-ವಿಶ್ವ ಚಾಂಪಿಯನ್ ಆಗಿಯೇ ನಂಬರ್-1 ಆಗ್ಬೇಕು ಅಂದ್ರು ಬಜರಂಗ್
ನವದೆಹಲಿ: ಭಾರತದ ಸ್ಟಾರ್ ಕುಸ್ತಿಪಟು ಬಜರಂಗ್ ಪೂನಿಯಾ ಅವರು ವಿಶ್ವ ಕುಸ್ತಿಯಲ್ಲಿ ಹೊಸ ಮೈಲಿಗಲ್ಲು ಸೃಷ್ಠಿಸಿದ್ದಾರೆ. ಯುನೈಟೆಡ್ ವಲ್ರ್ಡ್ ವ್ರೆಸ್ಲಿಂಗ್ ಶನಿವಾರ ಬಿಡುಗಡೆ ಮಾಡಿದ ಪಟ್ಟಿಯ 65 ಕೆಜಿ ವಿಭಾಗದಲ್ಲಿ ಬಜರಂಗ್ ಪೂನಿಯಾ ಅವರು ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ.
ಈ ಸಾಧನೆ ಮಾಡಿದ ಭಾರತದ ಏಕೈಕ ಕುಸ್ತಿಪಟು ಎಂಬ ಹೆಗ್ಗಳಿಕೆಯನ್ನು 24 ವರ್ಷದ ಬಜರಂಗ್ ಪಡೆದುಕೊಂಡಿದ್ದಾರೆ. ಈ ವರ್ಷದಲ್ಲಿ ನಡೆದ ಕಾಮನ್‍ವೆಲ್ತ್ ಕ್ರೀಡಾಕೂಟ ಮತ್ತು ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ, ವಿಶ್ವ ಚಾಂಪಿಯನ್‍ಷಿಪ್‍ನಲ್ಲಿ ಬೆಳ್ಳಿ ಪದಕ ಸೇರಿದಂತೆ ವಿವಿಧ ಟೂರ್ನಿಗಳ ಮೂಲಕ ಒಟ್ಟು ಐದು ಪದಕಗಳನ್ನು ಬಜರಂಗ್ ತಮ್ಮದಾಗಿಸಿಕೊಂಡಿದ್ದರು.
Advertisement
Advertisement
ಐದು ಚಿನ್ನದ ಪದಕ ಪಡೆಯುವ ಮೂಲಕ 65 ಕೆ.ಜಿ. ವಿಭಾಗದ ರ‍್ಯಾಂಕಿಂಗ್ ಪಟ್ಟಿಯಲ್ಲಿ ಒಟ್ಟು 96 ಪಾಯಿಂಟ್‍ಗಳನ್ನು ಬಜರಂಗ್ ಗಳಿಸಿ, ಅಗ್ರಸ್ಥಾನ ಪಡೆದಿದ್ದಾರೆ. ಉಳಿದಂತೆ 66 ಪಾಯಿಂಟ್‍ಗಳು ಗಳಿಸಿರುವ ಕ್ಯೂಬಾದ ಅಲೆಕ್ಸಾಂಡ್ರೊ ಹೆನ್ರಿಕ್ ಎರಡನೇ ಸ್ಥಾನ ಕಾಯ್ದುಕೊಂಡಿದ್ದಾರೆ.
Advertisement
ಪ್ರತಿಯೊಬ್ಬ ಕ್ರೀಡಾಪಟು ನಂಬರ್ ಒನ್ ಆಗಬೇಕು ಎನ್ನುವ ಗುರಿ ಹೊಂದಿರುತ್ತಾರೆ. ಆದರೆ ನಾನು ವಿಶ್ವ ಚಾಂಪಿಯನ್ ಗಳಿಸುವ ಮೂಲಕ ನಂಬರ್ 1 ಆಗಬೇಕು ಎನ್ನುವ ಕನಸು ಕಟ್ಟಿಕೊಂಡಿರುವೆ. ಹೀಗಾಗಿ ಮುಂದಿನ ವರ್ಷದ ಪಂದ್ಯಕ್ಕೆ ಸಿದ್ಧತೆ ನಡೆಸಿರುವೆ ಎಂದು ಬಜರಂಗ್ ಹೇಳಿದ್ದಾರೆ.
Advertisement
ಬುಡಾಪೆಸ್ಟ್‍ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‍ಷಿಪ್‍ನ ಸೆಮಿಫೈನಲ್‍ನಲ್ಲಿ ಅಲೆಕ್ಸಾಂಡ್ರೊ ಹೆನ್ರಿಕ್ ವಿರುದ್ಧ ಬಜರಂಗ್ ಜಯಗಳಿಸಿದ್ದರು. ಆದರೆ ಫೈನಲ್‍ನಲ್ಲಿ ವಿಶ್ವ ಚಾಂಪಿಯನ್, ಜಪಾನ್‍ನ ಟಕುಟೊ ಒಟೊಗುರೊ ನಾಲ್ಕನೇ ಸ್ಥಾನದಲ್ಲಿದ್ದಾರೆ. ರಷ್ಯಾದ ಅಖ್ಮೆದ್ ಜಕಯೇವ್ 62 ಪಾಯಿಂಟ್‍ಗಳನ್ನು ಗಳಿಸಿ ಮೂರನೇ ಸ್ಥಾನ ಹಾಗೂ ಈ ಬಾರಿಯ ವಿಶ್ವ ಚಾಂಪಿಯನ್, ಜಪಾನ್‍ನ ಟಕುಟೊ ಒಟೊಗುರೊ 56 ಪಾಯಿಂಟ್‍ಗಳನ್ನು ಸಾಧಿಸಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.
Bajrang Punia, who won a silver medal in last month’s World Championships at Budapest, is now ranked No. 1 in the world, according to the ranking chart released by the United World Wrestling. He is the first Indian to be ranked no.1 pic.twitter.com/TMzQIyOwyQ
— ANI (@ANI) November 11, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews