ಮುಂಬೈ: ಸಾರ್ವಜನಿಕ ಸ್ಥಳಗಳು, ಸೋಶಿಯಲ್ ಮೀಡಿಯಾಗಳಲ್ಲಿ (Social Media) ಕಾನೂನು ಬಾಹಿರ ಮತ್ತು ಅಶ್ಲೀಲತೆ ಪ್ರತಿಬಿಂಬಿಸುತ್ತಿರುವ ಆರೋಪದ ಮೇಲೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಉರ್ಫಿ ಜಾವೇದ್ (Uorfi Javed) ವಿರುದ್ಧ ಲಿಖಿದ ದೂರು ಸಲ್ಲಿಕೆಯಾಗಿದೆ ಎಂದು ಮುಂಬೈ ಪೊಲೀಸ್ (Mumbai Police) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ಅಂಧೇರಿ ಪೊಲೀಸ್ ಠಾಣೆಯಲ್ಲಿ ವಕೀಲ (Lawyer) ಅಲಿ ಕಾಶಿಫ್ ಖಾನ್ ದೇಶಮುಖ್ ಅವರು ಲಿಖಿತ ದೂರು ಸಲ್ಲಿಸಿದ್ದಾರೆ. ಎರಡು ದಿನಗಳ ಹಿಂದೆಯೇ ದೂರು ಸ್ವೀಕರಿಸಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ. ಇದನ್ನೂ ಓದಿ: ದೂರು ನೀಡಿದರೂ ಉರ್ಫಿ ಡೋಂಟ್ ಕೇರ್ : ಮೊಬೈಲ್ ಮೂಲಕ ಪ್ರತಿಭಟಿಸಿದ ನಟಿ
Advertisement
Advertisement
ಕೆಲ ದಿನಗಳ ಹಿಂದೆಯಷ್ಟೇ ಉರ್ಫಿ ಜಾವೇದ್ ಮೇಲೆ ಅನೇಕ ದೂರುಗಳು ಸಲ್ಲಿಕೆಯಾಗಿದ್ದವು. ಅರೆಬರೆ ಡ್ರೆಸ್ ಹಾಕಿ, ಸಮಾಜದ ನೋಟವನ್ನೇ ಹಾಳು ಮಾಡುತ್ತಿದ್ದಾರೆ ಎಂದು ಕೆಲವರು ಕಿಡಿಕಾರಿದ್ದರು. ದೂರು ನೀಡಿದವರ ವಿರುದ್ಧವೇ ತಮ್ಮಿಷ್ಟದ ಕಾಸ್ಟ್ಯೂಮ್ ತೊಟ್ಟು ಪ್ರತಿಭಟಿಸಿದ್ದರು. ಇದನ್ನೂ ಓದಿ: ಟೈಗರ್ ಶ್ರಾಫ್‌ಗೆ ಗುಡ್ ಬೈ, ಅಲೆಕ್ಸಾಂಡರ್ ಅಲೆಕ್ಸ್ ಜೊತೆ ದಿಶಾ ಪಠಾನಿ ಡೇಟಿಂಗ್
Advertisement
ಮೊಬೈಲ್ ಮೂಲಕ ತಮ್ಮ ಮಾನ ಮುಚ್ಚುವಂತೆ ಬಟ್ಟೆ ಹಾಕಿಕೊಂಡು ಮತ್ತೆ ಬೀದಿಗೆ ಇಳಿದಿದ್ದರು. ತಾವು ಯಾರಿಗೂ ಹೆದರುವುದಿಲ್ಲ ಮತ್ತೆ ತಮ್ಮಿಷ್ಟದಂತೆಯೇ ಬದುಕುವುದಾಗಿಯೂ ಹೇಳಿಕೊಂಡಿದ್ದರು. ಬಳಿಕ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆಯೇ ಉರ್ಫಿ ಗರಂ ಆಗಿದ್ದರು. ಅತ್ಯಾಚಾರಿಗಳ ಮೇಲೆ ದೂರು ಕೊಡಿ, ನನ್ನ ಮೇಲಲ್ಲ ಎಂದು ಕಿಡಿಕಾರಿದ್ದರು. ಇದೀಗ ವಕೀಲ ಅಲಿ ಕಾಶಿಫ್, ಉರ್ಫಿ ಜಾವೇದ್ ವಿರುದ್ಧ ಲಿಖಿತ ದೂರು ನೀಡಿದ್ದಾರೆ.