ವಾಷಿಂಗ್ಟನ್: ವಿನ್ಸ್ ಮೆಕ್ ಮಹೊನ್ ಅವರು ವಲ್ರ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‍ಮೆಂಟ್ (WWE) ಸಿಇಒ ಮತ್ತು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ. ಆದರೆ ನಿರ್ದೇಶಕರ ಮಂಡಳಿಯು ಕಾರ್ಯನಿರ್ವಾಹಕರ ವಿರುದ್ಧ ಅನುಚಿತ ವರ್ತನೆ ಆರೋಪವನ್ನು ಮಾಡಿದ್ದು, ಈ ಕುರಿತಂತೆ ತನಿಖೆ ನಡೆಸುವಂತೆ ಕಂಪನಿ ಸೂಚಿಸಿದೆ.
ಮೆಕ್ ಮಹೋನ್ ಅವರು ಸಂಬಂಧ ಹೊಂದಿದ್ದ ಮಾಜಿ ಮಹಿಳಾ ಉದ್ಯೋಗಿಯೊಬ್ಬರಿಗೆ 3 ಮಿಲಿಯನ್ ಡಾಲರ್ ನೀಡಿದ್ದಾರೆ ಎಂದು ಬುಧವಾರ ತನಿಖಾ ವರದಿಯಲ್ಲಿ ವಾಲ್ ಸ್ಟ್ರೀಟ್ ಜನರಲ್ ತಿಳಿಸಿದೆ. ಇದನ್ನೂ ಓದಿ: 2nd PUC ಫಲಿತಾಂಶ ಪ್ರಕಟ- 61.88% ಮಕ್ಕಳು ಪಾಸ್, ವಿದ್ಯಾರ್ಥಿನಿಯರೇ ಮೇಲುಗೈ
Advertisement
Advertisement
ಸದ್ಯ ವಿನ್ಸ್ ಅವರ ಪುತ್ರಿ ಸ್ಟೆಫನಿ ಮೆಕ್ ಮಹೊನ್ ಅವರು ಮಧ್ಯಂತರ ಸಿಇಒ ಮತ್ತು ಹಂಗಾಮಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು WWE ತಿಳಿಸಿದೆ. ಕಳೆದ ತಿಂಗಳು WWE ಬ್ರಾಂಡ್ ಆಫೀಸರ್ ಆಗಿ ತನ್ನ ಗೈರುಹಾಜರಿಯ ರಜೆಯನ್ನು ಘೋಷಿಸಿದ ನಂತರ ಅವರು ಕಂಪನಿಗೆ ಹಿಂದಿರುಗುತ್ತಿದ್ದಾರೆ ಎಂದು ಕುಟುಂಬದ ಮೂಲಗಳ ಪ್ರಕಾರ ತಿಳಿದುಬಂದಿದೆ.
Advertisement
Advertisement
ತನಿಖೆ ವೇಳೆ ವಿನ್ಸ್ ಮೆಕ್ ಮಹೊನ್, ತನಿಖೆಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ತನಿಖೆಗೆ ಸಾಧ್ಯವಾದಷ್ಟು ಬೆಂಬಲ ನೀಡುತ್ತೇನೆ. ತನಿಖೆ ನಂತರ ಬರುವ ಫಲಿತಾಂಶವನ್ನು ನಾನು ಒಪ್ಪಿಕೊಳ್ಳುತ್ತೇನೆ. WWE ಸೃಜನಾತ್ಮಕ ವಿಷಯಕ್ಕೆ ಸಂಬಂಧಿಸಿದ ನನ್ನ ಕೆಲಸ ಮತ್ತು ಜವಾಬ್ದಾರಿಗಳನ್ನು ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಅಗ್ನಿಪಥ್’ ವಿರೋಧದ ನಡುವೆ ಗೃಹ ಇಲಾಖೆಯಿಂದ ಮಹತ್ವದ ನಿರ್ಧಾರ
ಸದ್ಯ WWE ಟ್ಯಾಕೆಂಟ್ ರಿಲೇಶನ್ಸ್ ಮುಖ್ಯಸ್ಥ ಜಾನ್ ಲೌರಿನೈಟಿಸ್ ಅವರ ದುಷ್ಕೃತ್ಯದ ಬಗ್ಗೆ ಮಂಡಳಿಯು ತನಿಖೆ ನಡೆಸುತ್ತಿದೆ.