲ್ಲೇ ಕೊರೊನಾ ಹೊಸ ರೂಪಾಂತರಿ XFG ಸೋಂಕು ಪತ್ತೆ – ಎಷ್ಟು ಅಪಾಯಕಾರಿ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Health | ಜೆಎನ್‌1 ಬೆನ್ನಲ್ಲೇ ಕೊರೊನಾ ಹೊಸ ರೂಪಾಂತರಿ XFG ಸೋಂಕು ಪತ್ತೆ – ಎಷ್ಟು ಅಪಾಯಕಾರಿ?

Health

ಜೆಎನ್‌1 ಬೆನ್ನಲ್ಲೇ ಕೊರೊನಾ ಹೊಸ ರೂಪಾಂತರಿ XFG ಸೋಂಕು ಪತ್ತೆ – ಎಷ್ಟು ಅಪಾಯಕಾರಿ?

Public TV
Last updated: June 10, 2025 11:44 pm
Public TV
Share
3 Min Read
XFG
SHARE

2019ರಲ್ಲಿ ಸಾವಿನ ಕದ ತಟ್ಟಿದ್ದ ಮಹಾಮಾರಿ ಕೊರೊನಾದ ರೂಪಾಂತರಿ ಜೆಎನ್‌1 ಮತ್ತೊಮ್ಮೆ ದೇಶಕ್ಕೆ ಎಂಟ್ರಿ ಕೊಟ್ಟ ಬೆನ್ನಲ್ಲೇ ಕೊರೊನಾ ಹೊಸ ರೂಪಾಂತರಿ XFG ಕೂಡ ದೇಶದ ಹಲವೆಡೆ ಲಗ್ಗೆ ಇಟ್ಟಿದೆ. ಸದ್ಯ ಭಾರತದಲ್ಲಿ 163 XFG ಸೋಂಕು ಪತ್ತೆಯಾಗಿದೆ. ಹಾಗಿದ್ರೆ ಏನಿದು XFG ಸೋಂಕು? ಎಷ್ಟು ಅಪಾಯಕಾರಿ? ಎಲ್ಲಿ ಎಷ್ಟು ಪ್ರಕರಣಗಳು ಪತ್ತೆಯಾಗಿದೆ ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.

ಏನಿದು XFG ಸೋಂಕು?
XFG ಸೋಂಕು ಒಮಿಕ್ರಾನ್‌ನ ಉಪ ರೂಪಾಂತರಿಯಾಗಿದೆ. ಈ ಸೋಂಕು ಮೊದಲು ಕೆನಡಾದಲ್ಲಿ ಪತ್ತೆಯಾಗಿದ್ದು, ಇದೀಗ ಭಾರತಕ್ಕೂ ಕಾಲಿಟ್ಟಿದೆ. LF.7 ಮತ್ತು LP.8.1.2 ಸೇರಿ XFG ರೂಪಾಂತರಿಯಾಗುತ್ತದೆ.ಒಬ್ಬ ವ್ಯಕ್ತಿಯು ಎರಡು ವಿಭಿನ್ನ ತಳಿಗಳ ಕೋವಿಡ್‌ ಸೋಂಕಿಗೆ ಒಳಗಾದಾಗ XFG ರೋಗ ಕಾಣಿಸಿಕೊಳ್ಳುತ್ತದೆ.XFG ರೂಪಾಂತರಿ His445Arg, Asn487Asp, Gln493Glu, ಮತ್ತು Thr572Ile ಎಂಬ ನಾಲ್ಕು ಪ್ರಮುಖ ಸ್ಪೈಕ್‌ ಅನ್ನು ಹೊಂದಿದೆ. ಈ ಸ್ಪ್ದೈಕ್‌ಗಳು ಮಾನವನ ಜೀವಕೋಶಕ್ಕೆ ಸುಲಭವಾಗಿ ಪ್ರವೇಶಿಸಿ ಒಬ್ಬರಿಂದ ಮತ್ತೊಬ್ಬರಿಗೆ ರೋಗ ಹರಡಲು ಸಹಾಯ ಮಾಡುತ್ತದೆ.

ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG) ನ ಮಾಹಿತಿಯ ಪ್ರಕಾರ, XFG ರೂಪಾಂತರವು ಒಟ್ಟು 163 ಮಂದಿಯಲ್ಲಿ ಕಂಡುಬಂದಿದೆ. ಮಹಾರಾಷ್ಟ್ರದಲ್ಲಿ (89), ತಮಿಳುನಾಡು (16), ಕೇರಳ (15), ಗುಜರಾತ್ (11), ಮತ್ತು ಆಂಧ್ರಪ್ರದೇಶ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ (ತಲಾ 6) ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಪ್ರಕರಣ ದಾಖಲಾಗಿದೆ.

ಮೇ ತಿಂಗಳಲ್ಲಿ, XFG ರೂಪಾಂತರದೊಂದಿಗೆ 159 ಮಾದರಿಗಳು ಪತ್ತೆಯಾಗಿದ್ದರೆ, ಜೂನ್‌ನಲ್ಲಿ ಎರಡು ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ದತ್ತಾಂಶದ ಮೂಲಕ ತಿಳಿದುಬಂದಿದೆ. ಭಾನುವಾರ ಬಿಡುಗಡೆಯಾದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ಕಳೆದ 48 ಗಂಟೆಗಳಲ್ಲಿ 769 ಹೊಸ ಪ್ರಕರಣಗಳು ದಾಖಲಾಗಿದ್ದು, ಭಾರತದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 6,000 ದಾಟಿದೆ.

ಎಷ್ಟು ಅಪಾಯಕಾರಿ?
XFG ತೀವ್ರ ಅನಾರೋಗ್ಯವನ್ನು ಉಂಟು ಮಾಡುತ್ತದೆ ಎಂಬುದಕ್ಕೆ ಇಲ್ಲಿಯವರೆಗೆ ಯಾವುದೇ ಪುರಾವೆಗಳು ದೊರೆತಿಲ್ಲ. ಇದು ಉಳಿದ ಒಮಿಕ್ರಾನ್‌ ರೂಪಾಂತರಿಗಳಂತೆ ಸೌಮ್ಯ ಲಕ್ಷಣಗಳನ್ನು ಹೊಂದಿದ್ದು, ಉಸಿರಾಟಕ್ಕೆ ತೊಂದರೆಯುಂಟಾಗಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ವಿಶೇಷವಾಗಿ ಲಸಿಕೆ ಹಾಕಿಸಿಕೊಂಡ ಅಥವಾ ಈ ಹಿಂದೆ ಕೊರೊನಾ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡ ಜನರಲ್ಲಿ ಈ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಲಕ್ಷಣಗಳೇನು?
-ಅತಿಯಾದ ಗೊರಕೆ
-ಗಂಟಲು ಒಣಗುವಿಕೆ
-ನಾಲಗೆ ರುಚಿ ಸಿಗದೇ ಇರುವುದು
-ವಾಸನೆ ಗ್ರಹಿಸಲು ಸಾಧ್ಯವಾಗದೇ ಇರುವುದು
-ಒಣಕೆಮ್ಮು
-ಗಂಟಲು ನೋವು

ಕೋವಿಡ್‌ ಪ್ರಕರಣ:
ಜೂನ್ 9 ರ ವೇಳೆಗೆ ಭಾರತದ ಸಕ್ರಿಯ ಕೋವಿಡ್-19 ಪ್ರಕರಣಗಳ ಸಂಖ್ಯೆ 6,491 ಆಗಿದ್ದು, ಕೇವಲ 48 ಗಂಟೆಗಳಲ್ಲಿ 769 ಹೊಸ ಪ್ರಕರಣಗಳು ವರದಿಯಾಗಿವೆ.

ಕೇರಳದಲ್ಲಿ ಅತ್ಯಂತ ಹೆಚ್ಚು ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ ಸುಮಾರು 1,957 ಸಕ್ರಿಯ ಪ್ರಕರಣಗಳು ಮತ್ತು 7 ಹೊಸ ಸೋಂಕುಗಳು ವರದಿಯಾಗಿವೆ. ಈ ಹಿಂದಿನ ಕೋವಿಡ್‌ ಅಲೆಗಳಿಗೆ ಹೋಲಿಸಿದರೆ ಈ ಪ್ರಮಾಣ ಆತಂಕಕಾರಿಯಲ್ಲದಿದ್ದರೂ, ಜಾಗರೂಕರಾಗಿರಬೇಕು ಎಂಬುದನ್ನು ಅರಿತುಕೊಳ್ಳಬೇಕು.

ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ಪಂಜಾಬ್, ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳ, ಕರ್ನಾಟಕ, ಗುಜರಾತ್ ಮತ್ತು ದೆಹಲಿಯಲ್ಲಿ 65 ಕೋವಿಡ್ ಸಂಬಂಧಿತ ಸಾವುಗಳನ್ನು ಸಚಿವಾಲಯ ದೃಢಪಡಿಸಿದೆ.

ಸುರಕ್ಷತಾ ಕ್ರಮಗಳೇನು?
-ಜ್ವರ ತರಹದ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.
– ನೀವು ಅಸ್ವಸ್ಥರಾದರೆವೈದ್ಯರ ಬಳಿ ಪರೀಕ್ಷೆ ಮಾಡಿಕೊಳ್ಳಿ.
-ಜನದಟ್ಟಣೆ ಅಥವಾ ಸುತ್ತುವರಿದ ಸ್ಥಳಗಳಲ್ಲಿ, ವಿಶೇಷವಾಗಿ ಪ್ರಕರಣ ಹೆಚ್ಚಳವಿರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸಿ.
-ಆಗಾಗ ಕೈಗಳನ್ನು ಸ್ಯಾನಿಟೈಸ್‌ ಮಾಡಿಕೊಳ್ಳಿ.
-ಲಭ್ಯವಿದ್ದರೆ ಬೂಸ್ಟರ್ ಡೋಸ್‌ಗಳು ಸೇರಿದಂತೆ ಲಸಿಕೆಗಳ ಬಗ್ಗೆ ಮಾಹಿತಿ ಪಡೆದು ಇಂಜೆಕ್ಷನ್‌ ಹಾಕಿಸಿಕೊಳ್ಳಿ.
-ಸ್ವಯಂ-ಔಷಧಿಗಳನ್ನು ತಪ್ಪಿಸಿ ಮತ್ತು ವೈದ್ಯರ ಮಾರ್ಗದರ್ಶನವನ್ನು ಅನುಸರಿಸಿ.
-ಆರೋಗ್ಯ ಇಲಾಖೆ ಹೊರಡಿಸುವ ಗೈಡ್‌ಲೈನ್ಸ್‌ ಅನ್ನು ತಪ್ಪದೇ ಅನುಸರಿಸಿ.

ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಆರೋಗ್ಯ ಸಚಿವಾಲಯವು ರೋಗಲಕ್ಷಣಗಳನ್ನು ಹೊಂದಿರುವವರಿಗೆ ಕೋವಿಡ್ ಪರೀಕ್ಷೆಗಳನ್ನು ಕಡ್ಡಾಯಗೊಳಿಸಿದೆ. ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ರಾಜ್ಯ ಸರ್ಕಾರವು ಮಾರ್ಗಸೂಚಿಗಳನ್ನು ಸಹ ಹೊರಡಿಸಿದೆ. ಅಲ್ಲದೇ ಕೊರೊನಾ ಸೋಂಕು ದೃಢಪಟ್ಟರೇ ಹೋಮ್‌ ಐಸೋಲೇಷನ್‌ ಅಥವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗುವಂತೆ ಸೂಚಿಸಿದೆ.

