ಒಂದಲ್ಲ ಎರಡು ಪ್ರಶಸ್ತಿ ಗೆದ್ದ ಕನ್ನಡತಿ ಶ್ರೇಯಾಂಕಾ ಪಾಟೀಲ್‌

Public TV
2 Min Read
Shreyanka Patil

ನವದೆಹಲಿ: ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ (WPL) ಆರ್‌ಸಿಬಿ (RCB) ಪರ ಅತ್ಯುತ್ತಮ ಆಟ ಪ್ರದರ್ಶನ ನೀಡಿದ ಕನ್ನಡತಿ ಶ್ರೇಯಾಂಕಾ ಪಾಟೀಲ್‌ (Shreyanka Patil) ಎರಡು ಪ್ರಶಸ್ತಿಗಳನ್ನು ಮುಡಿಗೇರಿಸಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಈ ಟೂರ್ನಿಯಲ್ಲಿ ಒಟ್ಟು13 ವಿಕೆಟ್‌ ಪಡೆಯುವ ಮೂಲಕ ನೇರಳೆ ಕ್ಯಾಪ್‌ (Purple Cap) ಪಡೆದಿದ್ದಾರೆ. ಕೈಗೆ ಗಾಯಗೊಂಡ ಪರಿಣಾಮ ಶ್ರೇಯಾಂಕಾ ಪಾಟೀಲ್‌ 2 ಪಂದ್ಯ ಆಡಿರಲಿಲ್ಲ. ಹೀಗಾಗಿ ಕೇವಲ 8 ಪಂದ್ಯವಾಡಿ 13 ವಿಕೆಟ್‌ ಕಿತ್ತು ವಿಶೇಷ ಸಾಧನೆ ಮಾಡಿದ್ದಾರೆ.

wpl championship rcb 2

ಅಷ್ಟೇ ಅಲ್ಲದೇ ಈ ಟೂರ್ನಿಯ ಉದಯೋನ್ಮುಖ ಆಟಗಾರ್ತಿ (Emerging Player) ಎಂಬ ಪ್ರಶಸ್ತಿಯನ್ನು 21 ವರ್ಷದ ಶ್ರೇಯಾಂಕಾ ಪಾಟೀಲ್‌ ಗೆದ್ದುಕೊಂಡಿದ್ದಾರೆ. ಈ ಪ್ರಶಸ್ತಿ ಸಿಗಲು ಕಾರಣ ಇದೆ. ಆರಂಭದ ಪಂದ್ಯಗಳಲ್ಲಿ ಶ್ರೇಯಾಂಕಾ ಪಾಟೀಲ್‌ ಬೌಲಿಂಗ್‌ ಲಯ ಕಂಡುಕೊಳ್ಳಲು ವಿಫಲರಾಗಿದ್ದರೂ ಕೊನೆ ಕೊನೆಗೆ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ್ದರು.  ಇದನ್ನೂ ಓದಿ: ಕೊನೆಗೂ ಕನಸು ನನಸು – ಬೆಂಗಳೂರಿನಲ್ಲಿ ರಾತ್ರಿ ಆರ್‌ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ

ಮುಂಬೈ ವಿರುದ್ಧ ಎಲಿಮಿನೇಟರ್‌ ಪಂದ್ಯದಲ್ಲಿ 4 ಓವರ್‌ ಎಸೆದು 16 ರನ್‌ ನೀಡಿ 2 ವಿಕೆಟ್‌ ಪಡೆದಿದ್ದರು. ಈ ಪಂದ್ಯದಲ್ಲಿ ಮುಂಬೈ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರ ವಿಕೆಟ್‌ ಪಡೆಯುವ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದ್ದರು.

ಫೈನಲ್‌ ಪಂದ್ಯದಲ್ಲಿ 6ನೇ ಅವರಾಗಿ ಬೌಲಿಂಗ್‌ಗೆ ಇಳಿದ ಶ್ರೇಯಾಂಕಾ 3.3 ಓವರ್‌ ಎಸೆದು 12 ರನ್‌ ನೀಡಿ 4 ವಿಕೆಟ್‌ ಪಡೆದರು. ಅದರಲ್ಲೂ ಡೆಲ್ಲಿ ನಾಯಕಿ ಮೆಗ್‌ ಲ್ಯಾನಿಂಗ್‌ ಅವರನ್ನು ಎಲ್‌ಬಿಗೆ ಕೆಡವು ಮೂಲಕ ಆರ್‌ಸಿಬಿಗೆ ಮುನ್ನಡೆ ತಂದುಕೊಟ್ಟರು. ಆರ್‌ಸಿಬಿಗೆ ಗೆಲುವಿನ ಹಿಂದಿನ ಈ ಸಾಧನೆಗೆ ಅರ್ಹವಾಗಿಯೇ ಶ್ರೇಯಾಂಕಾ ಪಾಟೀಲ್‌ಗೆ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿ ಲಭಿಸಿದೆ. ಇದನ್ನೂ ಓದಿ: WPL Champions: ʻಹೆಣ್ಮಕ್ಕಳೇ ಸ್ಟ್ರಾಂಗು ಗುರುʼ – ಆರ್‌ಸಿಬಿ ಚೊಚ್ಚಲ ಚಾಂಪಿಯನ್‌!

ಸಾಮಾಜಿಕ ಜಾಲತಾಣದಲ್ಲಿ ಶ್ರೇಯಾಂಕಾ ಪರ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಆರ್‌ಸಿಬಿ ತನ್ನ ಮೊದಲ ಐಪಿಎಲ್‌ ಪಂದ್ಯವಾಡಿದಾಗ ಅವರಿಗೆ 5 ವರ್ಷವಾಗಿತ್ತು. ಆದರೆ ವಿರಾಟ್‌ ಕೊಹ್ಲಿಗಿಂತ ಮೊದಲು ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ ಎಂದು ಅಭಿಮಾನಿಗಳು ಶ್ಲಾಘಿಸುತ್ತಿದ್ದಾರೆ.

Share This Article