ಚಾಟ್ ಎಂದರೇ ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಅದರಲ್ಲಿಯೂ ಭಿನ್ನ ರೀತಿಯ ಚಾಟ್ ಟ್ರೈ ಮಾಡಲು ಎಲ್ಲ ಫುಡ್ ಪ್ರಿಯರಿಗೂ ಇಷ್ಟವಿರುತ್ತೆ. ಅದಕ್ಕೆ ಇಂದು ನಾನ್ ವೆಜ್ ಪ್ರಿಯರಿಗಾಗಿ ವಿಶೇಷ ರೆಸಿಪಿಯನ್ನು ಹೇಳಿಕೊಡುತ್ತಿದ್ದೇವೆ. ನೀವೂ ಟ್ರೈ ಮಾಡಿ ಸವಿಯಿರಿ. ಇದನ್ನು ಮಾಡಲು ತುಂಬಾ ಸಿಂಪಲ್ ಆಗಿದ್ದು, ಹೆಚ್ಚು ಸಾಮಾಗ್ರಿಗಳು ಬೇಕಾಗಿರುವುದಿಲ್ಲ.
Advertisement
ಬೇಕಾಗಿರುವ ಸಾಮಾಗ್ರಿಗಳು:
* ತುಪ್ಪ – 2 ಟೀಸ್ಪೂನ್
* ಕಟ್ ಮಾಡಿದ ಬುನ್‍ಲೆಸ್ಸ್ ಚಿಕನ್ – 2 ಕಪ್
* ಕಟ್ ಮಾಡಿದ ಈರುಳ್ಳಿ – 1 ಕಪ್
* ಹಸಿರು ಮೆಣಸಿನಕಾಯಿ – 2
* ಹುಣಸೆಹಣ್ಣಿನ ಪೇಸ್ಟ್ – 4 ಟೀಸ್ಪೂನ್
Advertisement
Advertisement
* ಗರಂ ಮಸಾಲಾ – 1 ಟೀಸ್ಪೂನ್
* ಚಾಟ್ ಮಸಾಲಾ – 2 ಟೀಸ್ಪೂನ್
* ಕಟ್ ಮಾಡಿದ ಟೊಮೆಟೊ – ಅರ್ಧ ಕಪ್
* ಉದ್ದವಾಗಿ ಕಟ್ ಮಾಡಿದ ಸೌತೆಕಾಯಿ – 1 ಕಪ್
* ಮೆಣಸಿನ ಪುಡಿ – 1 ಟೀಸ್ಪೂನ್
* ಕೊತ್ತಂಬರಿ ಸೊಪ್ಪು – ಅರ್ಧ ಕಪ್
* ರುಚಿಗೆ ತಕ್ಕಷ್ಟು ಉಪ್ಪು
Advertisement
ಮಾಡುವ ವಿಧಾನ:
* ಗ್ಯಾಸ್ ಮೇಲೆ ಬಾಣಲೆ ಇಟ್ಟು ಹೆಚ್ಚು ಉರಿ ಇಟ್ಟು ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಚಿಕನ್ ತುಂಡುಗಳನ್ನು ಹಾಕಿ ಎಲ್ಲ ಕಡೆ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ನಂತರ ಬಾಣಲೆಯಿಂದ ಬೇರೆ ಕಪ್‍ಗೆ ಹಾಕಿಕೊಳ್ಳಿ.
* ಉರಿಯನ್ನು ಕಡಿಮೆ ಮಾಡಿ ಉಳಿದ ಎಣ್ಣೆಯನ್ನು ಸೇರಿಸಿ ಅದಕ್ಕೆ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿಗಳನ್ನು ಹಾಕಿ ಫ್ರೈ ಮಾಡಿ, ಇದು ಸುಮಾರು 5 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
* ಅದಕ್ಕೆ ಹುಣಸೆಹಣ್ಣಿನ ಪೇಸ್ಟ್, ಗರಂ ಮಸಾಲಾ ಮತ್ತು ಚಾಟ್ ಮಸಾಲಾ ಜೊತೆಗೆ ಬೇಯಿಸಿದ ಚಿಕನ್ ಮತ್ತು ಈರುಳ್ಳಿಯನ್ನು ಸೇರಿಸಿ 3 ನಿಮಿಷಗಳ ಕಾಲ ಹುರಿಯಿರಿ.
* ಗ್ರಾಸ್ ಆಫ್ ಮಾಡಿ, ಟೊಮೆಟೊ ಮತ್ತು ಸೌತೆಕಾಯಿಯನ್ನು ಸೇರಿಸಿ, ನಂತರ ರುಚಿಗೆ ತಕ್ಕಷ್ಟು ಮಸಾಲೆ ಹಾಕಿ.
– ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಮತ್ತು ತಕ್ಷಣವೇ ಬಡಿಸಿ. ಆನಂದಿಸಿ!