ಬೆಂಗಳೂರು: ಬೆಳೆದು ದೊಡ್ಡವರಾದಮೇಲೆ ಯಾರು ಏನೇ ಆಗಲಿ, ಆದರೆ ಬಾಲ್ಯವನ್ನು ನೆನಪಿಸಿಕೊಂಡರೂ ಕೆಲವರು ಮಗುವಾಗಿಬಿಡುತ್ತಾರೆ. ಯಾವೂರ ರಾಜನಾಗಲಿ, ಮಂತ್ರಿ, ಮಹೋದಯರೇ ಆದರೂ ಎಲ್ಲರೂ ಬಾಲ್ವನ್ನು ದಾಟಿಯೇ ಬಂದಿಬೇಕು. ‘ಟಗರು’ ಚಿತ್ರದ ನಂತರ ಆ ಸಿನಿಮಾಕ್ಕೆ ಡೈಲಾಗು ಬರೆದಿದ್ದ ಮಂಜು ಮಾಸ್ತಿ ಸ್ಟಾರ್ ರೈಟರ್ ಆಗಿ ಕಂಗೊಳಿಸುತ್ತಿದ್ದಾರೆ. ಇಂತಾ ಮಾಸ್ತಿ ಮಂಜು ತಮ್ಮ ಬಾಲ್ಯದ ಕುರಿತು ಮೆಲುಕು ಹಾಕಿದ್ದಾರೆ. ಇದು ಗಣೇಶ ಹಬ್ಬದ ಸ್ಪೆಷಲ್ಲು. ಒಂದು ಸಲ ನೀವೂ ಓದಿಕೊಳ್ಳಿ; ಇದು ಮಾಸ್ತಿ ಮಾತು!
Advertisement
‘ಬಾಲ್ಯ …..ಎಷ್ಟು ಚೆನ್ನಾಗಿತ್ತು, ಮನೆಯಲ್ಲಿ ದೊಡ್ಡವರು, ನೆಂಟರಿಷ್ಟರು ಬಂದಾಗ ಯಾವ ಸ್ಕೂಲು? ಏನ್ ಓದ್ತಾ ಇದೀಯಾ? ನಿನಗೆ ಅಪ್ಪ ಇಷ್ಟಾನೊ ಅಮ್ಮ ಇಷ್ಟಾನೊ? ನಿನ್ನ ಬೆಸ್ಟ್ ಫ್ರೆಂಡ್ ಯಾರು ? ಮುಂದೆ ನೀನೇನಾಗ್ಬೇಕು ಅಂತಿದೀಯಾ ? ಈ ಥರ ನೂರಾರು ಪ್ರಶ್ನೆಗಳು ಅವುಗಳಿಗೆ ನಮ್ಮ ತೊದಲುತ್ತರಗಳು …..ನಮಗೆ ತುಂಬಾ ಜನ ಫ್ರೆಂಡ್ಸ್ ಇರ್ತಿದ್ರು ಅದರಲ್ಲೊಬ್ಬ ಬೆಸ್ಟ್ ಫ್ರೆಂಡ್, ಅವನ ಜೊತೇನೆ ಕೂತ್ಕೋಬೇಕು, ಅವನ ಜೊತೇನೆ ಊಟ ಮಾಡಬೇಕು, ಬರ್ಕೊಬೇಕು, ಹೋಂ ವರ್ಕ್ ಮಾಡ್ಬೇಕು, ಟೀಚರ್ ಎಷ್ಟು ಮಾತಾಡ್ತಿರೋ ನೀವಿಬ್ಬರು? ಅನ್ನೋ ಅಷ್ಟು ಮಾತು, ರಜೆ ಇದ್ದಾಗ ಅವನನ್ನ ಮನೆಗೆ ಕರೀಬೇಕು ನಾವು ಅವರ ಮನೇಗೊಗ್ಬೇಕು, ಆಟ ಆಡಬೇಕು, ಸೈಕಲ್ ಹೊಡೀಬೇಕು, ಕೋಪ ಬಂದಾಗ ‘ಟೂ’ ಬಿಡೊದು ಸರಿಹೋದಾಗ ‘ಸೇ’ ಬಿಡೋದು, ಒಮ್ಮೊಮ್ಮೆ ವಾರಗಟ್ಟಲೆ ತಿಂಗಳುಗಟ್ಟಲೆ ಮಾತು ಬಿಟ್ಟುಬಿಡೋದು ….. ಸ್ಪೋರ್ಟ್ಸ್ ಪೀರಿಯಡ್ ನಲ್ಲಿ ಸ್ಕೂಲ್ ಗ್ರೌಂಡಲ್ಲಿ ನನ್ನನ್ನೊಂದಿಷ್ಟ್ ಹುಡುಗರು ಅವನನ್ನೊಂದಿಷ್ಟು ಹುಡುಗರು ಹಿಡಿದುಕೊಂಡು ‘ಸೇ’ ಬಿಡಿಸುವುದು ಕಾಂಪ್ರಮೈಜ್ ಮಾಡಿಸುವುದು, ಸ್ನೇಹ ಪುನರ್ ನಿರ್ಮಾಣವಾಗೋದು, ಎಲ್ಲಾ ಹಿತವಾದ ನೆನಪುಗಳು …… ಈಗ fb friend requestಗಳು ಬರೋದು ಅವುಗಳನ್ನ ನಾವು accept ಮಾಡೋದು, now u r friends ಅಂತ ನೊಟಿಫಿಕೇಷನ್ ಬರೋದು , ಇವನ್ನೆಲ್ಲ ನೋಡಿ ನಮ್ಮ ಬಾಲ್ಯದ ಸ್ನೇಹ ಮತ್ತು ಸ್ನೇಹಿತರು ನೆನಪಾದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv