ಬೆಂಗಳೂರು: ಹೇಯ್ಲಿ ಮ್ಯಾಥ್ಯೂಸ್, ನ್ಯಾಟ್ ಸಿವರ್-ಬ್ರಂಟ್ ಆಕರ್ಷಕ ಫಿಫ್ಟಿ ಆಟದ ನೆರವಿನಿಂದ ಯುಪಿ ವಿರುದ್ಧ ಮುಂಬೈ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಯುಪಿ 20 ಓವರ್‌ಗಳಿಗೆ 9 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತು. 143 ರನ್ ಟಾರ್ಗೆಟ್ ಬೆನ್ನತ್ತಿದ ಮುಂಬೈ 17 ಓವರ್‌ಗಳಿಗೆ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪುವಲ್ಲಿ ಯಶಕಂಡಿತು.
ಹೇಯ್ಲಿ ಮ್ಯಾಥ್ಯೂಸ್ ಮತ್ತು ನ್ಯಾಟ್ ಸಿವರ್-ಬ್ರಂಟ್ ಇಬ್ಬರ ಡಬಲ್ ಫಿಫ್ಟಿ ಆಟ ಮುಂಬೈ ತಂಡಕ್ಕೆ ಸುಲಭ ಜಯ ತಂದುಕೊಟ್ಟಿತು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಯುಪಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಗ್ರೇಸ್ ಹ್ಯಾರಿಸ್ (45), ದಿನೇಶ್ ವೃಂದಾ (33) ಬಿಟ್ಟರೆ ಯಾವೊಬ್ಬ ಆಟಗಾರ್ತಿ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಕ್ಯಾಪ್ಟನ್ ದೀಪ್ತಿ ಶರ್ಮಾ (4) ಕೂಡ ನಿರಾಸೆ ಮೂಡಿಸಿದರು.
ಶ್ವೇತಾ ಸೆಹ್ರಾವತ್ 19, ಉಮಾ ಚೆಟ್ರಿ 13 ರನ್ ಕಲೆಹಾಕಿದರು. ಕೊನೆಗೆ 9 ವಿಕೆಟ್ ನಷ್ಟಕ್ಕೆ ಯುಪಿ 142 ರನ್ ಗಳಿಸಿತು. ಮುಂಬೈ ಪರ ಬ್ರಂಟ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. 4 ಓವರ್‌ಗಳಿಗೆ ಕೇವಲ 18 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಿತ್ತರು. ಶಬ್ನಿಮ್ ಇಸ್ಮಾಯಿಲ್, ಸಂಸ್ಕೃತಿ ಗುಪ್ತಾ ತಲಾ 2 ಹಾಗೂ ಹೇಯ್ಲಿ ಮ್ಯಾಥ್ಯೂಸ್, ಅಮೆಲಿಯಾ ಕೆರ್ ತಲಾ 1 ವಿಕೆಟ್ ಪಡೆದರು.