ಯಾದಗಿರಿ: ಐತಿಹಾಸಿಕ ಸ್ಥಳಗಳ ಮೇಲೆ ನಿಧಿಗಳ್ಳರ ಕಣ್ಣು ಬಿದ್ದಿದ್ದು, ಯಾದಗಿರಿ ಕೋಟೆಯಲ್ಲಿ ನಿಧಿಗಾಗಿ ದೇವಸ್ಥಾನದ ಮುಂದಿನ ಮೂರ್ತಿಯನ್ನು ಧ್ವಂಸಗೊಳಿಸಿದ ಘಟನೆ ನಡೆದಿದೆ.
Advertisement
ಯಾದಗಿರಿ ಕೋಟೆಯಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ನಿಧಿಗಾಗಿ ಮಧ್ಯರಾತ್ರಿ ಕೋಟೆಯನ್ನು ಹತ್ತಿದ ಖದೀಮರು ಮೂರ್ತಿಯನ್ನು ಧ್ವಂಸಗೊಳಿಸಿದ್ದಾರೆ. ದೇವಸ್ಥಾನದ ಮುಂಭಾಗದ ನಂದಿ ಮೂರ್ತಿ ಕಿತ್ತೆಸೆದು ಮೂರ್ನಾಲ್ಕು ಅಡಿ ಆಳಕ್ಕೆ ಅಗೆದು ಪರಾರಿಯಾಗಿದ್ದಾರೆ. ಬೆಳಗ್ಗೆ ಭಕ್ತರು ದೇವಸ್ಥಾನಕ್ಕೆ ಬಂದಾಗ ಸುದ್ದಿ ತಿಳಿದೆ. ಇದಕ್ಕೂ ಮೊದಲು ಈ ಕೋಟೆಯಲ್ಲಿ ಸಾಕಷ್ಟು ಬಾರಿ ನಿಧಿಗಾಗಿ ಶೋಧ ನಡೆದಿತ್ತು. ಇದನ್ನು ಓದಿ: ಬಂಗಾರ ಕರಗಿಸಿ ಕೊಡುವುದಾಗಿ ನಂಬಿಸಿ ವಂಚನೆ ಮಾಡಿದ ವ್ಯಾಪಾರಿಯ ಬಂಧನ
Advertisement
Advertisement
ಕಳ್ಳರು ರಾತ್ರಿ ವೇಳೆ ಬಂದು ನಿಧಿಗಾಗಿ ಸಾಕಷ್ಟು ಬಾರಿ ಶೋಧ ನಡೆಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಸರಿಯಾದ ಕ್ರಮತೆಗದುಕೊಳ್ಳದೆ ನಿರ್ಲಕ್ಷಿಸುತ್ತಿದ್ದಾರೆ. ಇದರಿಂದಾಗಿ ಕೋಟೆಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯಾದಗಿರಿ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಒಬ್ಬ ಕ್ರಿಮಿನಲ್‍ನ ರಕ್ಷಿಸುತ್ತಿದ್ದೀರಾ – ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಕಿಡಿ