ಕೋಲ್ಕತಾ: ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನವೇ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ವೃದ್ಧಿಮಾನ್ ಸಹಾ ಭರ್ಜರಿ ಆಟ ಪ್ರದರ್ಶಿಸಿದ್ದಾರೆ. ಕೇವಲ 20 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ.
ಕೋಲ್ಕತಾದಲ್ಲಿ ನಡೆಯುತ್ತಿರುವ ದೇಶಿಯ ಕ್ರಿಕೆಟ್ ಟೂರ್ನಿ ಜೆಸಿ ಮುಖರ್ಜಿ ಟಿ20 ಟ್ರೋಫಿಯಲ್ಲಿ ಮೋಹನ್ ಬಗಾನ್ ತಂಡದ ಪರ ಪ್ರತಿನಿಧಿಸುವ ಸಹಾ ಸಿಡಿಲಬ್ಬರದ ಶತಕ ದಾಖಲಿಸಿದ್ದಾರೆ. ಪಂದ್ಯದ ಆರಂಭಿಕರಾಗಿ ಇನ್ನಿಂಗ್ಸ್ ಆರಂಭಿಸಿದ ಸಹಾ ಕೇವಲ 22 ಎಸೆತಗಳಲ್ಲಿ 14 ಸಿಕ್ಸರ್, 4 ಬೌಂಡರಿಗಳ ಸಹಾಯದಿಂದ ಶತಕ ಸಿಡಿದರು.
Advertisement
!! A World Record !!
A Blistering batting performance by @Wriddhipops saha scored 102 in just 20 balls (14 sixes & 4 fours)
Mohun Bagan chased down the score of 151 in just 7 overs beating B.N.R by 10 wickts in J.C.Mukherjee Trophy.
Take a bow man !!#joymohunbagan pic.twitter.com/epJXoo92UR
— Mohun Bagan (@Mohun_Bagan) March 24, 2018
Advertisement
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ್ದ ಎದುರಾಳಿ ಬಿಎನ್‍ಆರ್ ರಿಕ್ರಿಯೇಷನ್ ತಂಡ 151 ರನ್ ಗುರಿ ನೀಡಿತ್ತು. ಸುಲಭ ಗುರಿಯನ್ನು ಬೆನ್ನತ್ತಿದ ಮೋಹನ್ ಬಗಾನ್ ತಂಡ ಸಹಾ ರ ಶತಕ (102 ರನ್)ದ ನೆರವಿನಿಂದ ಕೇವಲ ಏಳು ಓವರ್ ಗಳಲ್ಲಿ 154 ರನ್ ಗಳಿಸಿ ಜಯ ಪಡೆಯಿತು.
Advertisement
ಪಂದ್ಯದ ಬಳಿಕ ಮಾತನಾಡಿದ ಸಹಾ, ಇನ್ನಿಂಗ್ಸ್ ಮೊದಲ ಎಸೆತದಿಂದಲೇ ದೊಡ್ಡ ಹೊಡೆತಗಳನ್ನು ಸಿಡಿಸಲು ಪ್ರಯತ್ನಿಸಿದೆ. ಆದರೆ ಈ ಪಂದ್ಯದಲ್ಲಿ ದಾಖಲೆ ಬರೆಯುವ ಯೋಚನೆ ಇರಲಿಲ್ಲ. ಮುಂದಿನ ಐಪಿಎಲ್ ಟೂರ್ನಿಯನ್ನು ಮಾತ್ರ ಗಮನದಲ್ಲಿಟ್ಟು ವಿಭಿನ್ನ ಹೊಡೆತಗಳಿಗೆ ಕೈ ಹಾಕಿದೆ ಎಂದು ಸಹಾ ಹೇಳಿದ್ದಾರೆ.
Advertisement
2018 ಐಪಿಎಲ್‍ಗಾಗಿ ನಡೆದ ಹರಾಜಿನಲ್ಲಿ ಸಹಾ ಅವರನ್ನು ಸನ್‍ರೈಸರ್ಸ್ ಹೈದರಾಬಾದ್ ಬರೋಬ್ಬರಿ ಐದು ಕೋಟಿ ರೂ.ಗಳನ್ನು ನೀಡಿ ಖರೀದಿಸಿದೆ. ಈ ಮುನ್ನ ಐಪಿಎಲ್ ಟೂರ್ನಿಗಳಲ್ಲಿ ಸಹಾ ಚೆನ್ನೈ, ಕೋಲ್ಕತ್ತಾ ಹಾಗೂ ಪಂಜಾಬ್ ತಂಡಗಳನ್ನು ಪ್ರತಿನಿಧಿಸಿದ್ದರು.
2014 ರ ಐಪಿಎಲ್ ಫೈನಲ್‍ನಲ್ಲಿ ಶತಕ ಬಾರಿಸುವ ಮೂಳಕ ದಾಖಲೆ ನಿರ್ಮಿಸಿದ್ದರು. ಆದರೆ ದುರದೃಷ್ಟವಶಾತ್ ಈ ಪಂದ್ಯದಲ್ಲಿ ಕೋಲ್ಕತ್ತ ತಂಡ ಜಯಗಳಿಸಿ ಪ್ರಶಸ್ತಿ ಪಡೆದಿತ್ತು.