ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್‌ನ 3ನೇ ಆವೃತ್ತಿಯಲ್ಲಿ ಹರ್ಮನ್ ಪ್ರೀತ್ ಕೌರ್ (Harmanpreet Kaur) ನಾಯಕತ್ವದ ಮುಂಬೈ ಇಂಡಿಯನ್ಸ್ (Mumbai Indians) ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ಫೈನಲ್ ಪಂದ್ಯದಲ್ಲಿ 8 ರನ್‌ಗಳ ರೋಚಕ ಜಯ ಸಾಧಿಸಿ 2ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.
ವಿಶೇಷವೆಂದ್ರೆ 2023ರ ಮೊದಲ ಆವೃತ್ತಿಯಲ್ಲಿ ಡೆಲ್ಲಿ ವಿರುದ್ಧವೇ ಜಯಿಸಿ ಮುಂಬೈ ಚಾಂಪಿಯನ್ ಆಗಿತ್ತು. ಇನ್ನೂ ಸತತ 3ನೇ ಬಾರಿ ಫೈನಲ್‌ನಲ್ಲಿ ಸೋತ ಡೆಲ್ಲಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.
🏆 Mumbai Indians – #𝗧𝗔𝗧𝗔𝗪𝗣𝗟 𝟮𝟬𝟮𝟱 𝗖. 𝗛. 𝗔. 𝗠. 𝗣. 𝗜. 𝗢. 𝗡. 𝗦 🏆
Scorecard ▶ https://t.co/2dFmlnwxVj #DCvMI | #Final | @mipaltan pic.twitter.com/JOV98PFNwq
— Women’s Premier League (WPL) (@wplt20) March 15, 2025
ಟರ್ನಿಂಗ್ ಸಿಕ್ಕಿದ್ದೆಲ್ಲಿ?
ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಡೆಲ್ಲಿ ತಂಡಕ್ಕೆ ಜೆಮಿಮಾ ಆಸರೆಯಾಗಿದ್ದರು. ಆದ್ರೆ 11ನೇ ಓವರ್‌ನಲ್ಲಿ ಅಮೆಲಿಯಾ ಕೇರ್ ಬೌಲಿಂಗ್‌ಗೆ ಬ್ಯಾಕ್ ಟು ಬ್ಯಾಕ್ ಬೌಂಡರಿ ಸಿಡಿಸುತ್ತಿದ್ದ ಜೆಮಿಮಾ 4ನೇ ಎಸೆತದಲ್ಲಿ ಸುಲಭ ಕ್ಯಾಚ್‌ಗೆ ತುತ್ತಾದರು. ಅಲ್ಲದೇ 18ನೇ ಓವರ್‌ನಲ್ಲಿ ನಾಟ್ ಸ್ಕಿವರ್ ಬ್ರಂಟ್ ಬೌಲಿಂಗ್‌ಗೆ ಬಂದಾಗ 4ನೇ ಎಸೆತದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಮಾರಿಜಾನ್ನೆ ಕಪ್, 5ನೇ ಎಸೆತದಲ್ಲಿ ಶಿಖಾ ಪಾಂಡೆ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದ್ರು. ಇದು ಮುಂಬೈ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು.
🏆 Mumbai Indians – #𝗧𝗔𝗧𝗔𝗪𝗣𝗟 𝟮𝟬𝟮𝟱 𝗖. 𝗛. 𝗔. 𝗠. 𝗣. 𝗜. 𝗢. 𝗡. 𝗦 🏆
Scorecard ▶ https://t.co/2dFmlnwxVj #DCvMI | #Final | @mipaltan pic.twitter.com/JOV98PFNwq
— Women’s Premier League (WPL) (@wplt20) March 15, 2025
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ನಾಯಕಿ ಹರ್ಮನ್ ಪ್ರೀತ್ ಕೌರ್ ಸ್ಫೋಟಕ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 149 ರನ್ ಬಾರಿಸಿತು. 150 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿ ವಿರೋಚಿತ ಸೋಲು ಕಂಡಿತು. ಮುಂಬೈ ಗೆಲುವಿನ ನಗೆ ಬೀರುತ್ತಿದ್ದಂತೆ ಫ್ರಾಂಚೈಸಿ ಮಾಲೀಕರಾದ ನೀತಾ ಅಂಬಾನಿ ನಾಯಕಿ ಹರ್ಮನ್ ಪ್ರೀತ್ ಅವರನ್ನ ಅಪ್ಪಿಕೊಂಡು ಸಂಭ್ರಮಿಸಿದರು.
