Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: WPL Champions | ʻಹೆಣ್ಮಕ್ಕಳೇ ಸ್ಟ್ರಾಂಗು ಗುರುʼ – 2ನೇ ಬಾರಿಗೆ ಚಾಂಪಿಯನ್‌ ಕಿರೀಟ; RCB ಹ್ಯಾಟ್ರಿಕ್‌ ಸಾಧನೆ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | WPL Champions | ʻಹೆಣ್ಮಕ್ಕಳೇ ಸ್ಟ್ರಾಂಗು ಗುರುʼ – 2ನೇ ಬಾರಿಗೆ ಚಾಂಪಿಯನ್‌ ಕಿರೀಟ; RCB ಹ್ಯಾಟ್ರಿಕ್‌ ಸಾಧನೆ!

Cricket

WPL Champions | ʻಹೆಣ್ಮಕ್ಕಳೇ ಸ್ಟ್ರಾಂಗು ಗುರುʼ – 2ನೇ ಬಾರಿಗೆ ಚಾಂಪಿಯನ್‌ ಕಿರೀಟ; RCB ಹ್ಯಾಟ್ರಿಕ್‌ ಸಾಧನೆ!

Public TV
Last updated: February 6, 2026 7:11 am
Public TV
Share
3 Min Read
RCB
SHARE

– ಜಾರ್ಜಿಯಾ, ಮಂಧಾನ ಮಿಂಚಿನ ಬ್ಯಾಟಿಂಗ್‌

ವಡೋದರಾ: ಇಂಡಿಯನ್‌ ಪ್ರೀಮಿಯರ್‌ಲೀಗ್‌ನಲ್ಲಿ 17 ವರ್ಷಗಳ ಕಾಲ ಟ್ರೋಫಿಗಾಗಿ ಸೆಣಸಾಡಿದ್ದ ಆರ್‌ಸಿಬಿ ಪುರುಷರ ತಂಡ ಕಳೆದ ವರ್ಷ ತನ್ನ 18ನೇ ಆವೃತ್ತಿಯಲ್ಲಿ ಟ್ರೋಫಿಗೆ ಮುತ್ತಿಟ್ಟಿತ್ತು. ಅದರ ಹಿಂದಿನ ವರ್ಷವೇ ಆರ್‌ಸಿಬಿ ಮಹಿಳಾ ತಂಡ (RCB Womens) ತನ್ನ 2ನೇ ಆವೃತ್ತಿಯಲ್ಲೇ ಟ್ರೋಫಿ ಗೆದ್ದು ಮಾದರಿಯಾಗಿತ್ತು. ಇದೀಗ 2ನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿರುವ ಬೆಂಗಳೂರು ಮಹಿಳಾ ತಂಡ ಹೆಣ್ಮಕ್ಕಳೇ ಸ್ಟ್ರಾಂಗು ಗುರು ಅನ್ನೋ ಮಾತನ್ನ ಮತ್ತೊಮ್ಮೆ ಸಾಬೀತು ಮಾಡಿದೆ. ಈ ಮೂಲಕ ಆರ್‌ಸಿಬಿ ಫ್ರಾಂಚೈಸಿ ಸತತ ಮೂರು ವರ್ಷ ಟ್ರೋಫಿ ಗೆದ್ದು ಹ್ಯಾಟ್ರಿಕ್‌ ಸಾಧನೆ ಮಾಡಿದೆ.

🚨 RCB NOW HOLDS THE IPL AND THE WPL TROPHY…!!! 🚨 pic.twitter.com/x77t5dpuKI

— Mufaddal Vohra (@mufaddal_vohra) February 5, 2026

ಪುರುಷರ ತಂಡವನ್ನ ಪ್ರೋತ್ಸಾಹಿಸುತ್ತಾ ಬರುತ್ತಿದ್ದ ಅಭಿಮಾನಿಗಳೂ ಮಹಿಳಾ ತಂಡದ ಗೆಲುವನ್ನ ಹೆಮ್ಮೆಯಿಂದ ಕೊಂಡಾಡಿದರು. ಕೊನೆಯ ರನ್‌ ಸಿಡಿಸುತ್ತಿದ್ದಂತೆ ಅಭಿಮಾನಿಗಳು ಮಹಿಳಾ ಮಣಿಗಳು ಮೈದಾನದಲ್ಲೇ ಕುಣಿದು ಕುಪ್ಪಳಿಸಿದರು. ಆರ್‌ಸಿಬಿ (RCB) ಪರ ಹರ್ಷೋದ್ಘಾರ ಕೂಗುತ್ತಾ ಗೆಲುವಿನ ಕೇಕೆ ಹಾಕಿದರು. ಆದ್ರೆ ಕಳೆದ ಮೂರು ಆವೃತ್ತಿಗಳಲ್ಲೂ ಫೈನಲ್‌ನಲ್ಲಿ ಸೋತಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ಸತತ 4ನೇ ಬಾರಿಯೂ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.