Share This Article
Facebook Whatsapp Whatsapp Telegram

Cinema news

Dhurandhar Movie
ದುರಂಧರ್ ಚಿತ್ರ ಕಂಡು ಕಣ್ಣು ಕೆಂಪು ಮಾಡಿಕೊಂಡ ಪಾಕಿಸ್ತಾನ..ಏನ್ ಕಾರಣ?
Cinema Latest Top Stories
Premi Movie 2
`ಪ್ರೇಮಿ’ಗಾಗಿ ಮೊದಲ ಹಾಡು ಬಿಡುಗಡೆ
Cinema Latest Sandalwood
MB Khazima
ವಿಶ್ವ ಚಾಂಪಿಯನ್ ಖಾಜಿಮಾ ಬಯೋಪಿಕ್‌ಗೆ ಚಾಲನೆ
Cinema Latest Sandalwood South cinema Top Stories
Dhruva sarja
ರಂಗನತಿಟ್ಟು ಪಕ್ಷಿಧಾಮದ ಕಾರ್ಮಿಕರಿಗೆ ಧ್ರುವ ಸಹಾಯಹಸ್ತ – ರಿಯಲ್‌ ಹೀರೋ ಅಂದ್ರು ಫ್ಯಾನ್ಸ್‌
Cinema Latest Sandalwood Top Stories

You Might Also Like

Lionel Messi
Latest

1 ಗಂಟೆಯ ಕಾರ್ಯಕ್ರಮ, 22 ನಿಮಿಷಕ್ಕೆ ಮೆಸ್ಸಿ ಹೊರಟಿದ್ದೇಕೆ? – ಇಲ್ಲಿದೆ ಅಸಲಿ ಕಾರಣ

Public TV
By Public TV
24 minutes ago
MB Patil
Bengaluru City

ಮಂಗಳೂರು, ವಿಜಯಪುರದಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆ: ಎಂಬಿ ಪಾಟೀಲ್

Public TV
By Public TV
55 minutes ago
UDF vs BJP
Latest

ತಿರುವನಂತಪುರಂ ಪಾಲಿಕೆಯಲ್ಲಿ ಬಿಜೆಪಿ ಕಮಾಲ್ – ಗ್ರಾಪಂ, ಬ್ಲಾಕ್‌, ಪುರಸಭೆಯಲ್ಲಿ ಯುಡಿಎಫ್‌ ಮೈತ್ರಿಕೂಟಕ್ಕೆ ದೊಡ್ಡ ಜಯ

Public TV
By Public TV
2 hours ago
Yathindra Siddaramaiah BY Vijayendra
Bengaluru City

ಕಾಂಗ್ರೆಸ್ಸಿಗೆ ಯತೀಂದ್ರ ಹೈಕಮಾಂಡ್ ಆಗಿದ್ದಾರಾ?: ವಿಜಯೇಂದ್ರ

Public TV
By Public TV
3 hours ago
lionel messi Kolkatta
Latest

ಮೆಸ್ಸಿ ಕಾರ್ಯಕ್ರಮದಲ್ಲಿ ದಾಂಧಲೆ – ಆಯೋಜಕ ಸತಾದೃ ದತ್ತಾ ಬಂಧಿಸಿದ ಕೋಲ್ಕತ್ತಾ ಪೊಲೀಸರು

Public TV
By Public TV
3 hours ago
Air Force Officer
Latest

ಪಾಕಿಸ್ತಾನ ಪರ ಸ್ಪೈ – ವಾಯುಪಡೆಯ ನಿವೃತ್ತ ಅಧಿಕಾರಿ ಅಸ್ಸಾಂನಲ್ಲಿ ಬಂಧನ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?