ಇಂದು ನಿಖಿಲ್ ಕುಮಾರ್ ಸ್ವಾಮಿ ಅವರ ಹೊಸ ಸಿನಿಮಾದ ಮುಹೂರ್ತ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆಯುತ್ತಿದೆ. ಲೈಕಾ ಸಂಸ್ಥೆಯು (Lyca Production) ನಿಖಿಲ್ ಚಿತ್ರಕ್ಕಾಗಿ ಹಣ ಹೂಡುತ್ತಿದೆ. ಅದೊಂದು ಭಾರೀ ಬಜೆಟ್ ಸಿನಿಮಾವಾಗಿದ್ದರಿಂದ ಮುಹೂರ್ತ ಕಾರ್ಯಕ್ರಮವನ್ನು ಅದ್ಧೂರಿಯಾಗಿಯೇ ಮಾಡುತ್ತಿದೆ ಚಿತ್ರತಂಡ. ಈ ಸಂದರ್ಭದಲ್ಲಿ ನಿಖಿಲ್ ತಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರು ಪಾಲ್ಗೊಂಡಿದ್ದರು.
Advertisement
ನಿಖಿಲ್ (Nikhil Kumar Swamy) ಚಿತ್ರದ ಮುಹೂರ್ತಕ್ಕೆ (Muhurta) ಆಗಮಿಸಿದ್ದ ಕುಮಾರಸ್ವಾಮಿ ಅವರು ಮಗನನ್ನು ಉದ್ದೇಶಿಸಿ, ‘ನಾನು ನಿಖಿಲ್ ಗಾಗಿ ಕಥೆಯೊಂದನ್ನು ಬರೆದಿದ್ದೇನೆ. ಅದು ಕೂಡ ಭಾರೀ ಬಜೆಟ್ ಸಿನಿಮಾ. ಆ ಚಿತ್ರಕ್ಕಾಗಿ ಅವರು ಕಾಲ್ ಶೀಟ್ ಕೊಡುತ್ತಿಲ್ಲ’ ಎಂದು ಮಗನ ಬಗ್ಗೆ ಹೆಮ್ಮೆಯಿಂದಲೇ ಮಾತನಾಡಿದರು. ಇದನ್ನೂ ಓದಿ:ಡಾಲಿ ಹುಟ್ಟುಹಬ್ಬಕ್ಕೆ ಖಡಕ್ ರೊಟ್ಟಿ, ಪುಂಡೆಪಲ್ಯೆ ಮೆನು
Advertisement
Advertisement
ಮುಂದುವರೆದು ಮಾತನಾಡಿದ ಕುಮಾರಸ್ವಾಮಿ, ‘ಚಿತ್ರರಂಗಕ್ಕೂ ನನಗೂ ಅವಿನಾಭವ ಸಂಬಂಧ ಇದೆ. ನನ್ನ ಕಾಲೇಜು ಶಿಕ್ಷಣ ಮುಗಿಸಿದ ಕೂಡಲೇ ತೊಡಗಿಕೊಂಡೆ. ಚಿತ್ರದ ಡಿಸ್ಡ್ರಿಬ್ಯೂಟರ್ ಆಗಿದ್ದೆ. ಆಗಿನ ಕಾಲದಲ್ಲಿ ಒಂದು ಸಿನಿಮಾಗೆ ನಾಲ್ಕೈದು ಲಕ್ಷಕ್ಕೆ ಹಂಚಿಕೆ ಮಾಡ್ತಿದ್ದೆ. ದುಡ್ಡು ಹೆಚ್ಚಾದ್ರೆ ಕುಮಾರಣ್ಣ ಕೊಡಿ ಅಂತಿದ್ರು. ನಾನು ಆಗಿನಿಂದಲೂ ಕನ್ನಡ ಚಿತ್ರರಂಗದ ಒಳಿತಿಗಾಗಿ ಕೆಲಸ ಮಾಡ್ತಿದ್ದೇನೆ. ಚಿತ್ರರಂಗಕ್ಕೆ ಬರಲು ಡಾ. ರಾಜ್ ಕುಮಾರ್ ಅವರೇ ನನಗೆ ದೊಡ್ಡ ಆಕರ್ಷಣೆ’ ಎಂದರು.
Advertisement
‘ಆವತ್ತಿನ ಸಿನಿಮಾಗಳು ಕೌಟುಂಬಿಕ, ಮಾನವೀಯ ಮೌಲ್ಯಗಳನ್ನ ಬೆಸೆಯುತ್ತಿದ್ದವು. ಈಗ ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತೀವಿ, ಹಣ ಮಾಡ್ತೀವಿ ಅಂತಾರೆ. ಆದರೆ ಸಾಮಾಜಿಕ ಸಂದೇಶ ಇರೋದಿಲ್ಲ. ಆವತ್ತಿನ ದೊಡ್ಡ ದೊಡ್ಡ ನಟರು ಹಣ ಸಂಪಾದಿಸುತ್ತಿರಲಿಲ್ಲ. ಜನ ಸಂಪಾದಿಸಿದ್ರು. ಸಂದೇಶ ಕೊಡುವಂತಹ ಸಿನಿಮಾ ಮಾಡ್ತಿದ್ರು’ ಎನ್ನುವುದು ಕುಮಾರಸ್ವಾಮಿ ಅವರ ಮಾತಾಗಿತ್ತು.
Web Stories