The class of Smriti Mandhana. 😍 pic.twitter.com/SM4HoCmMqe

— Mufaddal Vohra (@mufaddal_vohra) February 5, 2026

ಮ್ಯಾಚ್‌ ಕೈ ಚೆಲ್ಲಿದ ಕ್ಯಾಚ್‌ 
ಕೊನೇ 9 ಎಸೆತಗಳಲ್ಲಿ 13 ರನ್‌ ಬೇಕಿದ್ದಾಗ ಚಿನೆಲ್ಲೆ ಹೆನ್ರಿ ಎಸೆತದಲ್ಲಿ ಸ್ಮೃತಿ ಮಂಧಾನ ಕ್ಲೀನ್‌ ಬೌಲ್ಡ್‌ ಆದರು. ಇದರ ಮರು ಎಸೆತದಲ್ಲಿ ಕ್ರೀಸ್‌ಗೆ ಬಂದ ರಾಧಾ ಯಾದವ್‌ ಮೊದಲ ಎಸೆತದಲ್ಲೇ ಕ್ಯಾಚ್‌ ಕೊಟ್ಟಿದ್ದರು. ಆದ್ರೆ ಮಿನ್ನು ಮಣಿ ಮಾಡಿದ ಯಡವಟ್ಟಿನಿಂದ ಕ್ಯಾಚ್‌ ಕೈಚೆಲ್ಲುವ ಜೊತೆಗೆ 2 ರನ್‌ ಹೆಚ್ಚುವರಿಯಾಗಿ ಬಿಟ್ಟುಕೊಟ್ಟರು. ಇದು ಆರ್‌ಸಿಬಿ ತಂಡಕ್ಕೆ ನೆರವಾಯಿತು. ಮರು ಎಸೆತದಲ್ಲಿ 1 ರನ್‌ ಕದ್ದರು. ಇನ್ನೂ ಕೊನೇ ಓವರ್‌ನಲ್ಲಿ 10 ರನ್‌ ಬೇಕಿದ್ದಾಗ ಶ್ರೀಚಾರಿಣಿ ಬೌಲಿಂಗ್‌ನಲ್ಲಿದ್ದರು. ಮೊದಲ 2 ಎಸೆತದಲ್ಲಿ 2 ರನ್‌ ದಾಖಲಾಯಿತು. 3 ಮತ್ತು 4ನೇ ಎಸೆತಗಳನ್ನು ರಾಧಾ ಯಾದವ್‌ ಸತತವಾಗಿ ಬೌಂಡರಿಗಟ್ಟಿದರು. 2ನೇ ಬೌಂಡರಿ ಚಚ್ಚಿದಾಗ ರಾಧಾ ಯಾದವ್‌ ಹಿಟ್‌ ವಿಕೆಟ್‌ ಮಾಡಿಕೊಂಡಿದ್ದರು. ಆದಾಗ್ಯೂ ಬೌಂಡರಿ ಪರಿಗಣಿಸಿ ಆರ್‌ಸಿಬಿ ವಿಜಯಶಾಲಿಯನ್ನಾಗಿ ಘೋಷಿಸಲಾಯಿತು.

ECB

ಇಲ್ಲಿನ ವಡೋದರಾ (Vadodara) ಕೊಟಂಬಿ ಕ್ರಿಕೆಟ್‌ ಸ್ಟೇಡಿಯಂನಲ್ಲಿಂದು ನಡೆದ ಪಂದ್ಯದಲ್ಲಿ ಟಾಸ್‌ ಸೋತ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 203 ರನ್‌ ಬಾರಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಆರ್‌ಸಿಬಿ 19.4 ಓವರ್‌ಗಳಲ್ಲೇ 45 ವಿಕೆಟ್‌ ನಷ್ಟಕ್ಕೆ 204 ರನ್‌ ಬಾರಿಸಿ ಗೆಲುವು ಸಾಧಿಸಿತು. ಈ ಮೂಲಕ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ 2ನೇ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸಿದ ಮುಂಬೈ ಇಂಡಿಯನ್ಸ್‌ ತಂಡದ ಸಾಧನೆಯನ್ನು ಸರಿಗಟ್ಟಿತು.

