ತಮ್ಮ ವಿಭಿನ್ನ ಕಾಸ್ಟ್ಯೂಮ್ ಮೂಲಕವೇ ಸದಾ ಸುದ್ದಿ ಆಗುವ ಹಿಂದಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಉರ್ಫಿ ಜಾವೇದ್, ಲೇಖಕ ಚೇತನ್ ಭಗತ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಚೇತನ್ ಭಗತ್ ಅವರ ಮೀಟು ಆರೋಪದ ವೇಳೆಯಲ್ಲಿ ಹರಿದಾಡಿದ ವಾಟ್ಸ್ ಅಪ್ ಚಾಟ್ ಗಳನ್ನು ಉರ್ಫಿ ಮತ್ತೆ ಶೇರ್ ಮಾಡಿದ್ದಾಳೆ. ಜೊತೆಗೆ ಮಹಿಳೆಯರು ಇಂತಿಷ್ಟೇ ಬಟ್ಟೆಗಳನ್ನು ಹಾಕಿಕೊಳ್ಳಿ ಅಂತ ಹೇಳುವುದಕ್ಕೆ ನೀವ್ಯಾರು ಎಂದು ಕೇಳಿದ್ದಾರೆ.
ಚೇತನ್ ಭಗತ್ ಕಾರ್ಯಕ್ರಮವೊಂದರಲ್ಲಿ ಯುವಕರ ಬಗ್ಗೆ ಮಾತನಾಡುತ್ತಾ, ‘ಇಂದಿನ ಯುವಕರಿಗೆ ಮೊಬೈಲ್ ಅಡ್ಡಿಯಾಗಿದೆ. ಅವರು ದಿನದ ಬಹಳ ಹೊತ್ತು ಮೊಬೈಲ್ ನಲ್ಲೇ ಕಳೆಯುತ್ತಾರೆ. ಉರ್ಫಿ ಜಾವೇದ್ ಹಾಕುವ ಕಾಸ್ಟ್ಯೂಮ್ ಗೆ ಲೈಕ್ ಹಾಗೂ ಕಾಮೆಂಟ್ ಮಾಡುವುದರಲ್ಲೇ ದಿನಗಳನ್ನು ಕಳೆಯುತ್ತಿದ್ದಾರೆ. ಪ್ರತಿಯೊಬ್ಬರಿಗೂ ಈ ಉರ್ಫಿ ಜಾವೇದ್ ಗೊತ್ತು ಅಂತೆಲ್ಲ ಮಾತನಾಡಿದ್ದರು. ಯಾವುದೇ ಕಾರ್ಯಕ್ರಮದಲ್ಲಿ ತನ್ನ ಹೆಸರನ್ನು ಪ್ರಸ್ತಾಪ ಮಾಡಿದ್ದಕ್ಕೆ ಉರ್ಫಿ ಗರಂ ಆಗಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಚೇತನ್ ಭಗತ್ ಸುದೀರ್ಘವಾಗಿ ಬರೆದುಕೊಂಡಿದ್ದರು. ಇದನ್ನೂ ಓದಿ:ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ರು `ಅಗ್ನಿಸಾಕ್ಷಿ’ಯ ವೈಷ್ಣವಿ ಗೌಡ
ಸೋಷಿಯಲ್ ಮೀಡಿಯಾ ಮೂಲಕ ಚೇತನ್ ಭಗತ್ ಅವರಿಗೆ ಟಾಂಗ್ ನೀಡಿದ್ದ ಉರ್ಫಿ, ‘ಕಾರ್ಯಕ್ರಮದಲ್ಲಿ ಅವರು ನನ್ನ ಹೆಸರನ್ನು ಎಳೆತರಬಾರದಿತ್ತು. ಯುವಕರ ಮನಸ್ಸನ್ನು ನಾನು ಹಾಳು ಮಾಡಿಲ್ಲ. ನನ್ನ ಚಿಕ್ಕಪ್ಪನ ವಯಸ್ಸಿನ ಚೇತನ್, ಈ ಹಿಂದೆ ಹುಡುಗಿಯರಿಗೆ ಅಶ್ಲೀಲ ಮಸೇಜ್ ಕಳುಹಿಸಿ ಮೀಟೂ ಆರೋಪಿಯಾಗಿದ್ದರು. ನನ್ನ ಕಾಸ್ಟ್ಯೂಮ್ ಬಗ್ಗೆ ಅವರಿಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ’ ಎಂದು ಬರೆದುಕೊಂಡಿದ್ದರು.
ಉರ್ಫಿಗೆ ಮತ್ತೆ ಪ್ರತಿಕ್ರಿಯೆ ನೀಡಿದ್ದ ಚೇತನ್ ಭಗತ್, ‘ನಾನು ಹೇಳಿದ್ದು ಬೇರೆ ಅರ್ಥದಲ್ಲಿ. ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಯುವಕರಿಗೆ ಆ ರೀತಿ ಸಲಹೆ ನೀಡಿದ್ದೆ. ಆದರೆ, ನನ್ನ ಮಾತನ್ನು ಬೇರೆ ರೀತಿಯಲ್ಲಿ ಅರ್ಥೈಸಲಾಗಿದೆ. ಆ ರೀತಿ ತಗೆದುಕೊಂಡಿದ್ದಕ್ಕೆ ವಿಷಾದವಿದೆ’ ಎಂದು ಹೇಳುವ ಮೂಲಕ ಈ ಪ್ರಕರಣವನ್ನು ತಣ್ಣಗಾಗಿಸಲು ಪ್ರಯತ್ನಿಸಿದ್ದರು. ಆದರೆ, ಅದು ತಣ್ಣಗಾಗುವಂತೆ ಕಾಣುತ್ತಿಲ್ಲ. ಚೇತನ್ ಭಗತ್ ಅವರ ಮೀಟೂ ಸಂದೇಶದ ಸ್ಕ್ರೀನ್ ಶಾಟ್ ಹಾಕುವ ಮೂಲಕ ಈ ಜಗಳವನ್ನು ಉರ್ಫಿ ಮುಂದುವರೆಸಿದ್ದಾರೆ. ಇದು ಎಲ್ಲಿಗೆ ಹೋಗಿ ಮುಟ್ಟುತ್ತೋ, ಕಾದು ನೋಡಬೇಕು.