ಅಹಮದಾಬಾದ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ (ICC World Test Championship) ಭಾರತ (India) ಪಾಲ್ಗೊಳ್ಳುತ್ತಾ ಇಲ್ಲವೋ ಎನ್ನುವುದು ಈಗ ಶ್ರೀಲಂಕಾ, ನ್ಯೂಜಿಲೆಂಡ್ (Sri Lanka New Zealand) ನಡುವೆ ನಡೆಯುತ್ತಿರುವ ಪಂದ್ಯದ ಫಲಿತಾಂಶದ ಮೇಲೆ ನಿರ್ಧಾರವಾಗುವ ಸಾಧ್ಯತೆಯಿದೆ.
ಸದ್ಯ ನಡೆಯುತ್ತಿರುವ ಆಸ್ಟ್ರೇಲಿಯಾದ (Australia) ವಿರುದ್ಧ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಜಯಗಳಿಸಿದ್ದರೆ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯುತ್ತಿತ್ತು. ಆದರೆ ಈ ಪಂದ್ಯ ಡ್ರಾ ಆಗುವ ಸಾಧ್ಯತೆಯೇ ಹೆಚ್ಚಿರುವ ಕಾರಣ ಭಾರತದ ಭವಿಷ್ಯ ಈಗ ನ್ಯೂಜಿಲೆಂಡ್ ಕೈಯಲ್ಲಿದೆ. ಇದನ್ನೂ ಓದಿ: ಇನ್ಮುಂದೆ ಬೆಂಗಳೂರಿನಿಂದ ಮಂಗಳೂರಿಗೆ ಬೇಗ ತಲುಪಿ!
Advertisement
Advertisement
ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡು ಪಂದ್ಯಗಳನ್ನು ಜಯಿಸಿದರೆ ಶ್ರೀಲಂಕಾ ಫೈನಲ್ ಪ್ರವೇಶಿಸಲಿದೆ. ಒಂದು ಪಂದ್ಯ ಸೋತರೆ ಅಥವಾ ಡ್ರಾ ಮಾಡಿಕೊಂಡರೆ ಭಾರತ ಫೈನಲ್ ಪ್ರವೇಶಿಸಲಿದೆ.
Advertisement
ಪ್ರಸ್ತುತ 68.52 ಪಿಸಿಟಿ (Percentage Of Points Earned) ಹೊಂದಿರುವ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದ್ದರೆ 60.29 ಪಿಸಿಟಿ ಹೊಂದಿರುವ ಭಾರತ ಎರಡನೇ ಸ್ಥಾನದಲ್ಲಿದೆ. ಶ್ರೀಲಂಕಾ 53.33 ಪಿಸಿಟಿ ಹೊಂದಿದ್ದು ಮೂರನೇ ಸ್ಥಾನದಲ್ಲಿದೆ.
Advertisement
ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ ಮೊದಲ ಟೆಸ್ಟ್ ಗೆದ್ದರೆ ಪಿಸಿಟಿ 57.58ಕ್ಕೆ ಏರಿಕೆಯಾಗಲಿದೆ. ಎರಡನೇ ಟೆಸ್ಟ್ ಪಂದ್ಯ ಗೆದ್ದರೆ ಪಿಸಿಟಿ 61.1ಕ್ಕೆ ಏರಿಕೆಯಾಗಲಿರುವ ಕಾರಣ ಶ್ರೀಲಂಕಾ ಫೈನಲ್‌ಗೆ ಪ್ರವೇಶ ಪಡೆಯಲಿದೆ.
ಪ್ರಸ್ತುತ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ಗೆಲುವಿಗೆ 285 ರನ್ ಬೇಕಿದೆ. ನಾಲ್ಕನೇಯ ದಿನದ ಅಂತ್ಯಕ್ಕೆ ನ್ಯೂಜಿಲೆಂಡ್ 1 ವಿಕೆಟ್ ಕಳೆದುಕೊಂಡು 28 ರನ್ ಗಳಿಸಿದ್ದು ಗೆಲುವಿಗೆ 257 ರನ್ ಅಗತ್ಯವಿದೆ.