ಚೇಸಿಂಗ್ ಆರಂಭಿಸಿದ ಡೆಲ್ಲಿ ಮಹಿಳಾ ತಂಡ ಸ್ಫೋಟಕ ಆರಂಭ ಪಡೆಯುವ ಉತ್ಸಾಹದಲ್ಲಿ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಮಧ್ಯಮ ಕ್ರಮಾಂಕದಲ್ಲಿ ಜೆಮಿಮಾ ರೊಡ್ರಿಗ್ಸ್ ಹಾಗೂ ಮಾರಿಜಾನ್ನೆ ಕಪ್ ಇನ್ನಿಂಗ್ಸ್ ಕಟ್ಟುವ ಪ್ರಯತ್ನ ಮಾಡಿದರು. ಆದ್ರೆ ಜೆಮಿಮಾ 30 ರನ್, ಮಾರಿಜಾನ್ನೆ ಕಪ್ 40 ರನ್ (26 ಎಸೆತ, 2 ಸಿಕ್ಸರ್, 5 ಬೌಂಡರಿ) ಗಳಿಸಿ ಔಟಾಗುತ್ತಿದ್ದಂತೆ ಡೆಲ್ಲಿ ತಂಡದ ಗೆಲುವಿನ ಕಸನಸು ಭಗ್ನವಾಯಿತು. ಕೊನೆಯಲ್ಲಿ ನಿಕಿ ಪ್ರಯಾಸ್ 25 ರನ್ ರನ್ ಕೊಡುಗೆ ನೀಡಿದರು.
ಮುಂಬೈ ಪರ ನಾಟ್ ಸ್ಕೀವರ್ ಬ್ರಂಟ್ 3 ವಿಕೆಟ್ ಕಿತ್ತರೆ, ಅಮೇಲಿಯಾ ಕೇರ್ 2 ವಿಕೆಟ್ ಹಾಗೂ ಶಭಮನ್ ಇಸ್ಮಾಯಿಲ್, ಹೇಳಿ ಮ್ಯಾಥ್ಯೂಸ್, ಸೈಕಾ ಇಶಾಕ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಮುಂಬೈ ಆರಂಭದಲ್ಲಿ ವಿಕೆಟ್ ಕಳೆದುಕೊಂಡಿತ್ತು. ಆದ್ರೆ 3ನೇ ವಿಕೆಟ್‌ಗೆ ಜೊತೆಯಾದ ನಟಾಲಿ ಸ್ಕಿವರ್ ಬ್ರಂಟ್ ಹಾಗೂ ನಾಯಕಿ ಹರ್ಮನ್ ಪ್ರೀತ್ ಕೌರ್ ಇನ್ನಿಂಗ್ಸ್ ಕಟ್ಟುವಲ್ಲಿ ಯಶಸ್ವಿಯಾದರು. 3ನೇ ವಿಕೆಟ್‌ಗೆ ಈ ಜೋರಿ 62 ಎಸೆತಗಳಲ್ಲಿ 89 ರನ್‌ಗಳ ಜೊತೆಯಾಟ ನೀಡಿತು. ಇದು ತಂಡದ ಮೊತ್ತ ಹೆಚ್ಚಿಸಲು ಸಹಕಾರಿಯಾಯ್ತು. ಹರ್ಮನ್ ಪ್ರೀತ್ 44 ಎಸೆತಗಳಲ್ಲಿ ಸ್ಫೋಟಕ 66 ರನ್ (2 ಸಿಕ್ಸರ್, 9 ಬೌಂಡರಿ) ಚಚ್ಚಿದ್ರೆ, ಬ್ರಂಟ್ 28 ಎಸೆತಗಳಲ್ಲಿ 30 ರನ್ ಕೊಡುಗೆ ನೀಡಿದರು. ಇನ್ನುಳಿದ ಆಟಗಾರ್ತಿಯರು ಅಲ್ಪ ಮೊತ್ತಕ್ಕೆ ಪೆವಿಲಿಯನ್‌ಗೆ ಮರಳಿದರು.
ಡೆಲ್ಲಿ ಪರ ಮಾರಿಜಾನ್ನೆ ಕಪ್, ಜೆಸ್ ಜೊನಾಸೆನ್, ಶ್ರೀ ಚಾರಿಣಿ ತಲಾ 2 ವಿಕೆಟ್ ಕಿತ್ತರೆ, ಅನಬೆಲ್ 1 ವಿಕೆಟ್ ಪಡೆದರು.