ರಾಂಚಿ: ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿಕೆಟ್ ಉಳಿಸಿಕೊಂಡು ಮೇಲುಗೈ ಸಾಧಿಸಿದರೂ ಮೊದಲ ದಿನ ಕ್ರೀಡಾಂಗಣದಲ್ಲಿ ಒಂದು ಪ್ರಸಂಗದಿಂದಾಗಿ ಆಟಗಾರರು ಮತ್ತು ಅಂಪೈರ್ ಬಿದ್ದು ಬಿದ್ದು ನಕ್ಕಿದ್ದಾರೆ.
ಆಗಿದ್ದು ಇಷ್ಟು 79.2 ನೇ ಓವರ್‍ನಲ್ಲಿ ಸ್ಟ್ರೈಕ್‍ನಲ್ಲಿ ನಾಯಕ ಸ್ಮಿತ್ 97 ರನ್ ಗಳಿಸಿ ಆಡುತ್ತಿದ್ದರು. ಜಡೇಜಾ ಎಸೆದ ಒಂದು ಎಸೆತ ಸ್ಮಿತ್ ಬ್ಯಾಟ್‍ನ ಬಳಿ ಬಂದು ಮೇಲಕ್ಕೆ ಚಿಮ್ಮಿತು. ಮೇಲಕ್ಕೆ ಚಿಮ್ಮಿದ ಕೂಡಲೇ ಮುಂದಕ್ಕೆ ಬಂದ ಕೀಪರ್ ವೃದ್ಧಿಮಾನ್ ಸಹಾ ಬಾಲನ್ನು ಎಲ್ಲಿದೆ ಎಂದು ನೋಡಿದ್ರು.
Advertisement
ಇದನ್ನೂ ಓದಿ:ಅಶ್ವಿನ್ ಬೌಲಿಂಗ್‍ನಲ್ಲಿ ಸಹಾ ಸೂಪರ್ ಡೈವಿಂಗ್ ಕ್ಯಾಚ್- ಸೊನ್ನೆ ಸುತ್ತಿದ ವೇಡ್
Advertisement
ಅಷ್ಟರಲ್ಲೇ ಸ್ಮಿತ್ ಎರಡು ಕಾಲಿನ ಮಧ್ಯದಲ್ಲಿ ಬಾಲ್ ಇರುವುದನ್ನು ನೋಡಿದ ಸಹಾ ಅದನ್ನು ಹಿಡಿಯಲು ಮುಂದಾದರು. ಸಹಾ ಹಿಡಿಯಲು ಮುಂದಾಗುತ್ತಿದ್ದಂತೆ ಸ್ಮಿತ್ ಬಾಲ್ ಸಿಗದಂತೆ ತಡೆಯಲು ನೆಲಕ್ಕೆ ಬಿದ್ದರು. ಸ್ಮಿತ್ ಬೀಳುವುದನ್ನು ನೋಡಿ ಸಹಾ ಬಾಲ್ ಹಿಡಿಯಲು ಅವರ ಮೇಲೆಯೇ ಬಿದ್ದರು. ಬಿದ್ದ ಬಳಿಕ ಬಾಲನ್ನು ಹಿಡಿದು ನಗುತ್ತಲೇ ಔಟ್ ಗೆ ಮನವಿ ಸಲ್ಲಿಸದರು.
Advertisement
ಸ್ಮಿತ್ ಮತ್ತು ವೃದ್ಧಿಮಾನ್ ಸಹಾ ಅವರ ಈ ಆಟವನ್ನು ನೋಡಿದ ಇಂಗ್ಲೆಂಡಿನ ಅಂಪೈರ್ ಇಯಾನ್ ಗೌಲ್ಡ್ ಬಿದ್ದು ಬಿದ್ದು ನಕ್ಕರು. ಅಂಪೈರ್ ಜೊತೆಗೆ ಆಟಗಾರರು ನಗಾಡಿದರು.
Advertisement
ಇದನ್ನೂ ಓದಿ: ಭರ್ಜರಿ ಶತಕ ಹೊಡೆದು ತಂಡವನ್ನು ಪಾರು ಮಾಡಿದ ಸ್ಮಿತ್