Smriti Mandhana and Georgia Voll

ಮಂಧಾನ – ಜಾರ್ಜಿಯಾ ವೋಲ್‌ ಶತಕದ ಜೊತೆಯಾಟ 
9 ರನ್‌ಗಳಿಗೆ ಗ್ರೇಸ್‌ ಹ್ಯಾರಿಸ್‌ ಅವರ ಮೊದಲ ವಿಕೆಟ್‌ ಕಳೆದುಕೊಂಡ ಆರ್‌ಸಿಬಿ ಆತಂಕಕ್ಕೆ ಒಳಗಾಯಿತು. ಆ ಬಳಿಕ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಮಂಧಾನ, ಜಾರ್ಜಿಯಾ ವೋಲ್‌ ಉತ್ತಮ ಇನ್ನಿಂಗ್ಸ್‌ ಕಟ್ಟಿದರು. ಒಂದು ಕಡೆ ಜಾರ್ಜಿಯಾ ನಿಧಾನವಾಗಿ ರನ್‌ ಕಲೆಹಾಕುತ್ತಿದ್ದರೆ, ಮತ್ತೊಂದೆಡೆ ಸ್ಮೃತಿ ಮಂಧಾನ ಸಿಕ್ಸರ್‌, ಬೌಂಡರಿ ಚಚ್ಚುತ್ತಾ ಹೋದರು. 23 ಎಸೆತಗಳಲ್ಲೇ ಸ್ಫೋಟಕ ಫಿಫ್ಟಿ ಬಾರಿಸಿದ ಮಂಧಾನ ಒಟ್ಟು 41 ಎಸೆತಗಳಲ್ಲಿ 87 ರನ್‌ ಬಾರಿಸಿದ್ರು. ಇನ್ನು ಜಾರ್ಜಿಯಾ ವೋಲ್‌ 54 ಎಸೆತಗಳಲ್ಲಿ 79 ರನ್‌ ಚಚ್ಚಿದ್ರು. ಒಟ್ಟಾರೆ 95 ಎಸೆತಗಳಲ್ಲಿ ಈ ಜೋಡಿ 165 ರನ್‌ ಬಾರಿಸುವ ಮೂಲಕ ದಾಖಲೆಯ ಜೊತೆಯಾಟ ನೀಡಿತು. ಇವರಿಬ್ಬೆ ಬ್ಯಾಟಿಂಗ್‌ನಿಂದ ನಿರಾಳವಾಗಿ ಗೆಲುವು ಆರ್‌ಸಿಬಿ ಪಾಲಾಯಿತು.

Jemimah Rodrigues

ಡಬ್ಲ್ಯೂಪಿಎಲ್‌ ಇತಿಹಾಸದಲ್ಲೇ ಅತಿ ವೇಗದ ಅರ್ಧಶತಕ
ಡೆಲ್ಲಿ ನೀಡಿದ ಗುರಿ ಬೆನ್ನಟ್ಟಿದ ಆರ್​ಸಿಬಿ ಪರ ನಾಯಕಿ ಸ್ಮೃತಿ ಮಂಧಾನ ನಾಯಕತ್ವದ ಇನ್ನಿಂಗ್ಸ್ ಆಡುವ ಮೂಲಕ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರೊಂದಿಗೆ ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ದಾಖಲೆಯನ್ನು ಸ್ಮೃತಿ ನಿರ್ಮಿಸಿದರು.

ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ಪರ ನಾಯಕಿ ಜೆಮಿಮಾ ರೊಡ್ರಿಗ್ಸ್‌ ಸ್ಫೋಟಕ ಫಿಫ್ಟಿ ಬಾರಿಸಿದ್ದರು. ಕೊನೆಯಲ್ಲಿ ಚಿನೆಲ್ಲೆ ಹೆನ್ರಿ 15 ಎಸೆತಗಳಲ್ಲಿ ಸ್ಫೋಟಕ 35 ರನ್‌, ಲಾರಾ ವೋಲ್ವಾರ್ಡ್ 25 ಎಸೆತಗಳಲ್ಲಿ ಸ್ಫೋಟಕ 44 ರನ್‌ ಬಾರಿಸುವ ಮೂಲಕ ತಂಡದ ಮೊತ್ತವನ್ನ 200 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾಗಿದ್ದರು.

TAGGED:Georgia VollJemimah RodriguesLaura WolvaardtLauren BellNadine de KlerkRicha GhoshShafali VermaSmriti Mandhana
Share This Article
Facebook Whatsapp Whatsapp Telegram

Cinema news

Rashmika Mandanna Vijay Devarakonda 1
ವಿರೋಶ್‌ ಕಲ್ಯಾಣಕ್ಕೆ ಸ್ಯಾಂಡಲ್‌ವುಡ್‌ನ 11 ಮಂದಿಗೆ ಆಹ್ವಾನ
Cinema Latest Sandalwood Top Stories
Vijay Deverakonda
Rashmika-Vijay | ʻವಿರೋಶ್ʼ ಕಲ್ಯಾಣ – ಸತಿಪತಿಯಾದ ವಿಜಯ್, ರಶ್ಮಿಕಾ!
Cinema Latest Main Post Sandalwood
Rashmika Mandanna Vijay Devarakonda Wedding Decorated Kodagu Virajpet House
ರಶ್ಮಿಕಾ ಮಂದಣ್ಣ ಮದುವೆ – ಸಿಂಗಾರಗೊಂಡ ಕೊಡಗಿನ ಮನೆ
Cinema Districts Karnataka Kodagu Latest Sandalwood Top Stories
Ranveer Singh Rishab Shetty Kantara
ಸೂಪರ್ ಸ್ಟಾರ್ ಆದ ಮಾತ್ರಕ್ಕೆ ಹೇಗೆ ಬೇಕಾದ್ರೂ ವರ್ತಿಸಬಹುದಾ? – ರಣವೀರ್ ಸಿಂಗ್‌ಗೆ ಹೈಕೋರ್ಟ್ ಚಾಟಿ
Bengaluru City Cinema Court Karnataka Latest Top Stories

You Might Also Like

B K Hariprasad
Latest

ನಿರುದ್ಯೋಗ ಸಮಸ್ಯೆ ಬಗ್ಗೆ ಬಿಜೆಪಿ ನಾಯಕರು ಮಾತನಾಡುವುದು ಹಾಸ್ಯಾಸ್ಪದ: ಬಿ.ಕೆ.ಹರಿಪ್ರಸಾದ್‌

Public TV
By Public TV
12 minutes ago
PETROL 1
Automobile

ಏ.1 ರಿಂದ ಇ20 ಮಿಶ್ರಿತ RON 95 ಇರೋ ಪೆಟ್ರೋಲ್‌ ಮಾರಾಟ ಕಡ್ಡಾಯ

Public TV
By Public TV
12 minutes ago
BV Srinivas
Latest

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಹಕ್ಕಿದೆ – ಯೂಥ್ ಕಾಂಗ್ರೆಸ್ ನಾಯಕರ ಬಂಧನಕ್ಕೆ ಬಿ.ವಿ ಶ್ರೀನಿವಾಸ್ ಕಿಡಿ

Public TV
By Public TV
23 minutes ago
Bonu Komali
Latest

I love You So Much – ಅಮ್ಮನಿಗೆ ಸಂದೇಶ ಕಳುಹಿಸಿ ನೇಣಿಗೆ ಕೊರಳೊಡ್ಡಿದ ಯೂಟ್ಯೂಬರ್

Public TV
By Public TV
42 minutes ago
Ballary Bird
Bellary

ಮಾಲವಿ ಜಲಾಶಯದಲ್ಲಿ ಕ್ರೌಂಚ ಪಕ್ಷಿಗಳ ಕಲರವ

Public TV
By Public TV
1 hour ago
NCERT Supreme Court
Court

ನಿಮ್ಮ ಕ್ಷಮೆಯನ್ನು ಒಪ್ಪಲ್ಲ – NCERT ಪಠ್ಯ ಪುಸ್ತಕಕ್ಕೆ ಸುಪ್ರೀಂ ನಿಷೇಧ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?