BollywoodCinemaLatestMain Post

‘ಎಕ್ಸ್’ ಜೊತೆ ‘ಸೆಕ್ಸ್’ ಮಾಡುವಿರಾ?: ಆ ಹುಡುಗಿಯರ ಮುಂದೆ ಕರಣ್ ಜೋಹಾರ್ ಪ್ರಶ್ನೆ

Advertisements

ಟ, ನಿರ್ಮಾಪಕ, ನಿರ್ದೇಶಕ ಕರಣ್ ಜೋಹಾರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮ ದಿನಕ್ಕೊಂದು ಹಾಟ್ ಟಾಪಿಕ್ ಒದಗಿಸುತ್ತಿದೆ. ಅದರಲ್ಲೂ ಸಾರಾ ಅಲಿಖಾನ್ ಮತ್ತು ಜಾಹ್ನವಿ ಕಪೂರ್ ಜೊತೆ ನಡೆಸಿದ ಸಂದರ್ಶನದಲ್ಲಿ ಹತ್ತು ಹಲವು ಬೆಚ್ಚಿ ಬೀಳಿಸುವಂತಹ ವಿಷಯಗಳನ್ನು ಕರಣ್ ಹೊರ ಹಾಕಿದ್ದಾರೆ. ತಮ್ಮ ಮುಂದೆ ಕೂತಿರುವುದು ತಮ್ಮ ಮಗಳ ವಯಸ್ಸಿನ ಇಬ್ಬರು ಹುಡುಗಿಯರು ಎನ್ನುವುದನ್ನೂ ಮರೆತು ಕರಣ್ ಪ್ರಶ್ನೆಗಳನ್ನು ಕೇಳಿದ್ದಾರೆ.

ಮೊದಲ ಕಂತಿನಲ್ಲಿ ಸಾರಾ ಅಲಿಖಾನ್ ಮತ್ತು ಜಾಹ್ನವಿ ಕಪೂರ್ ಅವರ ಎಕ್ಸ್ ಬಾಯ್ ಫ್ರೆಂಡ್ ಬಗ್ಗೆ ಮಾತನಾಡಿದ್ದ ಕರಣ್, ಈ ಬಾರಿ ಎಕ್ಸ್ ಬಾಯ್ ಫ್ರೆಂಡ್ ಜೊತೆ ಸೆಕ್ಸ್ ಮಾಡಲು ಆಸಕ್ತಿ ಹೊಂದಿದ್ದೀರಾ ಎಂದು ಪ್ರಶ್ನೆ ಮಾಡುವ ಮೂಲಕ ಇಬ್ಬರನ್ನೂ ಮುಜುಗರಕ್ಕೀಡು ಮಾಡಿದ್ದಾರೆ. ತನ್ನ ಮುಂದಿ ಕೂತಿರುವವರು ಚಿಕ್ಕ ವಯಸ್ಸಿನ ನಟಿಯರು ಎನ್ನುವುದನ್ನೂ ಮರೆತು ಬೋಲ್ಡ್ ಆಗಿಯೇ ಪ್ರಶ್ನೆ ಕೇಳಿರುವ ಕರಣ್ ಜೋಹಾರ್, ‘ನಿಮ್ಮ ಎಕ್ಸ್ ಗಳ ಜೊತೆ ಸೆಕ್ಸ್ ಮಾಡುವುದಕ್ಕೆ ಆಸಕ್ತಿ ಹೊಂದಿದ್ದೀರಾ?’ ಎಂದು ಪ್ರಶ್ನೆ ಕೇಳುತ್ತಿದ್ದಂತೆಯೇ ಇಬ್ಬರೂ ಕೆಲ ಕ್ಷಣ ಮೌನಕ್ಕೆ ಜಾರಿದ್ದಾರೆ. ಇದನ್ನೂ ಓದಿ:ಅವಳಿ ಮಕ್ಕಳಿಗೆ ತಾಯಿಯಾಗಲಿದ್ದಾರಾ ಆಲಿಯಾ: ರಣ್‌ಬೀರ್‌ ಕೊಟ್ರು ಬ್ರೇಕಿಂಗ್‌ ನ್ಯೂಸ್

ಕರಣ್ ಈ ರೀತಿಯ ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ಕನಸು ಮನಸಲ್ಲೂ ಎಣಿಸಿರದ ಆ ಯುವ ನಟಿಯರು ಸಾವರಿಸಿಕೊಂಡು ಸಾರಾ ‘ನೋ’ ಎಂದರೆ, ಜಾಹ್ನವಿ ಈ ಕುರಿತು ಮಾತನಾಡದೇ ಸುಮ್ಮನಾಗಿ ಬಿಡುತ್ತಾರೆ. ಆದರೂ, ಕರಣ್ ಸುಮ್ಮನಿರುವುದಿಲ್ಲ. ಮತ್ತೆ ಮತ್ತೆ ಆ ವಿಷಯವನ್ನೇ ಕೆದುಕುವುದಕ್ಕೆ ಪ್ರಯತ್ನಿಸುತ್ತಾರೆ. ಈ ಹಿಂದೆಯೂ ಕೂಡ ಈ ಇಬ್ಬರೂ ಅಣ್ಣ ತಮ್ಮಂದಿರ ಜೊತೆ ಡೇಟಿಂಗ್ ಮಾಡುತ್ತಿದ್ದರು ಎನ್ನುವ ವಿಷಯವನ್ನು ಇದೇ ಶೋನಲ್ಲಿ ಕರಣ್ ಬಹಿರಂಗ ಪಡಿಸಿದ್ದರು.

Live Tv

Leave a Reply

Your email address will not be published.

Back to top button