– ದೀಪ್ತಿ ಶರ್ಮಾ ಅರ್ಧಶತಕದ ಹೋರಾಟ ವ್ಯರ್ಥ
– ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯದಲ್ಲಿ ಗೆದ್ದು ಬೀಗಿದ ಗುಜರಾತ್
ನವದೆಹಲಿ: ದೀಪ್ತಿ ಶರ್ಮಾ (Deepti Sharma) ಅವರ ಸ್ಫೋಟಕ ಬ್ಯಾಟಿಂಗ್ ಹೊರತಾಗಿಯೂ ಗುಜರಾತ್ ಜೈಂಟ್ಸ್ (Gujarat Giants) ಮಹಿಳಾ ತಂಡ, ಯುಪಿ ವಾರಿಯರ್ಸ್ ವಿರುದ್ಧ 8 ರನ್‌ಗಳ ಜಯ ಸಾಧಿಸಿದೆ. ಪ್ಲೇಫ್ ರೇಸ್‌ನಲ್ಲಿದ್ದ ಯುಪಿ ವಾರಿಯರ್ಸ್ ತಂಡ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಈ ಸೋಲಿನಿಂದ ಆರ್‌ಸಿಬಿ (RCB) ಪ್ಲೇ ಆಫ್ ಖಚಿತಪಡಿಸಿಕೊಂಡಿದೆ.
Advertisement
ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತ್ತು. 153 ರನ್‌ಗಳ ಗುರಿ ಬೆನ್ನತ್ತಿದ್ದ ಯುಪಿ ವಾರಿಯರ್ಸ್ (UP Warriorz) 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಈ ಸೋಲಿನೊಂದಿಗೆ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿತು. ಇದನ್ನೂ ಓದಿ: ಭಾರೀ ಹೈಡ್ರಾಮಾ ಬಳಿಕ ಟ್ರಯಲ್ಸ್‌ನಲ್ಲಿ ವಿನೇಶ್‌ಗೆ ವಿಜಯ – ಪ್ಯಾರಿಸ್ ಒಲಿಂಪಿಕ್ಸ್ ಕನಸು ಜೀವಂತ
Advertisement
Advertisement
ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಹೀನಾಯ ಸೋಲನುಭವಿಸಿದ್ದ ಗುಜರಾತ್ ಜೈಂಟ್ಸ್ ತಂಡ ಬಳಿಕ ಮೂರು ಪಂದ್ಯಗಳಲ್ಲಿ ಸುಧಾರಿತ ಪ್ರದರ್ಶನ ನೀಡಿತ್ತು. ಸದ್ಯ 7 ಪಂದ್ಯಗಳಲ್ಲಿ 2 ರಲ್ಲಿ ಗೆಲುವು ಸಾಧಿಸಿರುವ ಗುಜರಾತ್ ಜೈಂಟ್ಸ್ ಮಾ.13 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊನೆಯ ಪಂದ್ಯವನ್ನಾಡಲಿದೆ. ಈ ಪಂದ್ಯದಲ್ಲಿ ಗೆದ್ದರೂ ಸೋತರೂ ಗುಜರಾತ್ ತಂಡ ಮನೆಗೆ ತೆರಳಬೇಕಿದೆ. ಯುಪಿ ವಾರಿಯರ್ಸ್ ತಂಡವು ತನ್ನ ಲೀಗ್ ಸುತ್ತಿನ ಎಲ್ಲಾ ಪಂದ್ಯಗಳನ್ನಾಡಿದ್ದು, ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಹೀಗಾಗಿ 3ನೇ ಸ್ಥಾನದಲ್ಲಿರುವ ಆರ್‌ಸಿಬಿ ಮಾ.12 ರಂದು ನಡೆಯಲಿರುವ ಕೊನೆಯ ಲೀಗ್ ಪಂದ್ಯದಲ್ಲಿ ಗೆದ್ದರೂ ಸೋತರೂ ಪ್ಲೇ ಆಫ್ ತಲುಪಲಿದೆ.
Advertisement
ಗುಜರಾತ್ ಜೈಂಟ್ಸ್ ಪರ ಲಾರಾ ವೊಲ್ವಾರ್ಡ್ಟ್ 43 ರನ್, ಬೆತ್ ಮೂನಿ 74 ರನ್ ಹಾಗೂ ಆಶ್ಲೀಗ್ ಗಾರ್ಡ್ನರ್ 15 ರನ್, ಕ್ಯಾಥರಿನ್ ಬ್ರೈಸ್ 11 ರನ್ ಗಳಿಸಿದ್ರೆ ಉಳಿದವರು ಅಲ್ಪಮೊತ್ತಕ್ಕೆ ನಿರ್ಗಮಿಸಿದರು. ಚೇಸಿಂಗ್ ಆರಂಭಿಸಿದ ಯುಪಿ ವಾರಿಯರ್ಸ್ ತಂಡದ ಪರ ಕೊನೆಯವರೆಗೂ ಹೋರಾಡಿದ ದೀಪ್ತಿ ಶರ್ಮಾ 60 ಎಸೆತಗಳಲ್ಲಿ 4 ಸಿಕ್ಸರ್, 9 ಬೌಂಡರಿಗಳೊಂದಿಗೆ 88 ರನ್ ಗಳಿಸಿದ್ರೆ, ಪೂನಂ ಖೇಮ್ನಾರ್ 36 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದರು.ಇದನ್ನೂ ಓದಿ: ಐತಿಹಾಸಿಕ ಸಾಧನೆ ಬೆನ್ನಲ್ಲೇ ಬಿಸಿಸಿಐನಿಂದ ಗುಡ್‌ನ್ಯೂಸ್ – ವಾರ್ಷಿಕ ಸಂಬಳ ಹೊರತುಪಡಿಸಿ ವಿಶೇಷ ವೇತನ ಘೋಷಣೆ