ಮುಂಬೈ: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್‌ನ 2025ರ (IPL 2025) ಆವೃತ್ತಿಗೆ ಮೆಗಾ ಹರಾಜು ನಡೆಸಲು ಕೆಲವೇ ದಿನಗಳು ಬಾಕಿಯಿದೆ. ಈ ಹೊತ್ತಿನಲ್ಲೇ ಮಹಿಳಾ ಪ್ರೀಮಿಯರ್ ಲೀಗ್ (WPL 2025) ತನ್ನ 3ನೇ ಆವೃತ್ತಿಗೆ ಕಾಲಿಡಲು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ.
RCB RETAINED PLAYERS FOR WPL 2025. pic.twitter.com/MmggIUcjh1
— Mufaddal Vohra (@mufaddal_vohra) November 7, 2024
ಐಪಿಎಲ್ ಮೆಗಾ ಹರಾಜಿಗೆ ರೀಟೆನ್ ಆಟಗಾರರ ಪಟ್ಟಿ ಬಿಡುಗಡೆ ಮಾಡಿದಂತೆ, ಮಹಿಳಾ ಪ್ರೀಮಿಯರ್ ಲೀಗ್‌ನ ಮಿನಿ ಹರಾಜಿಗೆ 5 ಫ್ರಾಂಚೈಸಿಗಳು ರೀಟೆನ್ ಆಟಗಾರ್ತಿಯರ ಪಟ್ಟಿ ಬಿಡುಗಡೆ ಮಾಡಿವೆ. ಇದನ್ನೂ ಓದಿ: WPL Champions: ʻಹೆಣ್ಮಕ್ಕಳೇ ಸ್ಟ್ರಾಂಗು ಗುರುʼ – ಆರ್‌ಸಿಬಿ ಚೊಚ್ಚಲ ಚಾಂಪಿಯನ್!
MI RETAINED PLAYERS FOR WPL 2025. pic.twitter.com/aBfHA7T6EY
— Mufaddal Vohra (@mufaddal_vohra) November 7, 2024
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB Womens) 13 ಆಟಗಾರ್ತಿಯರನ್ನು ಉಳಿಸಿಕೊಂಡಿದ್ದು (Retentions), ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ 6 ಆಟಗಾರ್ತಿಯರನ್ನು ಹೊರದಬ್ಬಿದೆ. ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ತಲಾ 14 ಆಟಗಾರ್ತಿಯರನ್ನ ಉಳಿಸಿಕೊಂಡಿದ್ದು, ನಾಲ್ವರನ್ನ ಬಿಡುಗಡೆಗೊಳಿಸಿವೆ. ಇನ್ನುಳಿದಂತೆ ಯುಪಿ ವಾರಿಯರ್ಸ್ 15 ಹಾಗೂ ಗುಜರಾತ್ ಜೈಂಟ್ಸ್ ಫ್ರಾಂಚೈಸಿ 14 ಆಟಗಾರ್ತಿಯರನ್ನು ರೀಟೆನ್ ಮಾಡಿಕೊಂಡಿವೆ.
ಒಟ್ಟಾರೆ 5 ತಂಡಗಳು ಒಟ್ಟು 71 ಮಂದಿಯನ್ನು ತಂಡದಲ್ಲಿ ಉಳಿಸಿಕೊಂಡಿದ್ದು, 19 ಸ್ಥಾನಗಳು ಬಾಕಿಯಿವೆ. ಸ್ಮೃತಿ ಮಂಧಾನ, ಹರ್ಮನ್ ಪ್ರೀತ್ ಕೌರ್, ಮೆಗ್ ಲ್ಯಾನಿಂಗ್, ಹಲಿಸ್ಸಾ ಹೀಲಿ, ಬೆತ್ ಮೂನಿ ಕ್ಯಾಪ್ಸನ್‌ಗಳಾಗಿ ಮುಂದುವರಿದಿದ್ದಾರೆ.
DELHI CAPITALS RETAINED PLAYERS FOR WPL 2025. pic.twitter.com/HWUUmpQCky
— Mufaddal Vohra (@mufaddal_vohra) November 7, 2024
ಪರ್ಸ್‌ನಲ್ಲಿ ಉಳಿದಿರುವುದೆಷ್ಟು?
* ಆರ್‌ಸಿಬಿ – 3.25 ಕೋಟಿ ರೂ.
