ನವದೆಹಲಿ: ಭಾರತದ ಖ್ಯಾತ ಮಹಿಳಾ ಕುಸ್ತಿಪಟುಗಳಲ್ಲಿ ಒಬ್ಬರಾದ ಸಾಕ್ಷಿ ಮಲಿಕ್ (Sakshi Malik) ಅವರ ʻಆತ್ಮ ಚರಿತ್ರೆʼ ಪುಸ್ತಕ ಮುಂದಿನ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಲಿದೆ ಎಂದು ತಿಳಿದುಬಂದಿದೆ.
ಜಗ್ಗರ್ನಾಟ್ ಬುಕ್ಸ್ (Juggernaut Books) ಪ್ರಕಾಶನ ಈ ಪುಸ್ತಕ ಹೊರತರುತ್ತಿದ್ದು, ಜೋನಾಥನ್ ಸೆಲ್ವರಾಜ್ (Jonathan Selvaraj) ಸಹ-ಲೇಖಕರಾಗಿದ್ದಾರೆ. ʻವಿಟ್ನೆಸ್ʼ (Witness) ಹೆಸರಿನ ಪುಸ್ತಕ ಇದಾಗಿದೆ, ಅಂದ್ರೆ ಸಾಕ್ಷಿ ಎಂದರ್ಥ. ಈ ಪುಸ್ತಕದಲ್ಲಿ ಸಾಕ್ಷಿ ಮಲಿಕ್ ಅವರ ಬಾಲ್ಯದದಿಂದ ಜೀವನದುದ್ದಕ್ಕೂ ನಡೆದ ಸಿಹಿ-ಕಹಿ ಘಟನೆಗನ್ನು ಎಳೆಎಳೆಯಾಗಿ ವಿವರಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕೇಂದ್ರ ವಕ್ಫ್ ತಿದ್ದುಪಡಿ ಕಾಯ್ದೆಗೆ ರಾಜ್ಯ ವಕ್ಫ್ ಬೋರ್ಡ್ ವಿರೋಧ – ಖಂಡನಾ ನಿರ್ಣಯ ಅಂಗೀಕರಿಸುವಂತೆ ಸಿಎಂಗೆ ಮನವಿ
Advertisement
Advertisement
ಬಾಲ್ಯದಿಂದಲೂ ಸಾಕ್ಷಿ ಮಲಿಕ್ ನಡೆದು ಬಂದ ಹಾದಿ, ಜೀವನದಲ್ಲಿ ಕಂಡ ಏಳು-ಬೀಳುಗಳು, ರೋಹ್ಟಕ್‌ನಲ್ಲಿ ಕುಸ್ತಿಯ ಪರಿಚಯವಾಗಿದ್ದು, ರಿಯೋ ಒಲಿಂಪಿಕ್ಸ್‌ನ ಗೆಲುವು, ಒಲಿಂಪಿಕ್ಸ್ ನಂತರದ ಪ್ರಯಾಣ, ಜೀವನದ ಹೋರಾಟಗಳು ಮತ್ತು ಕ್ರೀಡೆಯಲ್ಲಿನ ಸೋಲು-ಗೆಲುವುಗಳ ಬಗ್ಗೆ ಹೇಳಿಕೊಂಡಿದ್ದಾರೆ. ಕೊನೆಯಲ್ಲಿ ಲೈಂಗಿಕ ಕಿರುಕುಳ ವಿರೋಧಿಸಿ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ದೆಹಲಿಯಲ್ಲಿ ನಡೆಸಿದ ಹೋರಾಟದ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
Advertisement
Advertisement
ಸಾಕ್ಷಿ ಮಲಿಕ್ ಅವರ ಕಥೆಯ ಉದ್ದಕ್ಕೂ ಭಾರತದಲ್ಲಿ ಮಹಿಳಾ ಕುಸ್ತಿ ಪ್ರಪಂಚದ ಆಕರ್ಷಕ ಒಳನೋಟಗಳು ಕಂಡುಬಂದಿವೆ. ಕುಸ್ತಿ ತರಬೇತಿ, ಶಿಬಿರದ ಜೀವನ, ದೇಹ ಚಿತ್ರಣ, ಡೇಟಿಂಗ್, ಅಂತಾರಾಷ್ಟ್ರೀಯ ಕುಸ್ತಿಪಟುವಾಗಲು ಏನೆಲ್ಲಾ ಮಾಡಬೇಕು? ಅನ್ನೋದನ್ನ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: IPL 2025 | ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ನೂತನ ಮೆಂಟರ್ ಆಗಿ ಜಹೀರ್ ಖಾನ್ ನೇಮಕ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾಕ್ಷಿ ಮಲಿಕ್, ಇದು ನನ್ನ ಜೀವನದ ನೈಜ ಮತ್ತು ಪ್ರಾಮಾಣಿಕ ಕಥೆ. ನನ್ನ ಬದುಕಿನ ಸಮಗ್ರವನ್ನೂ ಈ ಪುಸ್ತಕಕ್ಕೆ ಅರ್ಪಿಸಿದ್ದೇನೆ. ಓದುಗರು ಖಂಡಿತಾ ಇಷ್ಟಪಡುತ್ತಾರೆಂದು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ. ಇನ್ನೂ ಜಗ್ಗರ್‌ನಾಟ್ ಬುಕ್ಸ್‌ನ ಪ್ರಕಾಶಕ ಚಿಕಿ ಸರ್ಕಾರ್ ಪ್ರಕಾರ ಮಾತನಾಡಿ, ʻವಿಟ್ನೆಸ್ʼ ಅಂದ್ರೆ ಸಾಕ್ಷಿ ಎಂಬುದು ನಮ್ಮ ಕಾಲದ ಮಹಾನ್ ಆತ್ಮಚರಿತ್ರೆಗಳಲ್ಲಿ ಒಂದಾಗಿದೆ ಎಂದಿದ್ದಾರೆ. ಇದನ್ನೂ ಓದಿ: IPL 2025 | ಐಪಿಎಲ್ ಅಖಾಡದಲ್ಲಿ ʻಇಂಪ್ಯಾಕ್ಟ್ʼ ವಾರ್, ಪರ-ವಿರೋಧ ಚರ್ಚೆ; ಏನಿದು ನಿಯಮ?
ಕಳೆದ ವರ್ಷ ಡಿಸೆಂಬರ್ 24ರಂದು ಸಾಕ್ಷಿ ಮಲಿಕ್ ಕುಸ್ತಿಗೆ ವಿದಾಯ ಹೇಳಿದರು. ಇದನ್ನೂ ಓದಿ: T20 ವಿಶ್ವಕಪ್‌ಗೂ ಮುನ್ನ ರೋಹಿತ್ – ಪಾಂಡ್ಯ ಐಪಿಎಲ್ ಮುನಿಸು ಕೊನೆಗೊಂಡಿದ್ದು ಹೇಗೆ..?
ಏನಾಗಿತ್ತು?
ಈ ಹಿಂದೆ ಕುಸ್ತಿ ಫೆಡರೇಷನ್ (Wrestling Federation of India) ಅಧ್ಯಕ್ಷರಾಗಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ಬಂದಿದ್ದರಿಂದ ದೂರು ದಾಖಲಾಗಿತ್ತು. ನಂತರ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಭಾರೀ ಪ್ರತಿಭಟನೆ ನಡೆದಿದ್ದವು. ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್, ಬಜರಂಗ್ ಪುನಿಯಾ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದವು.
ಕೊನೆಗೆ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮಧ್ಯಪ್ರವೇಶಿಸಿ ಸಾಂಧಾನ ನಡೆಸಿದ ಬಳಿಕ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ವಾಪಸ್ ಪಡೆದಿದ್ದರು. 2024ರ ವರ್ಷಾರಂಭದಲ್ಲಿ ಬ್ರಿಜ್ ಭೂಷಣ್ ಅಧ್ಯಕ್ಷಗಿರಿಯಿಂದ ಕೆಳಗಿಳಿದಿದ್ದರು. ನಂತರ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಕುಸ್ತಿಪಟುಗಳ ಅಸಮಾಧಾನಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಜಗನ್ ರೆಡ್ಡಿಗೆ ಭಾರಿ ಹಿನ್ನಡೆ – ಪಕ್ಷದ ಇಬ್ಬರು ರಾಜ್ಯಸಭಾ ಸಂಸದರು ರಾಜೀನಾಮೆ; ಟಿಡಿಪಿ ಸೇರ್ಪಡೆಗೆ ಸಜ್ಜು