ಚಿತ್ರದುರ್ಗ: ಕೊರೊನಾ ಲಾಕ್‍ಡೌನ್‍ನಿಂದಾಗಿ ಅನೇಕರು ತುಂಬಾ ಸರಳವಾಗಿ ಮದುವೆಯಾಗುತ್ತಿದ್ದಾರೆ. ಇದೀಗ ಧಾರವಾಡ ಮೂಲದ ಅಂತಾರಾಷ್ಟ್ರೀಯ ಕುಸ್ತಿಪಟು ಚಿತ್ರದುರ್ಗದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ.
ಮಹಮ್ಮದ್ ರಫೀಕ್ ಹೋಳಿ ಕೊರೊನಾ ಸೋಂಕು ತಡೆಗೆ ದೇಶಾದ್ಯಂತ ಲಾಕ್‍ಡೌನ್ ಆಗಿರುವ ಹಿನ್ನೆಲೆಯಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. ಚಿತ್ರದುರ್ಗ ತಾಲೂಕಿನ ಮಠದ ಕುರುಬರಹಟ್ಟಿಯಲ್ಲಿ ಹೀನಾ ಕೌಸರ್ ಜೊತೆ ರಫೀಕ್ ಹೋಳಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇವರ ವಿವಾಹವು ಪೂರ್ವ ನಿಯೋಜಿತವಾಗಿದ್ದು, ಅದ್ಧೂರಿಯಾಗಿ ಚಿತ್ರದುರ್ಗದಲ್ಲಿ ವಿವಾಹ ಮಾಡಬೇಕೆಂದು ಕುಟುಂಬಸ್ಥರು ನಿರ್ಧರಿಸಿದ್ದರು. ಆದರೆ ಕೊರೊನಾ ಸೊಂಕು ಹರಡದಂತೆ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಇದರಿಂದ ಎರಡು ಮನೆಯ ಹಿರಿಯರು ಸಹ ಮದುವೆಯನ್ನು ಮುಂದೂಡಲು ಮುಂದಾಗಿದ್ದರು. ಆದರೆ ನಿಶ್ಚಯವಾಗಿದ್ದ ವಿವಾಹವನ್ನು ಮುಂದೂಡುವುದು ಬೇಡವೆಂದು ನಿರ್ಧರಿಸಿ ಕುಸ್ತಿ ಪೈಲ್ವಾನ್ ರಫೀಕ್ ಇದೇ ದಿನದಂದು ಸರಳವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ಸಾಂಪ್ರದಾಯಿಕ ವಿವಾಹವಾಗಿದ್ದಾರೆ.
ಕುಸ್ತಿ ಪೈಲ್ವಾನ್ ರಫೀಕ್ಈ ಮೂಲಕ ಇಡೀ ದೇಶವೇ ಕೊರೊನಾದಿಂದಾಗಿ ತಲ್ಲಣಗೊಂಡಿರುವ ವೇಳೆ ಅದ್ಧೂರಿತನದ ವಿವಾಹ ಬೇಡವೆಂದು ಅದ್ಧೂರಿ ತನಕ್ಕೆ ಬ್ರೇಕ್ ಹಾಕಿದ್ದಾರೆ. ಜೊತೆಗೆ ಸಾಮಾಜಿಕ ಅಂತರ ಹಾಗು ಸರ್ಕಾರದ ಆದೇಶವನ್ನು ಪಾಲಿಸುವ ಮೂಲಕ ಪೈಲ್ವಾನ್ ರಫೀಕ್ ಸರಳವಾಗಿ ಮದುವೆಯಾಗಿದ್ದಾರೆ.