* ಡೆಲ್ಲಿ ಕ್ಯಾಪಿಟಲ್ಸ್ – 2.50 ಕೋಟಿ ರೂ.
* ಮುಂಬೈ ಇಂಡಿಯನ್ಸ್ – 2.65 ಕೋಟಿ ರೂ.
* ಯುಪಿ ವಾರಿಯರ್ಸ್ – 3.90 ಕೋಟಿ ರೂ.
* ಗುಜರಾತ್ ಜೈಂಟ್ಸ್ – 4.40 ಕೋಟಿ ರೂ.
The remaining purse for WPL teams. pic.twitter.com/4vc3SqRWhR
— Mufaddal Vohra (@mufaddal_vohra) November 7, 2024
ಮಂಧಾನ ದುಬಾರಿ:
ಮಹಿಳಾ ಪ್ರೀಮಿಯರ್ ಲೀಗ್‌ನ ಕಳೆದ ಎರಡೂ ಆವೃತ್ತಿಗಳಲ್ಲೂ ಸ್ಮೃತಿ ಮಂಧಾನ ಅತ್ಯಂತ ದುಬಾರಿ ಆಟಗಾರ್ತಿಯಾಗಿದ್ದಾರೆ. ಮೊದಲ 2023ರಲ್ಲಿ ನಡೆದ ಮೊದಲ ಆವೃತ್ತಿಗೆ ಆರ್‌ಸಿಬಿ ಫ್ರಾಂಚೈಸಿ ಮಂಧಾನರನ್ನ 3.40 ಕೋಟಿ ರೂ.ಗೆ ಖರೀದಿ ಮಾಡಿತ್ತು. ಇದನ್ನೂ ಓದಿ: WPL 2024: ಆರ್‌ಸಿಬಿ ಸ್ಟಾರ್ ಶ್ರೇಯಾಂಕ ಪಾಟೀಲ್‌ಗೆ ಮದುವೆ ಪ್ರಪೋಸಲ್ ಕೊಟ್ಟ ಅಭಿಮಾನಿ

ಮಹಿಳಾ ಪ್ರೀಮಿಯರ್ ಲೀಗ್‌ನ (WPL 2024) ಮೊದಲ ಆವೃತ್ತಿಯಲ್ಲಿ ಸತತ ಹೀನಾಯ ಸೋಲುಗಳೊಂದಿಗೆ ಲೀಗ್ ಸುತ್ತಿನಲ್ಲೇ ಹೊರಬಿದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ 2ನೇ ಆವೃತ್ತಿಯಲ್ಲೇ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿತು. ಈ ಮೂಲಕ ʻಹೆಣ್ಮಕ್ಕಳೇ ಸ್ಟ್ರಾಂಗು ಗುರುʼ ಎಂಬ ಮಾತನ್ನು ಮತ್ತೊಮ್ಮೆ ಸಾಬೀತು ಮಾಡಿದರು.
ಕನ್ನಡತಿಯ ಕೈಚಳಕ:
ಟಫ್ ಫೈಟ್ ನೀಡುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್‌ಗಳನ್ನ ಕಟ್ಟಿಹಾಕುವಲ್ಲಿ ಅಂದು ಕನ್ನಡತಿ ಶ್ರೇಯಾಂಕ ಪಾಟೀಲ್ ಯಶಸ್ವಿಯಾಗಿದ್ದರು. ಆರ್‌ಸಿಬಿ ಪರ ಬೌಲಿಂಗ್ ಕೈಚಳಕ ತೋರಿ 3.3 ಓವರ್‌ಗಳಲ್ಲಿ ಕೇವಲ 12 ರನ್ ಬಿಟ್ಟುಕೊಟ್ಟು 4 ವಿಕೆಟ್ ಕಿತ್ತರು. ಇದರೊಂದಿಗೆ ಸೋಫಿ ಮೊಲಿನೆಕ್ಸ್ 3 ವಿಕೆಟ್ ಹಾಗೂ ಆಶಾ ಸೋಭನಾ 2 ವಿಕೆಟ್ ಪಡೆದು ಮಿಂಚಿದ್ದರು. ಇದನ್ನೂ ಓದಿ: ಕೆಕೆಆರ್‌ನಿಂದ 13 ಕೋಟಿಗೆ ರಿಟೇನ್ ಬೆನ್ನಲ್ಲೇ ಐಷಾರಾಮಿ ಬಂಗಲೆ ಖರೀದಿಸಿದ ರಿಂಕು ಸಿಂಗ್


