ಪೆರುಗ್ವೆ: ಉತ್ಖನನದ ಸಂದರ್ಭದಲ್ಲಿ 2ನೇ ವಿಶ್ವಯುದ್ಧ ಕಾಲದ ಬಾಂಬ್ ಒಂದು ಸ್ಫೋಟಿಸಿದ ಘಟನೆ ಜೆಕ್ ಗಣರಾಜ್ಯದ ಓಸ್ಟ್ರಾವಾದಲ್ಲಿ ನಡೆದಿದೆ. ಘಟನೆಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಇನ್ನೊಬ್ಬರಿಗೆ ಗಾಯಗಳಾಗಿವೆ ಎಂದು ವರದಿಗಳು ತಿಳಿಸಿವೆ.
ಶುಕ್ರವಾರ ಮುಂಜಾನೆ ನಡೆದಿರುವ ಘಟನೆಯಲ್ಲಿ 2ನೇ ವಿಶ್ವಸಮರ ಕಾಲದ ಬಾಂಬ್ ಸ್ಫೋಟಿಸಿರುವುದಾಗಿ ಪೊಲೀಸರು ದೃಢಪಡಿಸಿದ್ದಾರೆ. ಘಟನೆ ನಡೆದಿರುವ ಸ್ಥಳದಿಂದ 300 ಮೀ. ವ್ಯಾಪ್ತಿಯಲ್ಲಿರುವ ಮನೆಗಳಿಂದ ಸುಮಾರು 50 ಜನರನ್ನು ಪೊಲೀಸರು ಸ್ಥಳಾಂತರಿಸಿದ್ದಾರೆ. ಇದನ್ನೂ ಓದಿ: ರೈಲು ನಿಲ್ದಾಣದಲ್ಲಿ ರಾಕೆಟ್ ದಾಳಿ – 35 ಸಾವು
Advertisement
Advertisement
ಈಶಾನ್ಯ ಜೆಕ್ ಗಣರಾಜ್ಯದಲ್ಲಿ 2ನೇ ಮಹಾಯುದ್ಧದಲ್ಲಿ ಬಳಕೆಯಾಗುತ್ತಿದ್ದ ಬಾಂಬ್‌ಗಳು ಹೆಚ್ಚಾಗಿ ಕಂಡುಬರುತ್ತವೆ. ಈ ಪ್ರದೇಶದಲ್ಲಿ ಹಲವು ಬಾರಿ ಸ್ಫೋಟಗೊಳ್ಳದ ಬಾಂಬ್‌ಗಳು ಪತ್ತೆಯಾಗಿದ್ದು, ಕಳೆದ ಬಾರಿ ಸಾವಿರಾರು ನಿವಾಸಿಗಳನ್ನು ಪೊಲೀಸರು ಸ್ಥಳಾಂತರ ಮಾಡಿದ್ದರು. ಇದನ್ನೂ ಓದಿ: ತುರ್ತು ಭೂಸ್ಪರ್ಶ ವೇಳೆ ಕಾರ್ಗೋ ವಿಮಾನ ಇಬ್ಬಾಗ
Advertisement