ಬೀಜಿಂಗ್: ಕೋವಿಡ್ 19 ಮೂಲ ನೆಲೆ ವುಹಾನ್ ನಗರದಲ್ಲಿ ಮತ್ತೆ ಐದು ಮಂದಿಯಲ್ಲಿ ಸೊಂಕು ಕಾಣಿಸಿಕೊಂಡಿದೆ.
ಒಂದೇ ಕಾಂಪೌಂಡಿನ 5 ಮಂದಿಯಲ್ಲಿ ಸೋಂಕು ಕಾಣಿಸಿದ ಹಿನ್ನೆಲೆಯಲ್ಲಿ ಆ ಜಾಗವನ್ನು ಕ್ಲಸ್ಟರ್ ಎಂದು ಗುರುತಿಸಲಾಗಿದೆ. ಒಂದು ತಿಂಗಳ ಹಿಂದೆ ವುಹಾನ್ ನಗರದಲ್ಲಿ ಲಾಕೌಡೌನ್ ತೆರೆಯಲಾಗಿತ್ತು. ಈಗ ಮತ್ತೆ 5 ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕ್ಲಸ್ಟರ್ ರಚಿಸಲಾಗಿದೆ.
ಈ ಹಿಂದೆ ಏಪ್ರಿಲ್ 3 ರಂದು ವುಹಾನ್ ನಗರದಲ್ಲಿ ಕೊನೆಯದಾಗಿ ಸೋಂಕು ಕಾಣಿಸಿಕೊಂಡಿತ್ತು. ಆದಾದ ಬಳಿಕ ಮತ್ತೆ 5 ಮಂದಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಜಾಗವನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ಶುಕ್ರವಾರ ಚೀನಾ ಸರ್ಕಾರ ಸಿನಿಮಾ ಮಂದಿರ, ಮ್ಯೂಸಿಯಂಗಳನ್ನು ತೆರೆಯಲು ಅನುಮತಿ ನೀಡಲಾಗುವುದು ಎಂದು ಹೇಳಿತ್ತು. ಈ ಎಲ್ಲ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.
They reopened #ShanghaiDisneyland with Fantasmic. I’ll be over here sobbing. pic.twitter.com/gwU39TRJwE
— mike???? (@m_ajwt) May 11, 2020
ಶಾಂಘೈ ನಗರದಲ್ಲಿ ಈಗಾಗಲೇ ರಾತ್ರಿ ಮನರಂಜನೆ ನೀಡುವ ಡಿಸ್ಕೋಥೆಕ್ ತೆರೆಯಲಾಗಿದೆ. ವಾಲ್ಟ್ ಡಿಸ್ನಿ ಕಂಪನಿ ಮೂರು ತಿಂಗಳ ಬಳಿಕ ಶಾಂಘೈ ಡಿಸ್ನಿ ಲ್ಯಾಂಡ್ ಪಾರ್ಕ್ ಅನ್ನು ತೆರೆದಿದೆ. ಚೀನಾದಲ್ಲಿ ಒಟ್ಟು 82,918 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದ್ದು, 4,633 ಮಂದಿ ಮೃತಪಟ್ಟಿದ್ದಾರೆ.