– ಮೋದಿ ರಿಯಲ್ ಚಾಂಪಿಯನ್ ಅಂದ್ರು ಫ್ಯಾನ್ಸ್
ವಾಷಿಂಗ್ಟನ್: 16 ಬಾರಿ WWE ವಿಶ್ವ ಚಾಂಪಿಯನ್ ಆಗಿ ವಿಶ್ವದೆಲ್ಲೆಡೆ ಜನಪ್ರಿಯತೆ ಗಳಿಸಿರುವ ಜಾನ್ ಸೀನಾ (John Cena) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಫೋಟೋವನ್ನ ಹಂಚಿಕೊಂಡಿದ್ದಾರೆ.
View this post on Instagram
ಅಧ್ಯಕ್ಷ ಜೋ ಬೈಡನ್ (Joe Biden) ಅವರ ಆಹ್ವಾನದ ಮೇರೆಗೆ ಅಮೆರಿಕ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ, ಜೋ ಬೈಡನ್ ಹಾಗೂ ಜಿಲ್ ಬೈಡನ್ ಅವರೊಂದಿಗೆ ಮಾತನಾಡುತ್ತಿದ್ದ ವೇಳೆ ಜಾನ್ ಸೀನಾ ಸ್ಟೈಲ್‌ನಲ್ಲಿ ಆಕ್ಷನ್ ಮಾಡಿರುವುದು ಕಂಡುಬಂದಿದೆ. ಈ ಫೋಟೋವನ್ನ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಸೀನಾ `ನೀವು ನನ್ನನ್ನ ನೋಡಲು ಸಾಧ್ಯವಿಲ್ಲ’ ಎಂದು ಬರೆದುಕೊಂಡಿದ್ದಾರೆ.
ಜಾಲತಾಣದಲ್ಲಿ ಈ ಫೋಟೋ ಭಾರೀ ಸದ್ದು ಮಾಡುತ್ತಿದ್ದು, 4 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಈ ಫೋಟೋಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು `ಮೋದಿ ರಿಯಲ್ ಚಾಂಪಿಯನ್’ ಎಂದು ಹೊಗಳಿದ್ದಾರೆ. ಇದನ್ನೂ ಓದಿ: ಮೋದಿಗಾಗಿ ಬೃಹತ್ ಔತಣ ಕೂಟ – ಮುಖೇಶ್ ಅಂಬಾನಿ, ಸುಂದರ್ ಪಿಚೈ ಸೇರಿ ಹಲವು VIP ಗಣ್ಯರು ಭಾಗಿ: ಇಲ್ಲಿದೆ ಫುಲ್ ಲಿಸ್ಟ್
ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದರು. ಅದಕ್ಕೂ ಮುನ್ನಾ ದಿನ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದರ ಗೌರವಾರ್ಥವಾಗಿ ಅಧ್ಯಕ್ಷ ಜೋ ಬೈಡನ್ ಆಯೋಜಿಸಿದ್ದ ಬೃಹತ್ ಔತಣ ಕೂಟದಲ್ಲಿ ಭಾಗಿಯಾಗಿದ್ದರು. ಈ ಔತಣ ಕೂಟದಲ್ಲಿ ಭಾರತ ಮೂಲದ ಗೂಗಲ್ ಸಿಇಒ ಸುಂದರ್ ಪಿಚೈ, ಉದ್ಯಮಿ ಮುಕೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ, ಆನಂದ್ ಮಹೀಂದ್ರಾ ಸೇರಿದಂತೆ ಘಟಾನುಘಟಿ ಉದ್ಯಮಿಗಳು ಭಾಗಿಯಾಗಿದ್ದರು. ಇದನ್ನೂ ಓದಿ: ಬೆಂಗಳೂರಲ್ಲೇ ಸಿಗಲಿದೆ ಅಮೆರಿಕ ವೀಸಾ – ಸಿಲಿಕಾನ್ ಸಿಟಿಯಲ್ಲಿ ರಾಯಭಾರ ಕಚೇರಿ ತೆರೆಯಲು US ನಿರ್ಧಾರ